ಹಾಸನ: ತಾವು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಂಬಂಧ ಇದುವರೆಗೆ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಹಾಸನ ತಾಲೂಕಿನ ಚನ್ನಂಗಿ ಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆಗೆ ಸ್ಪರ್ಧಿಸಲು ಎಲ್ಲಾ ಕಡೆಯಿಂದಲೂ ಒತ್ತಾಯ ಬರುತ್ತಿದೆ. ಮಂಡ್ಯ ತುಮಕೂರು, ಚಿಕ್ಕಬಳ್ಳಾಪುರ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದಲೂ ಸ್ಪರ್ಧೆ ಮಾಡಬೇಕೆಂಬ ಒತ್ತಾಯ ಹಿತೈಷಿ ಅಭಿಮಾನಿಗಳಿಂದ ಕೇಳಿಬರುತ್ತಿದೆ.
ನೀವು ಸ್ಪರ್ಧಿಸಿ ಗೆದ್ದರೆ ಕೇಂದ್ರ ಮಂತ್ರಿಯಾಗುತ್ತೀರಾ ಎಂದು ಹೇಳುತ್ತಿದ್ದಾರೆ. ನನ್ನನ್ನು ಯಾಕೆರಾಜ್ಯದಿಂದ ಕೇಂದ್ರಕ್ಕೆ ಏಕೆ ಕಳಿಸುತ್ತೀರಾ? ಎಂದಿರುವ ಕುಮಾರಸ್ವಾಮಿ ಮತ್ತೊಂದೆಡೆ ಹಾಸನದಿಂದ ದೇವೇಗೌಡರು ನಿಲ್ಲದಿದ್ದರೆ ನೀವೇ ಸ್ಪರ್ಧಿಸಿ ಎನ್ನುತ್ತಿದ್ದಾರೆ. ಇದುವರೆಗೆ ನಾನು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.