ಬೆಂಗಳೂರು ಹುಲಿಯೂರುದುರ್ಗದಲ್ಲಿ ಚೌತಿ ನಾಗರ ಜೀರ್ಣೋದ್ದಾರ ನೂತನ ನಾಗ ದೇವರ ಪ್ರತಿಷ್ಠಾಪನೆ, ದೇವಸ್ಥಾನದ ಉದ್ಘಾಟನೆ ವಿಶೇಷ ಪೂಜೆಗಳೊಂದಿಗೆ ಹಾಗೂ ರಾಜಬೀದಿಗಳಲ್ಲಿ ಆನೆ ಮೆರವಣಿಗೆಜರುಗಿತು, ಡಾ.ಶೀಲಾನಟರಾಜ್, ಡಾ.ಹೆಚ್. ಎಸ್. ನಟರಾಜ್ ಶೆಟ್ಟಿಮತ್ತು ಕುಟುಂಬದವರ ನೇತೃತ್ವದಲ್ಲಿ ಎಲ್ಲಾ ಸಮಾರಂಭಗಳು ಅದ್ಧೂರಿಯಾಗಿ ಜರುಗಿತು.
ಶ್ರೀವರಲಕ್ಷ್ಮಮ್ಮ ಛಾರಿಟೆಬಲ್ ಫೌಂಡೇಶನ್ ವತಿಯಿಂದ ವೈದ್ಯೋನಾರಾಯಣ ಉಚಿತ ಆರೋಗ್ಯ ತಪಾಸಣ ಶಿಬಿರದಲ್ಲಿ ಬೆಂಗಳೂರು ಜಯದೇವ ಆಸ್ಪತ್ರೆ ವತಿಯಿಂದ ಹೃದ್ರೋಗ ತಪಾಸಣೆ ಮಾಡಿ ಉಚಿತವಾಗಿ ಔಷಧಿ ವಿತರಿಸಿದರು, ಆದಿಚುಂಚನಗಿರಿ ಆಸ್ಪತ್ರೆ ವತಿಯಿಂದ ರೋಗಿಗಳಿಗೆ ತಪಾಸಣೆ ಮಾಡಿ ಔಷಧಿ ನೀಡಿದರು, ಶಾಂತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಾ. ಶಿವರಾಜ್ ಗೌಡ ವೈಧ್ಯತಂಡದವರಿಂದ ರೋಗಿಗಳಿಗೆ ಪರೀಕ್ಷೆ ನಡೆಸಿ ಉಚಿತವಾಗಿ ಔಷಧಿ ನೀಡಿದರು,
ದೊಡ್ಡಬೊಮ್ಮಸಂದ್ರ ಲಯನ್ಸ್ ಕ್ಲಬ್ 317ಈ ವತಿಯಿಂದ ಲಯನ್ ಡಾ.ಬಿ.ಎಂ. ರವಿನಾಯ್ಡು, ಆರ್. ಲೀಲಾಕೃಷ್ಣ ಹಾಗೂ ವೈಧ್ಯ ತಂಡದೊಂದಿಗೆ ನೇತ್ರ ಪರೀಕ್ಷೆ ಮಾಡಿ ಉಚಿತವಾಗಿ ಕನ್ನಡಕಗಳನ್ನು ವಿತರಿಸಿದರು.ಕಾಲಜ್ಞಾನಿ ಯೋಗಿನಾರೇಯಣ ಯತೀಂದ್ರ ಕೈವಾರ ತಾತಾಯ್ಯನವರ ಮಂಟಪದ ವೇದಿಕೆಯಲ್ಲಿಕರ್ನಾಟಕದ ರಾಯಭಾರಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ, ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀಶ್ರೀಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು,
ಓಂಕಾರ ಆಶ್ರಮದ ಪೀಠಾಧಿಪತಿಗಳಾದ ಡಾ.ಮಧುಸುದಾನಂದ ಸ್ವಾಮೀಜಿಯವರು, ನಾಗದುರ್ಗಾ ಪೀಠಾಧ್ಯಕ್ಷರಾದ ಡಾ.ಶಾಕ್ತ್ಯಂ ಬಾಲ ಅಮ್ಮನವರು ಸೇರಿದಂತೆ ಅನೇಕ ಮಠಾಧೀಶರುಗಳು ಆಗಮಿಸಿದ್ದರು ಹಾಗು ಕುಣಿಗಲ್ ಶಾಸಕ ಡಾ.ರಂಗನಾಥ್, ಜಯದೇವ ಆಸ್ಪತ್ರೆಯ ವೈಧ್ಯರುಗಳು, ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ಎಂ. ಆರ್. ಜಯರಾಮ್ ರವರು, ಮಾಜಿ ಶಾಸಕರಾದ ಪಿ. ಎಸ್. ಪ್ರಕಾಶ್, ಬಾಲ್ಡ್ವಿನ್ ವಿದ್ಯಾಸಂಸ್ಥೆಗಳಾದ ಸಂಸ್ಥಾಪಕರಾದ ಡಾ.ಟಿ. ವೇಣುಗೋಪಾಲ್,
ಬಲಿಜ ಪ್ರಗತಿಪರ ಚಿಂತಕ ಬಸವನಗುಡಿ ಡಾ.ತ್ಯಾಗರಾಜ್, ಮಹಾತ್ಮ ಜ್ಯೋತಿ ಬಾಪುಲೆ ಪ್ರಶಸ್ತಿ ಪುರಸ್ಕೃತರಾದ ಬಳೇಪೇಟೆ ವೆಂಕಟೇಶ್, ಯೋಗಿನಾರಾಯಣ ಕ್ರೆಡಿಟ್ ಕೋ.ಆ. ಸೊಸೈಟಿಯ ಅಧ್ಯಕ್ಷ ಎಸ್. ಶ್ರೀರಾಮುಲು, ಉಪಾಧ್ಯಕ್ಷ ಜಿ. ತುಳಸಿದಾಸ್, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ 1500ಕ್ಕೂ ಹೆಚ್ಚಿನ ಮಹಿಳೆಯರಿಗೆ ಸಂಪ್ರಾದಾಯಿಕ ಫಲ-ಪುಷ್ಪಗಳೊದಿಗೆ ಸೀರೆಗಳನ್ನು ವಿತರಿಸಿದರು, ವಿಜಯನಗರ ಚಕ್ರವರ್ತಿ ಕೃಷ್ಣದೇವರಾಯ ದಾಸೋಹ ಪ್ರಾಂಗಣದಲ್ಲಿ ಸುಮಾರು 20 ಸಾವಿಕ್ಕೂ ಹೆಚ್ಚಿನ ಸಾರ್ವಜನಿಕರಿಗೆ ಭೋಜನದ ವ್ಯವಸ್ಥೆ ಮಾಡಿದ್ದರು. ಈ ಕಾರ್ಯಕ್ರಮವು ಐತಿಹಾಸಿಕವಾಗಿತ್ತು.