ಬೆಂಗಳೂರು: ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಸರಿಯಾಗಿ ವಿಚಾರಣೆ ಮತ್ತು ತನಿಖೆ ಮಾಡದೆ ಹಣದ ಆಮಿಷಕ್ಕೆ ಒಳಗಾಗಿ ವ್ಯಕ್ತಿಯನ್ನು ಬಿಟ್ಟಿದ್ದ ಕಾರಣಕ್ಕೆ ಸಂಜಯ್ ನಗರ ಪೊಲೀಸ್ ಠಾಣೆಯ ಮುಖ್ಯಪೇದೆ ಹಾಗೂ ಸಾರ್ವಜನಿಕ ಸ್ನೇಹಿತರುಗಳನ್ನು ಸೇರಿ ಒಟ್ಟು ಮೂರು ಜನ ವ್ಯಕ್ತಿಗಳನ್ನು ಬಂಧಿಸಿ, ಸಂಜಯನಗರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಸಂಜಯನಗರ ಪೊಲೀಸ್ ಠಾಣೆಯ ಮುಖ್ಯಪೇದೆ ಪುನೀತ್ ಹಾಗೂ ಆತನ ಸ್ನೇಹಿತರುಗಳಾದ ಶಿವಸಾಗರ ಮತ್ತು ಅರ್ಜುನ್ ರವರುಗಳ ಮೇಲೆ ಎಫ್ ಐ ಆರ್ ದಾಖಲಿಸಿ, ಹೆಡ್ ಕಾನ್ಸ್ಟೇಬಲ್ ನನ್ನು ಅಮಾನತುಗೊಳಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಲಯದಿಂದ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ತನಿಖೆ ಕೈಗೊಂಡಿರುತ್ತೇವೆ ಎಂದು ಉತ್ತರ ವಿಭಾಗದ ಡಿಸಿಪಿ ತಿಳಿಸಿದರು.



