ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿಯನ್ನು ವಿರೋಧಿಸಿ ಭಾರತ ಕ್ರಿಕೆಟ್ ತಂಡ ಏಷ್ಯಾ ಕಪ್ ವೇಳೆ ಪಾಕಿಸ್ತಾನ ತಂಡದ ಆಟಗಾರರ ಜೊತೆ ಹ್ಯಾಂಡ್ ಶೇಕ್ ಮಾಡದ್ದು ದೊಡ್ಡ ಸುದ್ದಿಯಾಗಿತ್ತು. ಅದೇ ರೀತಿ ಮಹಿಳೆಯರ ತಂಡ ಮಹಿಳಾ ವಿಶ್ವಕಪ್ ನಲ್ಲಿ ಪಾಕಿಸ್ತಾನ ಆಟಗಾರರ ಕೈಕುಲುಕಿರಲಿಲ್ಲ. ಆದರೆ ಇದೀಗ ಭಾರತೀಯ ಹಾಕಿ ತಂಡವು ಪಾಕಿಸ್ತಾನದ
ವಿರುದ್ಧದ ಪಂದ್ಯಗಳಲ್ಲಿ ಕೈಕುಲುಕುವುದನ್ನು ನಿಷೇಧಿಸುವುದಿಲ್ಲ ಎಂದು ಹಾಕಿ ಇಂಡಿಯಾ ಸ್ಪಷ್ಟಪಡಿಸಿದೆ.
ಈ ಹಿನ್ನೆಲೆಯಲ್ಲಿ ಟೈಂಸ್ ಆಫ್ ಇಂಡಿಯಾದ ಜೊತೆ ಮಾತನಾಡಿರುವ ಹಾಕಿ ಇಂಡಿಯಾದ ಕಾರ್ಯದರ್ಶಿ ಭೋಲಾ ನಾಥ್ ಸಿಂಗ್ ಅವರು “ನಾವು ಕ್ರಿಕೆಟ್ನಿಂದ ನಿಯಂತ್ರಿತರಲ್ಲ. ಕ್ರಿಕೆಟಿಗರು ಏನು ಮಾಡಿದರು, ಅದು ಅವರ ಆಯ್ಕೆಗೆ ಬಿಟ್ಟಿದ್ದು. ನಾವು ಒಲಿಂಪಿಕ್ ಚಾರ್ಟರ್ ಮತ್ತು ಅಂತಾರಾಷ್ಟಿçÃಯ ಹಾಕಿ ಫೆಡರೇಶನ್ (ಈIಊ) ಏನು ಹೇಳುತ್ತದೆಯೋ
ಅದನ್ನು ಅನುಸರಿಸುತ್ತೇವೆ. ಹಾಕಿ ಇಂಡಿಯಾದಿAದ (ಈIಊ) ಯಿಂದ ಕೈಕುಲುಕುವುದನ್ನು ಅಥವಾ ಹೈ-ಫೈವ್ ಮಾಡುವುದನ್ನು ತಪ್ಪಿಸಲು ಯಾವುದೇ ಸೂಚನೆಗಳಿಲ್ಲ” ಎಂದು ತಿಳಿಸಿದರು.
ಮಲೇಷ್ಯಾದಲ್ಲಿ ನಡೆದ ಸುಲ್ತಾನ್ ಆಫ್ ಜೋಹೋರ್ ಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನದ ಹಾಕಿ ಆಟಗಾರರು ಪಂದ್ಯಕ್ಕೂ ಮುನ್ನ ಪರಸ್ಪರ ಕೈಕುಲುಕಿದ್ದಾರೆ. ಈ ಘಟನೆಯು ಇತ್ತೀಚೆಗೆ ನಡೆದ ಏಷ್ಯಾ ಕಪ್ ೨೦೨೫ ಮತ್ತು ಮಹಿಳಾ ವಿಶ್ವಕಪ್ ೨೦೨೫ ರಲ್ಲಿ ಭಾರತೀಯ ಕ್ರಿಕೆಟ್ ತಂಡಗಳು ಪಾಕಿಸ್ತಾನದ ಆಟಗಾರರೊಂದಿಗೆ ಯಾವುದೇ ರೀತಿಯ ಶುಭಾಶಯ ವಿನಿಮಯ ಮಾಡಿಕೊಳ್ಳಲು ನಿರಾಕರಿಸಿದ್ದಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿತ್ತು. ಜೊತೆಗೂ ಕ್ರಿಕೆಟ್ ನಲ್ಲಿ ಇಲ್ಲದ್ದು ಹಾಕಿಯಲ್ಲಿ ಯಾಕೆ ಅಥವಾ ಹಾಕಿಯಲ್ಲಿ ಇಲ್ಲದ್ದು ಕ್ರಿಕೆಟ್ ನಲ್ಲಿ ಯಾಕೆ ಎಂಬ ಬಗ್ಗೆಯೂ ಚರ್ಚೆಯಾಗಿತ್ತು. ಪಹಲ್ಗಾಮ್ ನಲ್ಲಿ ಏಪ್ರಿಲ್ ನಲ್ಲಿ ಪಾಕ್ ಪ್ರಚೋದಿತ ಉಗ್ರರು ೧೧ ಪ್ರವಾಸಿಗರನ್ನು ಅಮಾನವೀಯವಾಗಿ ಕೊಂದ ಕೃತ್ಯವನ್ನು ಖಂಡಿಸಿ ಭಾರತವು ಪಾಕಿಸ್ತಾನದೊಂದಿಗೆ ಎಲ್ಲಾ ರೀತಿಯ ಸಂಬAಧಗಳನ್ನು ಕಡಿದುಕೊಂಡಿತ್ತು. ಜೊತೆಗೆ ಏಷ್ಯಾ ಕಪ್ ಟೂರ್ನಿಯ ಉದ್ಘಾಟನೆಗೂ ಮುನ್ನ ನಡೆದ ಪ್ರೆಸ್ ಮೀಟ್, ಫೋಟೋ ಶೂಟ್ ಗಳ
ವೇಳೆ ಪಾಕಿಸ್ತಾನದ ನಾಯಕ ಸಲ್ಮಾನ್ ಆಘಾ ಜೊತೆ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅವರು ಕೈಕುಲುಕಿರಲಿಲ್ಲ. ಪಂದ್ಯದ ಟಾಸ್ ವೇಳೆಯೂ ಇದನ್ನೇ
ಪುನರಾವರ್ತಿಸಿದ್ದರು. ಪಂದ್ಯ ಮುಗಿದ ಬಳಿಕವೂ ಭಾರತದ ಆಟಗಾರರು ಪಾಕಿಸ್ತಾನದ ಆಟಗಾರರಿಗೆ ಶೇಕ್ ಹ್ಯಾಂಡ್ ಮಾಡದೇ ಪೆವಿಲಿಯನ್ ಸೇರಿಕೊಂಡಿದ್ದರು.



