ನೆಲಮಂಗಲ: ನಮ್ಮ ಆಸ್ತಿಯನ್ನು ಸುಳ್ಳು ದಾಖಲೆ ಸೃಷ್ಟಿಸಿ ಕಾನೂನು ಬಹಿರವಾಗಿ ಖಾತೆ ಮಾಡಲು ಹೊರಟಿರುತ್ತಾರೆ ಇದನ್ನು ಕೇಳಲು ಹೋದ ನನ್ನ ಮಕ್ಕಳಿಗೆ ಕಿರುಕುಳ ನೀಡಿ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಕೊಡಿಪಾಳ್ಯದ ನಿವಾಸಿ ಕಾತ್ಯಾಯಿನಿ ಆಕ್ರೋಶ ವ್ಯಕ್ತಪಡಿಸಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ತ್ಯಾಮಗೊಂಡ್ಲು ಟೌನ್ ಸರ್ವೆ ನಂ 61/1ರಲ್ಲಿ, 1ಎ-33 ಗುಂಟೆ ಜಮೀನು, ಹಾಗೂ ಸರ್ವೆ ನಂ
61/5 ರಲ್ಲಿ, 2 ಎಕರೆ 27 ಗುಂಟಿ ಒಟ್ಟು 4 ಎಕರೆ 20 ಗುಂಟೆ ಜಮೀನಿನಲಿ, ಮಾವ ಗಂಗಮಲಯ್ಯ ರವರಿಗೆ ಬರಬೇಕಾಗಿದ್ದ 1/3( 1 ಎಕರೆ 20 ಗುಂಟೆ ಜಮೀನು ಬರಬೇಕಾಗಿದ್ದು ಇದರಲ್ಲಿ ನಮಗೆ ನಮ್ಮ ಮಾವನ ತಮ್ಮಂದಿರಾದ ಬಸವರಾಜು ಮತ್ತು ಸಿದ್ಧಗಂಗಮ್ಮ ಹಾಗೂ ಇತರರು ನಮಗೆ ಬಾಗಾಂಶ ಕೊಡದೆ ಸುಳ್ಳು ದಾಖಲೆ ಸೃಷ್ಟಿಸಿಕೊಂಡು ತ್ಯಾಮಗೊಂಡು, ಗ್ರಾಮದ ಶ್ರೀ ಭರತ್ ಬಿನ್ ರಂಗಸ್ವಾಮಿರವರಿಗೆ ಮಾರಾಟ ಮಾಡಿರುತ್ತಾರೆ,
ಈ ಬಗ್ಗೆ ನಾವು ನ್ಯಾಯಾಲಯದಲ್ಲಿ ದಾವೇ ಹೂಡಿದ್ದು ಓ.ಎಸ್ ನಂ 356/2014 ರಲಿ., ವಿಚಾರಣೆಯಾಗಿ ತಡೆಯಾಜ್ಞೆ ನೀಡಿರುತ್ತಾರೆ ಹಾಗೂ ಜಮೀನು ಬಗ್ಗೆ ಮೇಲ್ಮನವಿ ಸಲ್ಲಿಸಿದ್ದು, ಅಲ್ಲದೆ ಟ್ರಿಬ್ಯುನಲ್ ನಲ್ಲಿ ಸಹ ದಾವೆ ಹೂಡಿದ್ದು ಕೇಸ್ ನಂ 132, 133 ರಲ್ಲಿ, ತಾತ್ಕಾಲಿಕ ತಡೆಯಾಜ್ಞೆ ನೀಡಿರುತ್ತೆ. ಆದರೂ ಸಹ ಭರತ್ ಹಾಗೂ ಅವರ ತಂದೆ ರಂಗಸ್ವಾಮಿ ರವರು ಡಿಸಿ ಕನ್ವರ್ಷನ್ ಮಾಡಿಸಿಕೊಂಡು ಜಮೀನಿನ ಸುತ್ತ ತಡೆಗೋಡೆಯನ್ನು ಹಾಕಿರುತ್ತಾರೆ ಕೇಳಲು ಹೋದ ನನಗೆ ನನ್ನ ಮಕ್ಕಳಿಗೆ ಬೆದರಿಕೆಯನ್ನು ಸಹ ಹಾಕುತ್ತಿದರೆ ಜಮೀನಿನಲ್ಲಿ ಕೆಲಸವನ್ನು ಮಾಡದೆ ಇರುವಂತೆ ಸೂಕ್ತ ತಿಳುವಳಿಕೆ ನೀಡಿ ನಮಗೆ ನ್ಯಾಯ ಕೊಡಿಸಿಕೊಡಬೇಕೆಂದು ಪೊಲೀಸರಿಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡರು.
ಮಹೇಶ್ ಮಾತನಾಡಿ ಇದು ನಮ್ಮ ಪಿತ್ರಾರ್ಜಿತ ಆಸ್ತಿ ಒಟ್ಟು ಕುಟುಂಬದ ಆಸ್ತಿ ಬಾಗಾಂಶಕ್ಕಾಗಿ ನೆಲಮಂಗಲ ಸಿವಿಲ್ ನ್ಯಾಯಾಲಯದಲ್ಲಿ ವಿಭಾಗಕಾಗಿ ಪ್ರಕರಣ ದಾಖಲು ಮಾಡಿರುತ್ತೇವೆ ಪ್ರಕರಣವು ಇನ್ನೂ ಇತ್ಯಾರ್ಥಕ್ಕೆ ಬಾಕಿ ಇರುತ್ತದೆ.ಈ ಮಧ್ಯೆ ಕೆಲವು ವಿಷಯವನ್ನು ಮರೆಮಾಚಿ ಸ್ವಂತ ಮಗನನ್ನು ದತ್ತು ಮಗ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಮೋಸ ಮಾಡಿ ಕಾನೂನು ಬಹಿರವಾಗಿ ಸ್ವತ್ತನ್ನು ಮಾರಾಟ ಮಾಡಲು ಹೊರಟಿದ್ದು ಸ್ವತ್ತಿನ ಖಾತೆಯನ್ನು ಸಹ ಕಾನೂನು ಬಹಿರವಾಗಿ ಮಾಡುತ್ತಿದ್ದಾರೆ.
ಇದರ ಬಗ್ಗೆ ಪಂಚಾಯಿತಿ, ಪ್ರಾಧಿಕಾರ, ಬೂ ದಾಖಲೆ, ತ್ಯಾಮಗೊಂಡ್ಲು ಪೊಲೀಸ್ ಸ್ಟೇಷನ್, ನೆಲಮಂಗಲ ಡಿ ವೈ ಎಸ್ ಪಿ ರವರಿಗೆ ದೂರು ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಕಂಡರೂ ಕಾಣದಂತೆ ಕುರುಡುತನ ತೋರಿಸುತ್ತಿದ್ದಾರೆ ಇಂಜೆಕ್ಷನ್ ಆಡರ್ ಇದ್ದರೂ ಕೂಡ ಕೆಲಸ ನಿಲ್ಲಿಸದೆ ಕಾನೂನಿನ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಇದನ್ನು ಕೇಳಲು ಹೋದರೆ ಜಾಗ ಬಿಡುವುದಿಲ್ಲ ಜಾಸ್ತಿ ಮಾತನಾಡಿದರೆ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ನಾವು ಯಾವುದಕ್ಕೂ ಹೆದರದೆ ನ್ಯಾಯ ಸಿಗುವವರೆಗೂ ಕಾನೂನು ಹೋರಾಟ ಮಾಡುತ್ತೇನೆ ಎಂದರು.ಇದು ಕಾನೂನು ಬಹಿರವಾದ ಅಕ್ರಮ ಲೇಔಟ್ ಇಲ್ಲಿನ ಸೈಟುಗಳ ವಿಚಾರವಾಗಿ ಯಾರೂ ಕೂಡ ವ್ಯವಹಾರ ವಹಿವಾಟು ಮಾಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.