This is the title of the web page
This is the title of the web page

ಪದವಿ ವಿದ್ಯಾರ್ಥಿಗಳಿಗೆ ಗುಡ್ಡಗಾಡು ಓಟ ಸ್ಪರ್ಧೆ: ಪ್ರಶಸ್ತಿ ವಿತರಣೆ

ಹೊಸಕೋಟೆ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮತ್ತು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಜಂಟಿಯಾಗಿ ಗುಡ್ಡಗಾಡು ಓಟದ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಟ್ಟ ಪದವಿ ಕಾಲೇಜುಗಳಿಂದ ಸುಮಾರು 100 ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು.

ಗುಡ್ಡಗಾಡು ಹತ್ತು ಕಿ.ಮೀ. ಓಟದ ಸ್ಪರ್ಧೆಯನ್ನು ಉದ್ಘಾಟನೆ ಮಾಡಿದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ: ಆರ್ ಶ್ರೀಕಾಂತ್‍ರವರು ಮಾತನಾಡಿ, ವಿದ್ಯಾರ್ಥಿಗಳು 10 ಕಿ.ಮೀ. ಓಟದ ಸ್ಪರ್ಧೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿರುವುದು ಸಂತೋಷದ ವಿಷಯ ಹಾಗೂ ಕ್ರೀಡೆಗೆ ಪ್ರೋತ್ಸಾಹ ನೀಡಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ಮುನಿನಾರಾಯಣಪ್ಪ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಶಿಕ್ಷಣದೊಂದಿಗೆ ಕ್ರೀಡಾಭ್ಯಾಸಕ್ಕೂ ಪೂರಕವಾದ ಸೌಲಭ್ಯಗಳನ್ನು ಕಲ್ಪಿಸಿದ್ದು  ಪ್ರೋತ್ಸಾಹ ನೀಡುತ್ತಾ ಬಂದಿದ್ದು, ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿ ದೇಶಕ್ಕೆ ಕೀರ್ತಿ ತರಬೇಕೆಂದರು. ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಂಸ್ಕøತಿಕ ಸ್ಪರ್ಧೆಗಳಿಂದ ವಿದ್ಯಾರ್ಥಿಗಳು ದೈಹಿಕ, ಮಾನಸಿಕ ಸಮತೋಲನ ಕಾಪಾಡಿಕೊಂಡು ಸಮರ್ಥರಾಗಿ ಬೆಳವಣಿಗೆ ಹೊಂದಲು ಸಾಧ್ಯವಾಗಲಿದೆ ಎಂದರು.
ಬಂಗಾರಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣದ ನಿರ್ದೇಶಕರಾದ ಸತೀಶ್, ಹೊಸಕೋಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಕ್ರೀಡೆಗೆ ಬೆಂಬಲ ನೀಡುತ್ತಿರುವುದು ಮೆಚ್ಚುವಂತಹದ್ದು ಎಂದು ಶ್ಲಾಘಿಸಿದರು.

ಗುಡ್ಡಗಾಡು ಓಟದಲ್ಲಿ ಬಾಲಕರ ಹಾಗೂ ಬಾಲಕಿಯರ ಎರಡೂ ವಿಭಾಗಗಳಿಂದ ವಿಜೇತರಾದ ಮೊದಲ ಆರು ಸ್ಪರ್ಧಿಗಳನ್ನು ರಾಷ್ಟ್ರ ಮಟ್ಟದ ವಿಶ್ವವಿದ್ಯಾಲಯಗಳಲ್ಲಿ ಭಾಗವಹಿಸಲು ಆಯ್ಕೆ ಮಾಡಿಕೊಳ್ಳಲಾಯಿತು.
ಸ್ಪರ್ಧೆಯು ಹೊಸಕೋಟೆ ಟೋಲ್‍ನಿಂದ ಪ್ರಾರಂಭವಾಗಿ ಕನ್ನಮಂಗಲ, ಖಾಜಿಸೊಣ್ಣೇನಹಳ್ಳಿ, ಗೊರವಿಗೆರೆ, ಹೊಸಕೋಟೆ ಕೋಡಿ ಮೂಲಕ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಕ್ತಾಯಗೊಂಡಿತು.

ಗುಡ್ಡಗಾಡು ಓಟದ ಸ್ಪರ್ಧೆಯ ಸಂಘಟಕರಾದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾದಾಪ್ಯಕರಾದ ಡಾ: ಈರಣ್ಣ, ಪ್ರೊ. ಚಂದ್ರಕಾಂತ, ಡಾ: ಅಶ್ವಥನಾರಾಯಣ, ಡಾ: ಭಾರತಿ, ಡಾ: ಅಮೃತಮ್ಮ, ಎಂ. ಚಂದ್ರಕಲಾ, ಡಾ: ರಾಜಪ್ಪ, ಡಾ: ಅಡವಾಲ ವೆಂಕಟೇಶ್, ಶ್ರೀನಿವಾಸಾಚಾರ್ ಇನ್ನಿತರರು ಭಾಗವಹಿಸಿದ್ದರು.

ಸ್ಪರ್ಧೆಯ ವಿಜೇತರು: ವಿದ್ಯಾರ್ಥಿನಿಯರ ವಿಭಾಗ: ಪ್ರಥಮ ಸ್ಥಾನ: ಕವಿತ, ವಿಶ್ವೇಶ್ವರಯ್ಯ ಕಾಲೇಜು, ಎಚ್‍ಎಎಲ್., ದ್ವಿತೀಯ ಸ್ಥಾನ: ಅಭಿದಾ ಶೇಕ್, ಸರಕಾರಿ ಪ್ರಥಮ ದರ್ಜೆ ಕಾಲೇಜು, ಕೆ.ಆರ್.ಪುರಂ., ತೃತೀಯ ಸ್ಥಾನ: ಪಿ.ಸೌಮ್ಯ, ನಾಲ್ಕನೇ ಸ್ಥಾನ: ಸುಪ್ರಿಯಾ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಬಂಗಾರಪೇಟೆ; ಐದನೇ ಸ್ಥಾನ: ಎಂ.ಪವಿತ್ರ, ಸರಕಾರಿ ಮಹಿಳಾ ಕಾಲೇಜು, ಕೋಲಾರ; ಆರನೇ ಸ್ಥಾನ: ಡಿ.ಅನುಷಾ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಬಂಗಾರಪೇಟೆ.

ವಿದ್ಯಾರ್ಥಿಗಳ ವಿಭಾಗ: ಪ್ರಥಮ ಸ್ಥಾನ:ಸಂಜಯ್ ಕುಮಾರ್, ಎಸ್‍ಕೆವಿಸಿಪಿಇ ಕಾಲೇಜು, ಚಿಕ್ಕಬಳ್ಳಾಪುರ; ದ್ವಿತೀಯ ಸ್ಥಾನ: ಸರಕಾರಿ ಪ್ರಥಮ ದರ್ಜೆ ಕಾಲೇಜು, ಕೆಜಿಎಫ್; ತೃತೀಯ ಸ್ಥಾನ ತಬ್ರೇಜ್ ಖಾನ್, ಡಿವಿಎನ್ ಬಿಪಿಎಡ್ ಕಾಲೇಜು; ನಾಲ್ಕನೇ ಸ್ಥಾನ: ಎನ್.ಆರ್. ಗೌತಮ್, ಸರಖಾರಿ ಪ್ರಥಮ ದರ್ಜೆ ಕಾಲೇಜು, ಚಿಕ್ಕಬಳ್ಳಾಪುರ; ಐದÀನೇ ಸ್ಥಾನ: ಹೇಮಂತ ಕುಮಾರ್; ಎನ್.ಅಭಿಷೇಕ್, ಸರಕಾರಿ ಪ್ರಥಮ ದರ್ಜೆ ಕಾಲೇಜು, ಹೊಸಕೋಟೆ.