ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಸಮಿಪದ ಜೆ.ಪಿ.ಪ್ಯಾಲೇಸ್ ಮುಂಭಾಗದಲ್ಲಿ ಮೇ 11ರಂದು ನರಸಿಂಹಮೂರ್ತಿ ಮಿಟ್ಟೆ ಗ್ಯಾಂಗ್ ಹೇಮಂತ್ ಗೌಡನನ್ನ ಅಮಾನುಷವಾಗಿ ಹತ್ಯೆ ಮಾಡಿದ್ದರು.ಹೇಮಂತ್ ಗೌಡನನ್ನು ಹತ್ಯೆ ಮಾಡಿದ ಹಂತಕರು ಗೂಡ್ಸ್ ವಾಹನದಲ್ಲಿ ಶವದ ಜೊತೆಗೆ ಸುತ್ತಾಡಿ ಶವವನ್ನು ನಗರದ ಹೊರವಲಯದ ಬೆಂಗಳೂರು-ಹಿಂದೂಪುರ ರಸ್ತೆಯಲ್ಲಿನ ನವೋದಯ ಶಾಲೆಯ ಬಳಿ ಎಸೆದು ಪರಾರಿಯಾಗಿದ್ದರು.
ಈ ಪ್ರಕರಣದ 2ನೇ ಆರೋಪಿ ರೌಡಿಶೀಟರ್ ಶ್ರೀನಿವಾಸ್ @ಚಿಕ್ಕಮಿಟ್ಟೆ ಎಂಬಾತನನ್ನ ನಿಖರವಾದ ಮಾಹಿತಿ ಮೇರೆಗೆ ಪೊಲೀಸರು ರಾಜಾನುಕುಂಟೆ ಬಳಿಯ ಶ್ರೀರಾಮನಹಳ್ಳಿಯಲ್ಲಿ ಬಂಧಿಸುವ ಸಮಯದಲ್ಲಿ ಆರೋಪಿಸಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಕಾರಣ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಘಟನೆ ಇಂದು ಮುಂಜಾನೆ ನಡೆದಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಈ ಘಟನೆ ಕುರಿತು ಮಾಹಿತಿ ನೀಡಿದರು.ಪೊಲೀಸರು ಹೇಮಂತ್ ಗೌಡ ಕೊಲೆ ಪ್ರಕರಣದ 2ನೇ ಆರೋಪಿ ಶ್ರೀನಿವಾಸ್ @ ಚಿಕ್ಕ ಮಿಟ್ಟೆ ಬಂಧನಕ್ಕೆ ತೆರಳಿದ್ದ ವೇಳೆ ಆರೋಪಿಯು ಪೊಲೀಸ್ ಕಾನ್ ಸ್ಟೆಬಲ್ ಚಂದ್ರಶೇಖರ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಗ್ರಾಮಾಂತರ ಠಾಣೆ ಇನ್ ಸ್ಪೆಕ್ಟರ್ ಸಾಧಿಕ್ ಪಾಷಾ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದರು.
ಆರೋಪಿ ನರಸಿಂಹಮೂರ್ತಿ ಮಿಟ್ಟೆ ವಕೀಲರ ಮೂಲಕ ಕೋರ್ಟ್ ಗೆ ಶರಣಾಗಲು ಬಂದ ವೇಳೆ ಪೊಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ ಈತನೂ ಸೇರಿದಂತೆ ಮೂರು ಜನರ ಬಂಧನವಾಗಿದೆ ಹಾಗೂ ಉಳಿದ ಆರೋಪಿಗಳನ್ನು ಸಹ ಶೀಘ್ರವಾಗಿ ಬಂಧಿಸಲಾಗುತ್ತದೆ ಎಂದು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾಹಿತಿ ನೀಡದರು.ಹೆಡ್ ಕಾನ್ಸ್ ಸ್ಟೇಬಲ್ ಚಂದ್ರಶೇಖರ್ ಹಾಗೂ ಗಾಯಾಳು ಆರೋಪಿಯನ್ನ ಬಾಶೆಟ್ಟಿಹಳ್ಳಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ಪಿ.ರವಿ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆದರು.