ಬೆಂಗಳೂರು: ಪ್ರಜ್ವಲ್ ರೇವಣ್ಣರ ವಿಡಿಯೋ ವೈರಲ್ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯ ಬಿಜೆಪಿ ನಾಯಕರ ಮೇಲೆ ಹೆಚ್.ಡಿ.ಕುಮಾರಸ್ವಾಮಿ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.ಮೊದಲು ಪ್ರೀತಂಗೌಡ ಹಾಗೂ ದೇವರಾಜೇಗೌಡರನ್ನು ಕರೆಸಿ ವಿಚಾರಣೆ ಮಾಡಿರಿ ಎಂದು ಕೇಳಿರುವ ಅವರು ವಿಡಿಯೋ ವೈರಲ್ ಆಗಿದ್ಹೇಗೆ? ಎಂಬುದನ್ನು ಅರಿತು ಮಾಹಿತಿ ಪಡೆಯುವಂತೆ ಕೋರಿದ್ದಾರೆ ಎನ್ನಲಾಗಿದೆ.
ಹಾಸನದಲ್ಲಿ ತೀವ್ರ ಸಂಚಲನ ಸೃಷ್ಠಿಸಿರುವ ಸಂಸದ ಪ್ರಜ್ವಲ್ ರೇವಣ್ಣರ ವಿಡಿಯೋ ಪ್ರಕರಣ ಇಡೀ ರಾಜ್ಯಕ್ಕೆ ರಾಜ್ಯವೇ ವಿಡಿಯೋ ವಿಚಾರದಲ್ಲಿ ಚರ್ಚೆ ನಡೆಸುತ್ತಿದೆ. ಕಾಂಗ್ರೆಸ್ನ ನಾಯಕರಿಗೆ ಈ ವಿಡಿಯೋ ಅಸ್ತ್ರವಾಗಿದೆ. ಮೊದಲು ಈ ವಿಡಿಯೋ ಬಿಡುಗಡೆಯಾಗಿದ್ದು ಹೇಗೆ? ಅದನ್ನು ತಿಳಿಯಬೇಕು. ಡಿಸೆಂಬರ್ ತಿಂಗಳಲ್ಲಿಯೇ ದೇವರಾಜೇಗೌಡ ಪತ್ರ ಬರೆದಿದ್ದು ನಿಜವೇ? ಪತ್ರ ಬಂದಿದ್ರೆ, ನಮ್ಮ ಗಮನಕ್ಕೆ ಅದನ್ನು ಏಕೆ ತಂದಿರಲಿಲ್ಲ. ಪತ್ರಗಳು ಮಾಧ್ಯಮಗಳ ಕೈ ಸೇರಿದೆ. ಪತ್ರದಲ್ಲಿರುವ ಇಂಚಿಂಚೂ ಮಾಹಿತಿಯೂ ಸತ್ಯಕ್ಕೆ ಹತ್ತಿರವಾಗಿದೆ.
ಖುದ್ದು ಪತ್ರದಲ್ಲಿ ನನ್ನ ಬಳಿ ದಾಖಲಾತಿಗಳು ಇದೆ ಎಂದು ದೇವರಾಜೇಗೌಡ ತಿಳಿಸಿದ್ದಾರೆ. ಹೀಗಾದ್ದಗಲೂ ನೀವು ಅದನ್ನು ಪರಾಮರ್ಶೆ ಮಾಡಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.ಕಾರ್ತಿಕ್ ಎಂಬ ಚಾಲಕ ನಾನು ಪೆನ್ಡ್ರೈವ್ ಒಂದು ಕಾಪಿಯನ್ನ ದೇವರಾಜೇಗೌಡರಿಗೆ ನೀಡಿದ್ದೇನೆ ಅಂತಾನೆ. ಅವನ ಮಾಧ್ಯಮ ಹೇಳಿಕೆಯನ್ನು ಗಮನಿಸಿದ್ದೇನೆ. ಆತನನ್ನು ಬೇರೆಡೆಗೆ ಕಾಂಗ್ರೆಸ್ ನಾಯಕರೇ ಶಿಫ್ಟ್ ಮಾಡಿದ್ದಾರೆ.
ಮೊದಲು ನೀವು ಪ್ರೀತಂಗೌಡ ಹಾಗೂ ದೇವರಾಜೇಗೌಡರನ್ನು ಕರೆಸಿ ವಿಚಾರಣೆ ಮಾಡಿ. ಬಳಿಕ ಈ ಪ್ರಕರಣದಲ್ಲಿ ಮುಂದಿನ ನಿರ್ಧಾರ ತೆಗೆದುಕೊಳ್ಳೋಣ ಎಂದು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.ಪೆನ್ಡ್ರೈವ್ ವಿಚಾರದಲ್ಲಿ ಖಡಕ್ ಆಗಿ ಬಿಜೆಪಿ ನಾಯಕರನ್ನು ಒತ್ತಾಯ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.