This is the title of the web page
This is the title of the web page

ಟಾಪ್ಸ್ ಯೋಜನೆಗೆ ಅತನು, ಮೆಹುಲಿ ಸೇರ್ಪಡೆ

ನವದೆಹಲಿ: ಆರ್ಚರಿ ಪಟು ಅತನು ದಾಸ್ ಮತ್ತು ಶೂಟರ್ ಮೆಹುಲಿ ಘೋಷ್ ಅವರನ್ನು ಟಾರ್ಗೆಟ್ ಒಲಿಂಪಿಕ್  ಪೋಡಿಯಂ ಯೋಜನೆಗೆ (ಟಾಪ್ಸ್) ಮರು ಸೇರ್ಪಡೆ ಮಾಡಲಾಗಿದೆ.

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕೂಟಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವುದರಿಂದ ಅತನು ಅವರಿಗೆ ಮತ್ತೆ ಅವಕಾಶ ಲಭಿಸಿದೆ.ಟರ್ಕಿಯಲ್ಲಿ ಈಚೆಗೆ ನಡೆದಿದ್ದ ವಿಶ್ವಕಪ್‍ನ ರಿಕರ್ವ್ ವಿಭಾಗದಲ್ಲಿ ಅವರು ನಾಲ್ಕನೇ ಸ್ಥಾನ ಗಳಿಸಿದ್ದರು.

ಮೆಹುಲಿ ಅವರು ರಾಷ್ಟ್ರೀಯ ಶೂಟಿಂಗ್ ಟ್ರಯಲ್ಸ್‍ನಲ್ಲಿ 10 ಮೀ. ಏರ್ ರೈಫಲ್ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದ್ದರು. 15 ವರ್ಷದ ಯುವ ಶೂಟರ್ ತಿಲೋತ್ತಮ ಸೇನ್ ಅವರಿಗೂ ಅವಕಾಶ ನೀಡಲಾಗಿದೆ.ಟಾಪ್ಸ್ ಯೋಜನೆಗೆ ಹೊಸದಾತಿ 27 ಕ್ರೀಡಾಪಟುಗಳನ್ನು ಸೇರಿಸಲಾಗಿದ್ದು, ಈ ಯೋಜನೆಯಡಿ ತರಬೇತಿ ಪಡೆಯುತ್ತಿರುವವರ ಒಟ್ಟು ಸಂಖ್ಯೆ 270ಕ್ಕೆ ಏರಿಕೆಯಾಗಿದೆ.