ಭಾರತದ ವಿರುದ್ಧ ಆ್ಯಂಡರ್ಸನ್ ತೆಂಡೂಲ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ ವಿರುದ್ಧ ಮಿಂಚಿದ್ದ ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ಜೋ ರೂಟ್ ಅವರು ಆಸ್ಟ್ರೇಲಿಯಾದಲ್ಲಿ ಉತ್ತಮಬ್ಯಾಟಿಂಗ್ ಪ್ರದರ್ಶಿಸುವಲ್ಲಿ ಮತ್ತೆ ವಿಫಲರಾಗಿದ್ದಾರೆ. ನವೆಂಬರ್ ೨೧ ಶುಕ್ರವಾರ ಪರ್ತ್ ನಲ್ಲಿ ಶುರುವಾಗಿರುವ ಆ್ಯಶಸ್ ನ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಅವರು ಖಾತೆ
ತೆರೆಯುವ ಮುನ್ನವೇ ವೇಗಿ ಮಿಚೆಲ್ ಸ್ಟಾರ್ಕ್ ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ಮರಳಿದರು. ಸಚಿನ್ ತೆಂಡೂಲ್ಕರ್ ಅವರ ಸರ್ವಾಧಿಕ ಟೆಸ್ಟ್ ರನ್ ಹಿಂದೆ ಬಿದ್ದಿರುವ ಇಂಗ್ಲೆಂಡ್ ನ ಜೋ ರೂಟ್ ಅವರು ಆಸ್ಟ್ರೇ ಲಿಯಾದಲ್ಲಿ ಮತ್ತೆ ವಿಫಲರಾಗಿದ್ದಾರೆ.
ಪರ್ತ್ನಲ್ಲಿ ಪ್ರಾರಂಭವಾಗಿರುವ ಆಶಸ್ ಸರಣಿಯ ಮೊದಲ ಟೆಸ್ಟ್ನ ಮೊದಲ ದಿನ ಬೆಳಗ್ಗೆಯೇ ವಿಕೆಟ್ ಪತನಗೊಂಡಿತು. ಮಿಚೆಲ್ ಸ್ಟಾರ್ಕ್ ಅವರ ನಿಖರ ಬೌಲಿಂಗ್ ದಾಳಿಯನ್ನು ಎದುರಿಸಲು ವಿಫಲರಾದ ಅವರು ಖಾತೆ ತೆರೆಯುವ ಮುನ್ನವೇ ಔಟಾದರು. ಆಧುನಿಕ ಕ್ರಿಕೆಟ್ನ ಅತ್ಯಂತ ಯಶಸ್ವಿ ಬ್ಯಾಟರ್ಗಳಲ್ಲಿ ಒಬ್ಬರಾದ ರೂಟ್, ಆಸ್ಟ್ರೇ ಲಿಯಾದ ಪಿಚ್ಗಳಲ್ಲಿ
ಆಡಲು ಕಷ್ಟಪಡುತ್ತಿದ್ದಾರೆ ಎಂಬುದು ಇದರಿಂದ ಮತ್ತೊಮ್ಮೆ ಸ್ಪಷ್ಟವಾಯಿತು. ಈ ವಿಕೆಟ್ ನೊಂದಿಗೆ ಮಿಚೆಲ್ ಸ್ಟಾರ್ಕ್ ಅವರು ಆ್ಯಶಸನ್ ನಲ್ಲಿ ೧೦೦ ವಿಕೆಟ್ ಪಡೆದ ಸಾಧನೆ ಮಾಡಿದರು. ಹೀಗಾಗಿ ೩೯ ರನ್ ಆಗುವುದರೊಳಗೆ ಇಂಗ್ಲಂಡ್ ನ ಮೂರು ಪ್ರಮುಖ ವಿಕೆಟ್ ಗಳು ಪತನಗೊಂಡಂತಾಯಿತು.
ಕ್ರಾವ್ಲಿ(೦) ಅವರನ್ನು ಮೊದಲ ಓವರ್ ನ ಕೊನೇ ಎಸೆತದಲ್ಲಿ ಕ್ವಾಜ ಅವರಿಗೆ ಕ್ಯಾಚ್ ಕೊಡಿಸುವಲ್ಲಿ ಯಶಸ್ವಿಯಾದ ಸ್ಟಾರ್ಕ್ ೨೦ ರನ್ ಗಳಿಸಿ ಕ್ರೀಸಿನಲ್ಲಿ ನೆಲೆಯೂರುವ ಲಕ್ಷಣ ತೋರಿದ್ದ ಬೆನ್ ಡಕೆಟ್ ಅವರನ್ನು ಎಲ್ ಬಿಡಬ್ಲ್ಯೂ ಬಲೆಗೆ ಕೆಡವಿದರು. ಬಳಿಕ ಸ್ಟಾರ್ಕ್ ಅವರ ಲೆಗ್ ಸ್ಟಂಪ್ ಗೆ ಬಿದ್ದ ಚೆಂಡು ರೂಟ್ ಅವರ ಬ್ಯಾಟಿನ ಅಂಚಿಗೆ ತಗಲಿ ಮೂರನೇ ಸ್ಲಿಪ್ ನಲ್ಲಿದ್ದ ಮಾರ್ನಸ್ ಲಬುಶೇನ್ ಕೈ ಸೇರುವುದರೊಂದಿಗೆ ಔಟ್ ಮಾಡಿದರು. ಈ ಎಸೆತ ಲೆಗ್ ಸ್ಟಂಪ್ನಲ್ಲಿ ಬಿದ್ದು, ತೀವ್ರವಾಗಿ ಹೊರಕ್ಕೆ ತಿರುಗಿತು. ಇದರಿಂದ ರೂಟ್ ಬ್ಯಾಟ್ನ ಅಂಚಿಗೆ ತಾಗಿ, ಮಾರ್ನಸ್ ಲ್ಯಾಬುಶೇನ್ ಅವರ ಕೈಯಲ್ಲಿ ಮೂರನೇ ಸ್ಲಿಪ್ನಲ್ಲಿ ಕ್ಯಾಚಿತ್ತು ಔಟಾದರು. ೧೫೮ ಟೆಸ್ಟ್ ಪಂದ್ಯಗಳನ್ನು ಆಡಿರುವ ಜೋ ರೂಟ್ ಅವರು ೫೭.೪೯ ಸರಾಸರಿಯೊಂದಿಗೆ ೧೩೫೪೩ ರನ್ ಕಲೆಹಾಕಿದ್ದಾರೆ. ಜಗತ್ತಿನ ಎಲ್ಲೆಡೆ ಯಶಸ್ವಿಯಾಗಿರುವ ಅವರು ಆಸ್ಟ್ರೇ ಲಿಯಾ ಮಾತ್ರ ನೀರಸ ಪ್ರದರ್ಶನ ನೀಡಿದ್ದಾರೆ. ಆಸ್ಟ್ರೇ ಲಿಯಾದಲ್ಲಿ ಆಡಿದ ೧೪ ಟೆಸ್ಟ್ಗಳಲ್ಲಿ, ರೂಟ್ ೮೯೨ ರನ್ಗಳನ್ನು ೩೫.೬೮ರ ಸರಾಸರಿಯಲ್ಲಿ ಗಳಿಸಿದ್ದಾರೆ. ಒಂಬತ್ತು ಅರ್ಧ ಶತಕಗಳನ್ನು ಗಳಿಸಿದ್ದರೂ, ಒಂದು ಶತಕವೂ ಅವರ ಹೆಸರಿಗಿಲ್ಲ.
ಇನ್ನು ಮಿಚೆಲ್ ಸ್ಟಾರ್ಕ್ ಅವರು ರೂಟ್ ಅವರ ವಿಕೆಟ್ ಪಡೆದದ್ದು ಐತಿಹಾಸಿಕ ಮಹತ್ವವನ್ನೂ ಪಡೆದುಕೊಂಡಿತು. ಈ ವಿಕೆಟ್ನೊಂದಿಗೆ ಅವರು ಆಯಶಸ್ ಸರಣಿಯಲ್ಲಿ ೧೦೦ ವಿಕೆಟ್ಗಳನ್ನು ಪಡೆದ ೨೧ನೇ ಬೌಲರ್ ಎಂಬ ಗೌರವಕ್ಕೆ ಪಾತ್ರರಾದರು. ಮತ್ತು ಈ ಸಾಧನೆ ಮಾಡಿದ ಮೊದಲ ಎಡಗೈ ವೇಗಿ ಎನ್ನಿಸಿಕೊಂಡರು. ಪ್ಯಾಟ್ ಕಮಿನ್ಸ್ ಮತ್ತು ಜೋಶ್ ಹ್ಯಾಜಲ್ವುಡ್ ಅನುಪಸ್ಥಿತಿಯಲ್ಲಿ, ಸ್ಟಾರ್ಕ್ ಬೌಲಿಂಗ್ ದಾಳಿಯ ನೇತೃತ್ವ ವಹಿಸಿಕೊಂಡಿದ್ದಾರೆ. ರೂಟ್ ವಿಕೆಟ್ ಪತನದ ಬಳಿಕ ಹೋಲಿ ಪೋಪ್(೪೬) ಮತ್ತು ಹ್ಯಾರಿ ಬ್ರೂಕ್(ನಾಟೌಟ್ ೨೮) ಅವರು ಕುಸಿತವನ್ನುತಡೆಯುವ ಪ್ರಯತ್ನ ಮಾಡಿದರು.
ಅವರಿಂದ ನಾಲ್ಕನೇ ವಿಕೆಟ್ ಗೆ ೫೫ ರನ್ ಗಳ ಜೊತೆಯಾಟ ಬಂತು. ಇನ್ನೇನು ಅವರು ಕ್ರೀಸಿನಲ್ಲಿ ಗಟ್ಟಿಯಾಗಿ ತಳವೂರಿದ್ದರು ಎಂದುಕೊಳ್ಳುವಾಗಲೇ ಮಧ್ಯಮ ವೇಗಿ ಕ್ಯಾಮರೂನ್ ಗ್ರೀನ್ ಅವರು ಅರ್ಧಶತಕದ ಸಮೀಪ ಇದ್ದ ಓಲಿ ಪೋಪ್ ಅವರನ್ನುಎಲ್ ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ಅಲ್ಲಿಗೆ ೯೪ ರನ್ ಗೆ ಇಂಗ್ಲೆಂಡ್ ನ ನಾಲ್ಕು ವಿಕೆಟ್ ಬಿದ್ದಂತಾಯಿತು.



