ತಿಪಟೂರು: ಮನುಷ್ಯನಿಗೆ ಹಣಕ್ಕಿಂತ ಆರೋಗ್ಯ ಅತಿಮುಖ್ಯವಾಗಿದ್ದು ಒತ್ತಡದ ಜೀವನದಲ್ಲಿ ಆನಾರೋಗ್ಯಕ್ಕೆ ಒಳಗಾಗುವಂತ್ತಾಗಿದ್ದು, ಪ್ರತಿಯೊಬ್ಬರು ತಮ್ಮ ಆರೋಗ್ಯರಕ್ಷಣೆ ಕಡೆ ಗಮನ ಹರಿಸಬೇಕು ಎಂದು ಈಚನೂರು ಗ್ರಾಮಪಂಚಾಯ್ತಿ ಅಧ್ಯಕ್ಷ ಉದಯ್ ಕುಮಾರ್.ಕೆ.ಎನ್ ತಿಳಿಸಿದರು.
ತಾಲ್ಲೋಕಿನ ಈಚನೂರು ಗ್ರಾಮ ಪಂಚಾಯ್ತಿ ಆವರಣದಲ್ಲಿ ಈಚನೂರು ಗ್ರಾಮಪಂಚಾಯ್ತಿ,ಆದಿಚುಂಚನಗಿರಿ ಆಸ್ಪತ್ರೆ ನಾಗಮಂಗಲ ಸಹಯೋಗದಲ್ಲಿ ಆಯೋಜಿಸಿದ ಬೃಹತ್ ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಭಿರ ವನ್ನ ಉದ್ಘಾಟಿಸಿ ಮಾತನಾಡಿದ ಅವರು ಮನುಷ್ಯನ ಬದಲಾದ ಜೀವನ ಶೈಲಿ ಹಾಗೂ ಒತ್ತಡದ ಜೀವನದಿಂದ್ದಾಗಿ ಅನೇಕ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದೇವೆ, ಹಣಕ್ಕಿಂತ ಆರೋಗ್ಯಮುಖ್ಯವಾಗಿದ್ದು ,ಪ್ರ
ತಿಯೊಬ್ಬರೂ ತಮ್ಮ ಆರೋಗ್ಯ ರಕ್ಷಣೆಗೆ ಅಧ್ಯತೆ ನೀಡಬೇಕು,ತಮ್ಮ ಆಹಾರ ಹಾಗೂ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ನಗರದ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣುತ್ತಿದ್ದ ಬಿ.ಪಿ ಶುಗರ್ ಗ್ರಾಮೀಣ ಪ್ರದೇಶಗಳಲೂ ಹೆಚ್ಚಾಗತೊಡಗಿದೆ, ಪ್ರತಿಯೊಬ್ಬರೂ ಆರೋಗ್ಯ ರಕ್ಷಣೆಗೆ ಅಧ್ಯತೆ ನೀಡಬೇಕು.
ಆದಿಚುಂಚನಗಿರಿ ವೈದ್ಯಕೀಯ ಮಹಾವಿಧ್ಯಾಲಯ ಉಚಿತ ಆರೋಗ್ಯ ಶಿಭಿರ ನಡೆಸುವ ಮೂಲಕ ಸಾವಿರಾರು ಗ್ರಾಮೀಣ ಜನರ ಆರೋಗ್ಯ ರಕ್ಷಣೆ ನೀಡುವ ಜೊತೆಗೆ ಬಡವರ ಬಾಳಿನಲ್ಲಿ ಬೆಳಕಾಗಿದೆ.ನಮ್ಮ ಗ್ರಾಮಪಂಚಾಯ್ತಿಯಲ್ಲಿ ಉಚಿತ ಆರೋಗ್ಯ ಶಿಭಿರ ನಡೆಸುತ್ತಿರುವುದು ಸಂತೋಷದ ವಿಚಾರ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಚುಂಚನಗಿರಿ ಆಸ್ಪತ್ರೆ ಮನೋರೋಗ ತಜ್ಞರಾದ ಡಾ.ವಿಜಯ್ ಕುಮಾರ್. ಸದಸ್ಯರಾದ ಕಾಂತರಾಜು. ನವೀನ್ ಕುಮಾರ್. ಪುಷ್ಪ.ಸುಧಾ. ಗೀತಾ. ಉಮೇಶ್ ಅಭಿವೃದ್ದಿ ಅಧಿಕಾರಿ ಲತಾ ಸೇರಿ ಇತರರಿದ್ದರು.