ಮುಳಬಾಗಲು: ಕೋಲಾರ ಜಿಲ್ಲೆಯಲ್ಲಿ ಡಿಸೆಂಬರ್ ೧ ರಿಂದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದ್ದು ಹೆಲ್ಮೆಟ್ ಧರಿಸಿ ಸಂಚರಿಸಬೇಕು. ಇಲ್ಲದಿದ್ದಲ್ಲಿ ದಂಡಾವಧಿಸಿ ವಾಹನವನ್ನು ವಶಕ್ಕೆ ಪಡೆಯಲಾಗುವುದು ಪತ್ರಕರ್ತರು. ವ್ಯೆದ್ಯರು. ವಕೀಲರು ಲ್ಲಾ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮುಖಂಡರುಗಳು ನಿಯಮವನ್ನು ಪಾಲನೆ ಮಾಡಬೇಕೆಂದು ಎಸ್ಪಿ ಬಿ ನಿಖಿಲ್ ತಿಳಿಸಿದರು.
ನಗರದ ಹೊರವಲಯದಲ್ಲಿರುವ ನರಸಿಂಹ ತೀರ್ಥ ಬಳಿ ಇರುವ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ. ಡಿಸೆಂಬರ್ ೧ ರಿಂದಲೇ ಕಾನೂನುಗಳನ್ನು ಕಠಿಣವಾಗಿ ಅನುಷ್ಠಾನ ಮಾಡಲಾಗುವುದು. ದ್ವಿಚಕ್ರ ವಾಹನ ಸಾರರ ಜೀವ ಉಳಿಸುವ ನಿಟ್ಟಿನಲ್ಲಿ ಹೆಲ್ಮೆಟ್ ಕಡ್ಡಾಯ ಮಾಡಲಾಗುತ್ತಿದ್ದು ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡುರೆ ಹೆಚ್ಚು ಅನುಕೂಲವಾಗುತ್ತದೆ ಎಂದರು. ಬೈಕ್ ವೀಲಿಂಗ್. ಸೈಲೆನ್ಸರ್ ರಹಿತವಾಗಿ ಚಲಾಯಿಸುವ ದ್ವಿಚಕ್ರ ವಾಹನ ಸವಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಗಡಿಭಾಗದಲ್ಲಿ ವಿಶೇಷ ಗಸ್ಸು ಮಾಡಲಾಗುವುದು ಎಂದರು.
ಮನೆ ಮನೆ ಪೊಲೀಸ್ ಭೇಟಿ ವ್ಯವಸ್ಥೆ ಈಗ ಶೇಕಡ ೪೮ ರಷ್ಟು ಇದ್ದು ಡಿಸೆಂಬರ್ ಒಳಗೆ ೧೦೦ ಗುರಿ ತಲುಪಲಿದೆ. ಮಾಸ್ತಿ ಪೊಲೀಸ್ ಠಾಣೆ ಜಿಲ್ಲೆಯಲ್ಲಿ ಕೊನೆಯ ಸ್ಥಾನದಲ್ಲಿದ್ದು ಈ ಬಗ್ಗೆಯೂ ಕ್ರಮ ವಹಿಸಲಾಗುವುದು ಪೊಲೀಸ್ ಮತ್ತು ಸಾರ್ವಜನಿಕ ನಡುವೆ ವಿಶೇಷ ಬಾಂಧವ ಇರಬೇಕು. ನನ್ನ ವಾಟ್ಸಪ್ ಡಿಪಿಯಲ್ಲಿ ಗುರುವಾರ ಕೂಡ ಹಾಕಿದ್ದು ಇದನ್ನು ಸ್ಕಾ÷್ಯನ್ ಮಾಡಿ ತಮ್ಮ ಸುತ್ತಮುತ್ತ ನಡೆಯುವ ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ್ದಾರೆ ತಕ್ಷಣ ಕ್ರಮ ವಹಿಸಲು ಸಾಧ್ಯ ಮಾಹಿತಿ ಮಾತ್ ನೀಡಿದವರ ವಿವರ ಗೌಪ್ಯವಾಗಿರಲದೆ. ಆದ್ದರಿಂದ ಎಲ್ಲರೂ ಮಾಹಿತಿ ನೀಡಲು ಮುಂದಾಗಬೇಕೆAದು ಸಲಹೆ ನೀಡಿದರು. ಎಸ್ ಎಸ್ ಎಲ್ ಸಿ ಪಿ ಯು ಸಿ ಶಿಕ್ಷಣದವರೆಗೂ ಮಕ್ಕಳಿಗೆ ಮೊಬೈಲ್ ನೀಡಿ ಪುಸ್ತಕಗಳನ್ನು ಓದಲು ಪಾಲಕ್ರೋ ಸಲಹೆ ನೀಡಬೇಕು. ಮೊಬೈಲನ್ನು ಆಗಾಗ ಪರಿಶೀಲನೆ ಮಾಡಿ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಅನ್ನು ಬೇರೆ ದಂಧೆಗಳಿಗೆ ಉಪಯೋಗ ಕಂಡು ಬಂದಿದೆ ಎಂದರು. ಎಎಸ್ಪಿ ಮನಿಷಾ. ಮುಳ್ಬಾಗಲ್ ಗ್ರಾಮಾಂತರ ಸಿಪಿಐ ಕೆಜಿ ಸತೀಶ್, ಪಿಎಸ್ಐ ಅರುಣ್ ಗೌಡ ಪಾಟೀಲ್. ಗೋವು ಪಿಲ್ಲಿ ಸಿಪಿಐ ಶಿವಕುಮಾರ್ ಇದ್ದರು.



