ಬೆಂಗಳೂರು: ಪಡುಕೋಣೆ ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್ನಲ್ಲಿ (ಪಿಡಿಸಿಎಸ್ಇ) ಫುಟ್ಬಾಲ್ ಪಂದ್ಯಗಳೆಂದಿಗೆ 2ನೇ ದಿನ ಆರಂಭವಾಗುತ್ತಿದ್ದಂತೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಎಸ್ಎಫ್ಎ ಚೆಂಪಿಯನ್ಶಿಪ್ನ ಉತ್ಸಾಹವು ಗಗನಕ್ಕೇರಿತು. ಈ ಮಧ್ಯೆ, ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ, ನೇತಾಜಿ ಸುಭಾಷ್ ಸಂದರ್ನ್ ಸೆಂಟರ್ನಲ್ಲಿ ಅಥ್ಲಿಟಿಕ್ಸ್ ಅಟವು ಪ್ರೇಕ್ಷಕರನ್ನು ಸಳೆಯಿತು.
“ಯಾವುದೇ ಮನುಷ್ಯ ಶಕ್ತಿಯೂ ಸೀಮಿತ ಅಲ್ಲ ಎಂದು ಕೀನ್ಯಾದ ಲಾಂಗ್ ಡಿಸ್ಟ್ರಾನ್ಸ್ ರನ್ನರ್ ಮತ್ತು ನನ್ನ ಆರಾಧ್ಯ ದೈವ ಎಲುಯಿಡ್ ಕಿಪ್ಲೋ ಗ್ ಹೇಳಿದ್ದಾರೆ. ನನ್ನ ಓಟದ ಪ್ರಯತ್ನವು ಶಾಲೆಯ ಸ್ಪರ್ಧೆಯಲ್ಲಿ 1500 ಮೀಟರ್ ಓಡುವ ಮೂಲಕ ಕಳೆದ ವರ್ಷವಷ್ಟೇ ಪ್ರಾರಂಭವಾಯಿತು. ನಂತರ ಹಿಂತಿರುಗಿ ನೋಡಲಿಲ್ಲ. ನನ್ನ ಗುರಿ ಸುಧಾರಿಸಿಕೊಳ್ಳಲು ಮತ್ತು ಮುಂದಿನ ರಾಷ್ಟ್ರೀಯ ಗೆಲುವಿಗಾಗಿ ಹಾತೊರೆಯುತ್ತಿದ್ದೇನೆ”, ಎಂದು ಈ ಸಂದರ್ಭದಲ್ಲಿ ಹೋಲಿ ಕ್ರಾಸ್ ಸ್ಕೂಲ್ ಮತ್ತು ಪಿಯು ಕಾಲೇಜಿನ ವಿಶಾಲ್ ಗಾರ್ತಿ ಹೇಳಿದ್ದಾರೆ.
ಬೆಂಗಳೂರಿನ ಎಸ್ಎಫ್ಎ ಚಾಂಪಿಯನ್ಶಿಪ್ನಲ್ಲಿ ಅಂಡರ್-18 1500 ಮೀ ಓಟದಲ್ಲಿ ವಿಶಾಲ್ ಚಿನ್ನ ಗೆದ್ದರು. ಅವರು 1500 ಮೀ. ನಲ್ಲಿ ರಾಷ್ಟ್ರೀಯ ರಾಂಕ್ ಹೋಲ್ಡರ್ (17ನೇ ರಾಂಕ್) ಆಗಿದ್ದಾರೆ ಮತ್ತು ರಾಜ್ಯ ಮಟ್ಟದಲ್ಲಿ 1500 ಮೀ ಓಟದಲ್ಲಿ ಬೆಳ್ಳಿ ಗೆದ್ದಿದ್ದಾರೆ.
ಅಂಡರ್-14 (ಹುಡುಗ ಅಥೀಟ್ ಗಳು) ವಿಭಾಗದ ಫುಟ್ಬಾಲ್ ಉತ್ಸಾಹಿಗಳು ತಮ್ಮ ಕೌಶಲ್ಯ ಮತ್ತು ದೃಢತೆಯನ್ನು ಪ್ರದರ್ಶಿಸಿದ್ದರಿಂದ ಪಿಡಿಸಿಎಸ್ಇ ಮೈದಾನವು ಸಂಭ್ರಮಿಸಿತು.
ಆ ಮೂಲಕ ಎಸ್ಎಫ್ಎ ಚಾಂಪಿಯನ್ಶಿಪ್ನಲ್ಲಿ ರೋಮಾಂಚಕ ವಾತಾವರಣವ ಸೃಷ್ಟಿಯಾಯಿತು. ನಾಕೌಟ್ ಸುತ್ತಿನಲ್ಲಿ ಡೆಲ್ಲಿ ಪಬ್ಲಿಕ್ ಸ್ಕೂಲ್ ಪೂರ್ವ ಬೆಂಗಳೂರು, (ಬಿ), ತತ್ತ್ವ ಶಾಲೆಯ ವಿರುದ್ಧ 7-0 ಗೋಲುಗಳ ಆಕರ್ಷಕ ಸ್ಕೋರ್ನೊಂದಿಗೆ ಜಯಗಳಿಸುವ ಮೂಲಕ ದಿನದ ಗೆಲುವವನ್ನು ಆಚರಿಸಲಾಯಿತು. ಅದೇ ಸಮಯದಲ್ಲಿ, ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ, ನೇತಾಜಿ ಸುಭಾಸ್ ಸದರ್ನ್ ಸೆಂಟರ್ನಲ್ಲಿ ಅಥ್ಲೆಟಿಕ್ ಕ್ರೀಡಾಂಗಣವು ಅಂಡರ್-8 ರಿಂದ ಅಂಡರ್-18ರ ವಿಭಾಗಗಳವರೆಗಿನ ಸ್ಪರ್ಧೆಗಳಿಗೆ ಸಾಕ್ಷಿಯಾಯಿತು.