ತಿ.ನರಸೀಪುರ:ಪಟ್ಟಣ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಬಣ್ಣ ಹಾಗು ಮರುಬಳಕೆ ಎಣ್ಣೆ ಹಾಕಿ ಆಹಾರ ಪದಾರ್ಥಗಳು ತಯಾರಿಸಿ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಆರೋಗ್ಯ ಇಲಾಖೆ ಆಹಾರ ನಿರೀಕ್ಷಕ ಸುಮತ್ ದಾಳಿ ನಡೆಸಿ ಆಹಾರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿದರು.
ಪಟ್ಟಣದ ಹಳೆಯ ತಿರುಮಕೂಡಲು ಸರ್ಕಲ್ ಹಾಗೂ ಮಾರ್ಕೆಟ್ ರಸ್ತೆಯಲ್ಲಿ ಇರುವ ಫಾಸ್ಟ್ ಫುಡ್ ಹಾಗೂ ಸಿಹಿ ತಿನಿಸು ಅಂಗಡಿಗಳಲ್ಲಿ ತಿನ್ನಲು ಯೋಗ್ಯವಲ್ಲದ ಮಾರಾಟ ಮಾಡುತ್ತಿದ್ದ ಸಿಹಿ ತಿನಿಸುಗಳು ಹಾಗೂ ಕಬಾಬ್ ಮಾದರಿಗಳನ್ನು ಸಂಗ್ರಹಿಸಿ ನೋಟಿಸ್ ನೀಡಿ ಪ್ರಯೋಗಾಲಯಕ್ಕೆ ಕಳಿಸಲಾಯಿತು.
ನಂತರ ತಾಲೂಕು ಆಹಾರ ನಿರೀಕ್ಷಕ ಸುಮಂತ್ ಮಾತನಾಡಿ ಪ್ರಯೋಗಾಲಯಕ್ಕೆ ಕಳಿಸಿರುವ ಆಹಾರ ಪದಾರ್ಥ ಮಾದರಿಗಳು ತಿನ್ನಲು ಯೋಗ್ಯವಲ್ಲ ಎಂದು ವರದಿ ಬಂದರೆ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.
ನಿಷೇಧಿತ ಬಣ್ಣಬಳಕೆ ಮಾಡಿ ತಯಾರಿಸುತ್ತಿದ್ದ ಮೀನು ಕಬಾಬ್ ಗೋಬಿ ಪಾನಿಪುರಿ ಗಳನ್ನು ತಯಾರಿಸಬಾರದು.ತಿನ್ನಲು ಯೋಗ್ಯವಲ್ಲದ ಆಹಾರ ಪದಾರ್ಥಗಳನ್ನು ಸಾರ್ವಜನಿಕರಿಗೆ ನೀಡುವುದು ಕಾನೂನುನಡಿ ಶಿಕ್ಷರ್ಹ ಅಪರಾಧ. ನಾವೆಲ್ಲರೂ ಆರೋಗ್ಯವಂತರಾಗಿರಬೇಕೆಂದರೆ ಉತ್ತಮವಾದ ನೈಸರ್ಗಿಕ ಬಳಕೆಯ ಆಹಾರವನ್ನು ಸೇವಿಸಬೇಕು ಎಂದು ಹೇಳಿದರು.