ಬೆಂಗಳೂರು: ಅಫ್ಘಾನಿಸ್ತಾನ ವಿರುದ್ಧದ ಟಿ-20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದರು. ಈ ಮೂಲಕ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಶರ್ಮಾ ಅಕ್ಷರಶಃ ಅಬ್ಬರಿ ಬೊಬ್ಬಿರಿದರು.
ಕೇವಲ 64 ಎಸೆತಗಳಲ್ಲಿ ರೋಹಿತ್ ಶರ್ಮಾ ಐತಿಹಾಸಿಕ ಶತಕ ಪೂರೈಸಿದರು.
ಇದು ರೋಹಿತ್ ಶರ್ಮಾ ಅವರ 5ನೇ ಅಂತರಾಷ್ಟ್ರೀಯ ಟಿ-20 ಶತಕವಾಗಿದೆ. ರೋಹಿತ್ಗೂ ಮೊದಲು ಯಾವುದೇ ಬ್ಯಾಟ್ಸ್ಮನ್ಗಳು ಟಿ-20 ಅಂತರಾಷ್ಟ್ರೀಯ ಪಂದ್ಯ ಗಳಲ್ಲಿ 5 ಶತಕಗಳನ್ನು ಸಿಡಿಸಿರಲಿಲ್ಲ.
ಇದೀಗ ದಾಖ ಲೆಯ 5ನೇ ಶತಕ ಸಿಡಿಸಿರುವ ರೋಹಿತ್ ಶರ್ಮಾ ಈ ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. 69 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 11 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್ಗಳೊಂದಿಗೆ ಅಜೇಯ 121* ರನ್ ಚಚ್ಚಿದರು.