ಬೆಂಗಳೂರು: ಹೈಕಮಾಂಡ್ ಎಲ್ಲ ತೀರ್ಮಾನ ಮಾಡುತ್ತೆ. ನಾವೆಲ್ಲ ಹೈಕಮಾಂಡ್ ತೀರ್ಮಾನ ಕ್ಕೆ ಬೆಲೆ ಕೊಡುತ್ತೇವೆ, ಪಾಲಿಸುತ್ತೇವೆ. ಯಾರು ಪಾಲಿಸಲ್ವೋ ಅವರ ವಿರುದ್ಧ ಕ್ರಮ ಆಗುತ್ತೆ. ಸಿಎಂ ಹೇಳಿರೋದು ಸರಿ ಇದೆ ಎಂದು ಗೃಹಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ಏನು ಹೇಳುತ್ತೋ ಕೇಳುತ್ತೇವೆ ಎಂದಿದ್ದಾರೆ, ಅದು ಸರಿ ಇದೆ ಎಂದರು. ತುಮಕೂರಿನ ರಾಜಣ್ಣ ಮನೆಯಲ್ಲಿ ಔತಣ ಕೂಟ ವಿಚಾರದಲ್ಲಿ ಏನೂ ವಿಶೇಷ ಇಲ್ಲ. ಈ ಮೊದಲೂ ಹೋಗಿದ್ದೇವೆ, ಈಗಲೂ ಕರೆದಿದ್ದಾರೆ ಹೋಗುತ್ತಿದ್ದೇವೆ. ದೆಹಲಿಗೆ ನೀವೂ ಹೋಗ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾರ್ಯಾರು ದೆಹಲಿಗೆ ಹೋಗ್ತಿದ್ದಾರೋ ಗೊತ್ತಿಲ್ಲ. ನಾನು ಸದ್ಯಕ್ಕೆ ದೆಹಲಿಗೆ ಹೋಗ್ತಿಲ್ಲ. ಅವಶ್ಯಕತೆ ಬಿದ್ದರೆ ನಾನೂ ದೆಹಲಿಗೆ ಹೋಗುತ್ತೇನೆ ಎಂದರು. ಅಕಾಲಿಕ ವರ್ಗಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಗತ್ಯ ನೋಡಿಕೊಂಡು ವರ್ಗಾವಣೆ ಮಾಡುತ್ತಾರೆ.
ಈಗ ನಮ್ಮ ಇಲಾಖೆ ಬಿಟ್ಟು ಎಲ್ಲ ಇಲಾಖೆಗಳಲ್ಲಿ ವರ್ಗಾವಣೆ ನಿಂತಿದೆ. ಹಿರಿಯ ಸಚಿವರನ್ನು ಕೈಬಿಡುವ ವಿಚಾರ ಗೊತ್ತಿಲ್ಲ. ಅದರ ಬಗ್ಗೆ ಸಿಎಂ,ಹೈಕಮಾAಡ್ ತೀರ್ಮಾನ ಮಾಡುತ್ತೇ ಎಂದರು. ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ಕುರಿತು ನಾನೂ ಕೂಡಾ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಜತೆ ಚರ್ಚೆ ಮಾಡಿದ್ದೇನೆ. ಆದಷ್ಟು ಬೇಗ ಕಬ್ಬಿಗೆ ಬೆಲೆ ನಿಗದಿ ಮಾಡಿ ಸಮಸ್ಯೆ ಬಗೆಹರಿಸಲು ಹೇಳಿದ್ದೇನೆ. ಇಲ್ಲದಿದ್ದರೆ ಪೊಲೀಸರಿಗೆ ಪರಿಸ್ಥಿತಿ ನಿಭಾಯಿಸೋದು ಕಷ್ಟ ಆಗುತ್ತೆ ಎಂದಿದ್ದೇನೆ.ಸತೀಶ್ ಜಾರಕಿಹೊಳಿ ಸೇರಿ ಆ ಭಾಗದ ಸಚಿವರು ಸಮಸ್ಯೆ ಬಗೆಹರಿಸುವ ಭರವಸೆ ಕೊಟ್ಟಿದ್ದಾರೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುವ ವಿಶ್ವಾಸ ಇದೆ. ನಿನ್ನೆ ಒಬ್ಬರು ರೈತರು ಆತ್ಮಹತ್ಯೆ ಪ್ರಯತ್ನ ಮಾಡಿದ್ದರು, ಪೊಲೀಸರು ಅವರನ್ನು ರಕ್ಷಣೆ ಮಾಡಿದ್ದಾರೆ. ಈ ಥರದ ಘಟನೆಗಳು ಆಗಬಾರದು, ಬೇಗ ಬಗೆಹರಿಸಿ ಅಂದಿದ್ದೇವೆ. ಬಿಜೆಪಿಯವರು ಸಹಜವಾಗಿ ಇಂಥ ಸಂದರ್ಭದಲ್ಲಿ ಬೆಂಬಲ ಕೊಟ್ಟಿದ್ದಾರೆ. ಇಂಥ ಅವಕಾಶ ಬಿಡ್ತಾರಾ ಅವರು? ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಕುರ್ಚಿ ಕಚ್ಚಾಟದಲ್ಲಿ ತೊಡಗಿದೆ ಎಂಬ ಬಿಜೆಪಿ ಆರೋಪ ವಿಚಾರವಾಗಿ ಮಾತನಾಡಿದ ಅವರು, ಅವರು ಅಧಿಕಾರದಲ್ಲಿದ್ದಾಗ ಏನಾಗಿತ್ತು ಎಂದು ನೋಡಿಕೊಳ್ಳಲಿ ಅವರು ಎಂದು ತಿರುಏಟು ನೀಡಿದರು.


		
		
		
		