ಬಂಗಾರಪೇಟೆ: ಬಿಸಿಲಿನ ತಾಪವು ಕಳೆದ ಎರಡು ತಿಂಗಳಿನಿAದ ದಿನೇ ದಿನೇ ಹೆಚ್ಚಾಗುತ್ತಿದ್ದರಿಂದ ಉಷ್ಣಾಂಶವು ಹೆಚ್ಚಾಗಿ ಜನರು ವಾಸಿಸಲು ಕಷ್ಠವೇ ಆಗಿದ್ದ ಪರಿಸ್ಥಿತಿಯಲ್ಲಿ ಭಾನುವಾರ ರಾತ್ರಿ ಭರ್ಜರಿ ಮಳೆಯಾಗಿದ್ದರಿಂದ ವಾತಾವರಣ ಸ್ವಲ್ಪಮಟ್ಟಿಗೆ ತಣ್ಣಗಾಗಿದ್ದರಿಂದ ಜನರಲಿ ಸಂತಸ ಮೂಡಿದ್ದರೂ ಸಹ ಕೆಲವು ಕಡೆ ರೈತರ ಬೆಳೆಗಳಿಗೆ ಬಿರುಗಾಳಿ ಸಮೇತವಾದ ಮಳೆಗೆ ಅಪಾರ ನಷ್ಠವೂ ಉಂಟಾಗಿದೆ.
ತಾಲೂಕಿನ ಮಾವಹಳ್ಳಿ ಗ್ರಾಮದ ರೈತ ಕೆ.ಆರ್.ಶ್ರೀಪಾಲ್ ಬಿನ್ ರಂಗೇಗೌಡ ಎಂಬುವವರ ಸರ್ವೆ ನಂ.131/1 ರಲ್ಲಿನ 2.04 ಎಕರೆ ಜಮೀನಿನಲ್ಲಿ 10 ಲಕ್ಷ ಖರ್ಚು ಮಾಡಿ ಸಮೃದ್ದಿಯಾಗಿ ಬೆಳೆದಿದ್ದ ಬಾಳೆ ತೋಟವು ಕಟಾವು ಬರುವ ಮುಂಚೆಯೇ ಭಾನುವಾರ ರಾತ್ರಿ ಸುರಿದ ಬಿರುಗಾಳಿ ಸಮೇತ ಮಳೆಗೆ ನೆಲಕ್ಕೆ ಉರುಳಿದೆ. ಇದರಿಂದ ಈ ರೈತನಿಗೆ 20 ಲಕ್ಷಕ್ಕೂ ಹೆಚ್ಚು ನಷ್ಠ ಉಂಟಾಗಿದೆ. ಕಳೆದ ಒಂದು ವರ್ಷದ ಬೆಳೆಯಾಗಿರುವ ಬಾಳೆ ತೋಟವು ಚೆನ್ನಾಗಿ ಬೆಳೆಸಿದ್ದು, ಇನ್ನು ಒಂದು ತಿಂಗಳಲ್ಲಿ ಕಟಾವಿಗೆ ಬಂದಿದ್ದ ಬಾಳೆ ತೋಟವು ಸಂಪೂರ್ಣವಾಗಿ ನೆಲಕ್ಕೆ ಬಿದ್ದು ಹೋಗಿದೆ.
ಒಂದು ವರ್ಷದಿಂದ ಬೆಳೆಸಿದ್ದ ಬಾಳೆ ತೋಟಕ್ಕೆ 10 ಲಕ್ಷ ಖರ್ಚು ಮಾಡಲಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದೇ ಹೋಗಿರುವುದರಿಂದ ತೀವ್ರ ಆತಂಕ್ಕೆ ಒಳಗಾಗಿರುವ ರೈತ ಕೆ.ಆರ್.ಶ್ರೀಪಾಲ್ ಬಿನ್ ರಂಗೇಗೌಡ ಅವರು, ಈ ಬಗ್ಗೆ ಕಂದಾಯ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗ ನಷ್ಠ ಉಂಟಾಗಿರುವ ಬಗ್ಗೆ ಮಾಹಿತಿ ನೀಡಿದ್ದು, ಭಾನುವಾರ ರಾತ್ರಿ ಇದ್ದಕ್ಕಿದ್ದಂತೆ ಬಿರುಗಾಳಿ ಸಮೇತ ಮಳೆ ಬಂದಿದ್ದರಿAದ ಬಾಳೆ ತೋಟವು ನೆಲಕ್ಕೆ ಬಿದ್ದು ನಷ್ಠ ಉಂಟಾಗಿರುವುದರಿAದ ಸಂಬAಧಪಟ್ಟತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ನಷ್ಠಕ್ಕೆ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ಕಳೆದ ವರ್ಷವು ಮಳೆಯಾಶ್ರಿತ ಬೆಳೆಗಳನ್ನು ಬೆಳೆಯುವುದಕ್ಕೆ ಬೇಕಾಗಿದ್ದಷ್ಟುಮಾತ್ರ ಮಳೆಯಾಗಿತ್ತು. ಕರೆ-ಕುಂಟೆಗಳಿಗೆ ಅಲ್ಪಸ್ವಲ್ಪ ನೀರು ಬಂದಿತ್ತು. ಆದರೆ, ಗಣನೀಯ ರೀತಿಯಲ್ಲಿ ಮಳೆ ಆಗಿರಲಿಲ್ಲ. ಕೆರೆ-ಕುಂಟೆಗಳು ತುಮಬಿ ಹರಿಯಲಿಲ್ಲ. ಸಾಮಾನ್ಯವಾಗಿ ಯುಗಾದಿ ಮುಂಚೆಯೇ ಉತ್ತಮ ಮಳೆಯಾಗುತ್ತಿತ್ತು. ಆದರೆ, ಈ ಬಾರಿ ಯುಗಾದಿ, ಶ್ರೀರಾಮನವಮಿ ಕಳೆದರೂ ಮಳೆಯಾಗಿರಲಿಲ್ಲ. ಭಾನುವಾರ ಸಂಜೆ ಮಳೆ ಬರುವ ಸೂಚನೆ ಕಂಡುಬಂದರೂ ರಾತ್ರಿ 7.30ರಲ್ಲಿ ಗಟ್ಟಿಯಾದ ಮಳೆಯು ಬಂದಿದ್ದರಿಂದ ಜನರಲ್ಲಿ ಮಂದಹಾಸ ಮೂಡಿದೆ.
ಕಳೆದ ಎರಡು ತಿಂಗಳಿನಿಂದ ಮಾಧ್ಯಾಹ್ನದ ವೇಳೆ ಜನರು ಓಡಾಡಲು ತೀವ್ರ ಕಷ್ಠವೇ ಆಗಿತ್ತು. ಬಿಸಿಲಿನ ತಾಪವು ಸುಡತ್ತಿತ್ತು. ಮಧ್ಯಾಹ್ನದ ವೇಳೆಯಲ್ಲಿ ಜನರು ಓಡಾಡುವುದನ್ನೇ ಕಡಿಮೆ ಮಾಡಿದ್ದರು. ಬಿಸಿಲಿನ ತಾಪಕ್ಕೆ ಆಯಾಸ ಹೆಚ್ಚಾಗಿ ಸುಸ್ತಾಗುತ್ತಿತ್ತು. ಇದರಿಂದ ಸಾಕಷ್ಟುಜನರಿಗೆ ಆರೋಗ್ಯದಲ್ಲಿ ಏರುಪೇರು ಸಹ ಆಗುತ್ತಿತ್ತು. ಇಂತಹ ಕ್ಲಿಷ್ಠಕರವಾದ ಪರಿಸ್ಥಿತಿಯಲ್ಲಿ ಭಾನುವಾರ ರಾತ್ರಿ ಮಳೆ ಬಂದಿದ್ದರಿAದ ವಾತಾವರಣದವೇ ಬದಲಾವಣೆಯಾಗಿದೆ.
ಮಳೆ, ಗಾಳಿ ಅರ್ಭಟಕ್ಕೆ ನೆಲಕಚ್ಚಿದ ಬಾಳೆ ತೋಟ: ರೈತರಿಗೆ ಅಪಾರ ನಷ್ಟ



