ದೇವನಹಳ್ಳಿ: ಯಾವುದೇ ವಯಸ್ಸಿನ ಇಂದಿನ ಜನರಿಗೆ ಆರೋಗ್ಯಕರವಾದ ನಡಿಗೆ ಎಂಬುದು ಒಂದು ಒಳ್ಳೆಯ ಹವ್ಯಾಸ ಅದನ್ನು ಪ್ರತಿಯೊಬ್ಬರೂ ದಿನನಿತ್ಯ ಮಾಡಬೇಕು ,ಮನುಷ್ಯನ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿ ಎಂದು ಆಕಾಶ್ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮುನಿರಾಜು ಸಲಹೆ ನೀಡಿದರು.
ದೇವನಹಳ್ಳಿ ಪಟ್ಟಣದ ಪ್ರಸನ್ನ ಹಳ್ಳಿ ರಸ್ತೆಯಲ್ಲಿರುವ ಎಜಿಐ ಆಕಾಶ್ ಗ್ರೂಪ್ಆಫ್ ಇನ್ಸಿಟ್ಯೂಟ್ ಸಂಸ್ಥೆಯ ವತಿಯಿಂದ ಸಂಸ್ಥಾಪನಾ ದಿನದ ಹಿನ್ನಲೆಯಲ್ಲಿ ಬೃಹತ್ ಹೆಲ್ತ್ ಮ್ಯಾರಥಾನ್ (ಆರೋಗ್ಯದ ಓಟ)ಅನ್ನು ಹಮ್ಮಿಕೊಳ್ಳಲಾಗಿತ್ತು ಹಾಗೂ ವಿಜೇತರಿಗೆ ವೇದಿಕೆಯಲ್ಲಿ ಪ್ರಶಸ್ತಿ ಪತ್ರ, ಪದಕ ಮತ್ತು ನಗದು ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು.
ಓಟದ ಸ್ಪರ್ಧೆಯಲ್ಲಿ ಆಕಾಶ್ ಗ್ರೂಪ್ಸ್ನ ಉಪಾಧ್ಯಕ್ಷ ಅಮರ್ ಗೌಡ ಮಾತನಾಡಿ ಆಕಾಶ್ ಸಂಸ್ಥೆಯ ಆಕಾಶೋತ್ಸವ ಕಾರ್ಯಕ್ರಮದ ಮುಖ್ಯ ಭಾಗವಾಗಿ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ, ವಯಸ್ಸಿನ ಅಂತರವಿಲ್ಲದೆ ಸಾವಿರಾರು ಜನರು ಪಾಲ್ಗೊಂಡಿರುವುದು ಸಂತಸದ ವಿಷಯವಾಗಿದೆ. ಇತ್ತೀಚಿನ ದಿನಗಳಲ್ಲಿ ಜನರು ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ತೀರ ಕಡಿಮೆಯಾಗುತ್ತಿದ್ದು, ಹಲವಾರು ದೈಹಿಕ -ಮಾನಸಿಕ ಕಾಯಿಲೆಗಳಿಗೆ ಬಹುಬೇಗ ಗುರಿಯಾಗುತ್ತಿದ್ದಾರೆ, ಹಾಗಾಗಿ ನಿಯಮಿತ ವ್ಯಾಯಾಮ ಮತ್ತು ನಡಿಗೆಯ ಮೂಲಕವಾದರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಆಕಾಶ್ ಗ್ರೂಪ್ಸ್ನ ಮುಖ್ಯಸ್ಥೆ ಪುಷ್ಪಮುನಿರಾಜು ಮತ್ತು ಕುಟುಂಬಸ್ಥರು, ಆಕಾಶ್ ಸಂಸ್ಥೆಯ ಮುಖ್ಯಸ್ಥರಾದ ಡಾ.ಬ್ರಿಜೇಶ್, ಸಿಬ್ಬಂದಿಗಳಾದ ಸಂದೀಪ್, ಪ್ರದೀಪ್ ಸೇರಿದಂತೆ ಸಂಸ್ಥೆಯ ಬೋಧಕ- ಬೋಧಕ್ಕೇತರ ಸಿಬ್ಬಂದಿಗಳು ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.