ಮನರಂಜನೆಯ ಜೊತೆಗೆಸಾಮಾಜಿಕ ಸಂದೇಶವಿರುವ ಕಾಮಿಡಿ ಎಂಟರ್ಟೆÊನರ್ ಡಾ ಸುಧಾಕರ್ ಶೆಟ್ಟಿ ಈ ಚಿತ್ರವನ್ನು ಅರ್ಪಿಸುತ್ತಿದ್ದು , ಅಮೃತ ಫಿಲಂ ಸೆಂಟರ್ ಮತ್ತು ೨೪ ರೀಲ್ಸ್ ಸಂಸ್ಥೆ ಜೊತೆಗೂಡಿ ಚಿತ್ರ ನಿರ್ಮಾಣ ಆಗಿದೆ.. ನಿರ್ದೇಶಕ ವೆಂಕಟ್ ಭಾರದ್ವಾಜ್, ತಮ್ಮ ಹೊಸ ಚಿತ್ರ `ಹೇ ಪ್ರಭು’ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ.. ಭಾರತದ ಔಷಧಿ ಮತ್ತು ವೈದ್ಯಕೀಯ ಕ್ಷೇತ್ರದ ಅಜ್ಞಾತ ಮತ್ತು ಕತ್ತಲು ಮುಖಗಳನ್ನು ಅನಾವರಣಗೊಳಿಸುವ ಗಂಭೀರ ಅಂಶವಿದೆ. ಔಷಧಿ ಕಂಪನಿಗಳ ಲಾಬಿ, ನಕಲಿ ಔಷಧ ಮಾರಾಟ ಮತ್ತು ಕಾರ್ಪೊರೇಟ್ ಲಾಭದಹಂಬಲ-ಇವುಗಳ ಪರಿಣಾಮ ಹೇಗೆ ಜನರ ಆರೋಗ್ಯದ ಮೇಲೆ ಬಾಧೆ ಉಂಟುಮಾಡುತ್ತದೆ ಎಂಬುದನ್ನು ಚಿತ್ರ ಮನರಂಜನೆಯ ಹಾಸ್ಯ, ಭಾವನೆ ಮತ್ತು ವಾಸ್ತವಿಕ ಪಾತ್ರಗಳ ಮೂಲಕ ತೋರಿಸುತ್ತದೆ. ಇತ್ತೀಚಿನ ಮಕ್ಕಳ ಕಫ್ ಸಿರಪ್ ದುರಂತ ಭಾರತವನ್ನು ಕಂಗೆಡಿಸಿದ ಬಳಿಕ, ಹೇ ಪ್ರಭು ಕೇವಲ ಸಿನಿಮಾ ಅಲ್ಲ, ಅದು ಜನಜಾಗೃತಿ ಮೂಡಿಸುವ ಕಣ್ಣು ತೆರೆಸುವ ಚಿತ್ರ. ನಾಗರಿಕರು ಎಚ್ಚರದಿಂದ, ಅರಿವುಳ್ಳವರಾಗಿ, ಜವಾಬ್ದಾರಿಯುತವಾಗಿ ಬದುಕಬೇಕು ಎಂಬ ಸಂದೇಶವನ್ನು ಈ ಸಿನಿಮಾ ಸಾರುತ್ತದೆ



