ಬೆಂಗಳೂರು: ಎಲ್ಲ ವಿಜ್ಞಾನ ಗಳಿಗಿಂತ ಆರೋಗ್ಯ ವಿಜ್ಞಾನ ಮುಖ್ಯವಾದುದು, ಅದರ ಬಗ್ಗೆ ಜನಮಾನಸದಲ್ಲಿ ಜಾಗೃತಿ ಮೂಡಿಸಬೇಕು ಎಂದು ಮನೋವೈದ್ಯರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯಾಧ್ಯಕ್ಷರಾದ ಡಾ ಸಿ ಆರ್ ಚಂದ್ರಶೇಖರ್ ನುಡಿದರು.
ಅವರು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ನಗರ ಜಿಲ್ಲಾ ಶಾಖೆ ಕಸಾಪ ಆವರಣದ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಧಾನಸಭಾ ಕ್ಷೇತ್ರಗಳ ಅಧ್ಯಕ್ಷರಿಗೆ ಹೊಣೆಗಾರಿಕೆ ಪತ್ರ ನೀಡಿ ಮಾತನಾಡುತ್ತಿದ್ದರು. ಶೇ.80 ರಷ್ಟು ಕಾಯಿಲೆಗಳನ್ನು ನಾವೇ ತಂದುಕೊಳ್ಳುತ್ತೇವೆ, ಕಲುಷಿತ ಆಹಾರ, ಕೆಟ್ಟ ಪರಿಸರ, ಮಾನಸಿಕ ಒತ್ತಡಗಳು ನಮಗೆ ವಿವಿಧ ರೀತಿಯ ರೋಗವನ್ನುಂಟು ಮಾಡುತ್ತವೆ, ಆದ್ದರಿಂದ ನಮ್ಮ ಸ್ವಾಸ್ಥ್ಯವನ್ನು ನಾವೇ ಕಾಪಾಡಿಕೊಳ್ಳಬೇಕು, ಇದಕ್ಕಾಗಿ ವೈಜ್ಞಾನಿಕ ಮನೋಭಾವ ಹೊಂದಬೇಕು ಎಂದು ಅವರು ನುಡಿದರು.
ಜ್ಞಾನ ವಿಜ್ಞಾನ ಸಮಿತಿಯ ಅಧ್ಯಕ್ಷತೆ ಹೊಣೆಗಾರಿಕೆ ತೆಗೆದುಕೊಂಡಿರುವವರು ಮೊದಲು ಜ್ಞಾನಿಗಳಾಗಬೇಕು, ಇದಕ್ಕಾಗಿ ಸತತ ಅಧ್ಯಯನ ಮಾಡಬೇಕು, ಆಗಮಾತ್ರ ಮೌಢ್ಯಾಚರಣೆಗಳಿಂದ, ಮೋಸ ಮಾಡುವವರಿಂದ ದೂರ ಇರಲು ಸಾಧ್ಯ ಎಂದು ಅವರು ನುಡಿದರುಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದ ಕಸಾಪ ಕೋಶಾಧ್ಯಕ್ಷರಾದ ಪಟೇಲ್ ಪಾಂಡು ಮಾತನಾಡಿ ಹೊಣೆಗಾರಿಕೆ ವಹಿಸಿಕೊಂಡವರು ಕ್ರಿಯಾಶೀಲರಾಗಿ ಕೆಲಸ ಮಾಡುವ ಮೂಲಕ ಆ ಹುದ್ದೆಗೆ ನ್ಯಾಯ ಒದಗಿಸಬೇಕು, ಡಾ. ಸಿ ಆರ್ ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯದಾದ್ಯಂತ ಪ್ರಭಲವಾಗಿ ಬೆಳೆಯಲಿ, ಅದಕ್ಕೆ ಕಸಾಪ ಸಹಕಾರ ಸದಾ ಇರುತ್ತದೆ ಎಂದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಕಾರ್ಯದರ್ಶಿ ಈ. ಬಸವರಾಜು ಪ್ರಾಸ್ತಾವಿಕವಾಗಿ ಮಾತನಾಡಿ ಬೆಂಗಳೂರು ನಗರದಲ್ಲಿ ಸಂಘಟನೆ ಗಟ್ಟಿಯಾದಲ್ಲಿ ಇಡೀ ರಾಜ್ಯಕ್ಕೆ ತಲುಪಲಿದೆ ಎಂದರು ಕಸಾಪ ಗೌ. ಕಾರ್ಯದರ್ಶಿ ನೆ ಭ ರಾಮಲಿಂಗಾಶೆಟ್ಡಿ ನೂತನ ಅಧ್ಯಕ್ಷರುಗಳಿಗೆ ಶುಭ ಹಾರೈಸಿದರು.ಜ್ಞಾನ ವಿಜ್ಞಾನ ಸಮಿತಿಯ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ನಾ. ಶ್ರೀಧರ್ ಮಾತನಾಡಿ ಬೆಂಗಳೂರು ವಿಜ್ಞಾನ ತಂತ್ರಜ್ಞಾನ ಕ್ಷೇತ್ರದ ರಾಜಧಾನಿಯಾಗಿದ್ದು ಎಲ್ಲ 28 ವಿದಾನಸಭಾ ಕ್ಷೇತ್ರಗಳಲ್ಲಿ ಸಮಿತಿಯನ್ನು ಬಲಪಡಿಸಲಾಗುವುದು ಎಂದರು. ಪ್ರಾರಂಭದಲ್ಲಿ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಎಂ. ಲಕ್ಷ್ಮೀನರಸಿಂಹ ಸ್ವಾಗತಿಸಿದರು. ವಂದಿಸಿದರು. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ 28 ವಿದಾಸಭಾ ಕ್ಷೇತ್ರಗಳ ಅಧ್ಯಕ್ಷರು ಹೊಣೆಗಾರಿಕೆ ಪತ್ರ ಸ್ವೀಕರಿಸಿದರು.