ದೊಡ್ಡಬಳ್ಳಾಪುರ: ಮಾನಸಿಕ ಹಾಗೂ ದೈಹಿಕ ಆರೋಗ್ಯದ ಸಮತೋಲನಜೀವನೋತ್ಸಾಹ ವೃದ್ದಿಗೆ ಪೂರಕವಾಗಿದ್ದು, ಯುವತಿಯರಲ್ಲಿ ಆರೋಗ್ಯ ಕಾಳಜಿ
ಅಗತ್ಯ ಎಂದು ಸ್ತ್ರೀರೋಗ ತಜ್ಞೆ ಡಾ.ಆರ್.ಇಂದಿರಾ ಅಭಿಪ್ರಾಯಪಟ್ಟರು.
ಇಲ್ಲಿನ ಶ್ರೀ ದೇವರಾಜ ಅರಸ್ವ್ಯವಹಾರ ನಿರ್ವಹಣಾ ಮಹಾವಿದ್ಯಾ ಲಯದ ಆಂತರಿಕ ಗುಣಮಟ್ಟ ಭರವಸೆ ಕೋಶ-ಐಕ್ಯೂಎಸಿ ಸಹಯೋಗದಲ್ಲಿ ಸ್ಪೂರ್ತಿ ಮಹಿಳಾ ವೇದಿಕೆಯಿಂದ ನಡೆದ ಮಹಿಳಾ ದಿನಾಚರಣೆ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿನ ಹಲವು ಪ್ರಕರಣಗಳನ್ನು ಗಮನಿಸಿದಾಗ ಯುವಜನರು ಹಲವು ಸಂದರ್ಭಗಳಲ್ಲಿ ಖಿನ್ನತೆಯಿಂದ ಬಳಲುತ್ತಿರುವುದು ಕಂಡು ಬರುತ್ತದೆ. ಸ್ಪೂರ್ತಿದಾಯಕ ಬದುಕು ರೂಢಿಸಿಕೊಳ್ಳಲು ನಿಯಮಿತ ಆಹಾರ, ನಿಯಮಿತ ಆರೋಗ್ಯ, ಯೋಗ, ಧ್ಯಾನ ಇತ್ಯಾದಿ ಚಟುವಟಿಕೆಗಳನ್ನು ರೂಢಿಸಿಕೊಳ್ಳುವುದು ಅಗತ್ಯ. ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯರಾಗಬೇಕು ಎಂದು ತಿಳಿಸಿದರು.
ವಯೋಸಹಜವಾಗಿ ನಡೆಯುವ ದೈಹಿಕ ಬದಲಾವಣೆಗಳ ಬಗ್ಗೆ ಅಗತ್ಯ ಜಾಗೃತಿ ಮುಖ್ಯ. ಇದು ಮಅನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಸ್ಪಷ್ಟತೆಗೂ ಇರಬೇಕು ಎಂದು ಅಭಿಪ್ರಾಯಪಟ್ಟರು.ಪ್ರಾಂಶುಪಾಲ ಡಾ.ಆರ್.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಕೆ.ಆರ್.ರವಿಕಿರಣ್, ಉಪಪ್ರಾಂಶುಪಾಲ ಕೆ.ದಕ್ಷಿಣಾಮೂರ್ತಿ, ಕನ್ನಡ ವಿಭಾಗ ಮುಖ್ಯಸ್ಥ ಡಾ.ಎಂ.ಚಿಕ್ಕಣ್ಣ, ಮಹಿಳಾ ವೇದಿಕೆ ಸಂಯೋಜಕಿ ಉಷಾಶ್ರೀ, ಸಹ ಸಂಯೋಜಕಿ ಮಧುಶ್ರೀ, ಪಿ.ಚೈತ್ರ, ಎಚ್.ಕೆ.ಪ್ರೇಮ, ಎಸ್.ನಂದನ, ಸ್ವಾತಿ, ರಮ್ಯಶ್ರೀ, ಶ್ವೇತ, ಭಾನುಶ್ರೀ, ಸಂಧ್ಯಾ, ಕೀರ್ತನ, ಭವ್ಯ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮದ ಬಳಿಕ ವಿದ್ಯಾರ್ಥಿನಿಯರ ರಾಂಪ್ವಾಕ್ ಆಯೋಜಿಸಲಾಗಿತ್ತು.