ದೇವನಹಳ್ಳಿ: ತಾಲ್ಲೂಕಿನ ಬುದಿಗೆರೇ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ದೇಶಿ ನಾರಾಯಣಸ್ವಾಮಿ ಹಾಗೂ ಶ್ರೀ ರಾಮಚಂದ್ರ ಸ್ವಾಮಿ ಬ್ರಹ್ಮರಥೋತ್ಸವ. ವಿಜೃಂಭಣೆಯಿಂದ.ಸಹಸ್ರಾರು ಭಕ್ತಾಧಿಗಳ ಸಮ್ಮುಕದಲ್ಲಿ ನಡೆಯಿತು.
ಇಂದ್ರಾದಿ ದೇವತೆಗಳಿಂದ ಪ್ರತಿಷ್ಠವಾದ ಪಂಚ ನಾರಾಯಣರಲ್ಲೋಂದಾದ ಶ್ರೀ ಭೂನೀಳಾ ಸಮೇತ ಶ್ರೀ ದೇಶನಾರಾಯಣ ಸ್ವಾಮಿ ಹಾಗೂ ಶ್ರೀ ರಾಮಚಂದ್ರಸ್ವಾಮಿ ದೇವರುಗಳಿಗೆ ಪಾಂರಾತ್ರ ಆಗಮ ಪ್ರಕಾರವಾಗಿ ನವದಿನ ಸಂಕಲ್ಪಪೂರಕವಾಗಿ ಅಂಕುರಾರ್ಪಣಾದಿ ಉತ್ಸವಗಳು ಹೋಳಿ ಹುಣ್ಣಿಮೆ ಶ್ರೀ ಸ್ವಾಮಿಯವರ ಬ್ರಹ್ಮರಥೋತ್ಸವ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಎತ್ತುಗಳ ಪ್ರದರ್ಶನ, ಕೀಲುಕುದುರೆ, ತಮಟೆ ವಾದ್ಯ, ಹನುಮ ವೇಷದಾರಿ ಮೆರವಣಿಗೆ.
ಊರಿನ ಸಾಯಿಬಾಬಾ ದೇವಾಲಯಕ್ಕೆ ಹೋಗುವ ಮಾರ್ಗದ ಸರ್ಕಲ್ ವರೆಗೆ ಸಾಗಿತು. ಸಾಯಿಬಾಬಾ ದೇವಾಲಯದಲ್ಲಿ ಅನ್ನಸಂತರ್ಪಣೆ ಹಾಗೂ ಎತ್ತಿನ ಬಂಡಿಗಳಲ್ಲಿ ಭಕ್ತಾಧಿಗಳಿಗೆ ಪಾನಕ, ಮಜ್ಜಿಗೆ ಮತ್ತು ಹೆಸರುಬೇಳೆ ನೀಡಲಾಗುತ್ತಿತ್ತು. ಈ ಬಾರಿಯ ಬ್ರಹ್ಮರಥೋತ್ಸವವು ಭಕ್ತರ ಸಮ್ಮೂಕದಲ್ಲಿ ಅದ್ದೂರಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ.ಮಾಜಿ ಶಾಸಕರುಗಳಾದ ವೆಂಕಟಸ್ವಾಮಿ, ಮುನಿನರಸಿಂಹಯ್ಯ, ಜಿಪಂ ಮಾಜಿ ಅಧ್ಯಕ್ಷ ಬಿ.ರಾಜಣ್ಣ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವಿ.ಶಾಂತಕುಮಾರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಣ್‍ಗೌಡ, ಬೂದಿಗೆರೆ ಗ್ರಾಪಂ ಅಧ್ಯಕ್ಷೆ ಗೀತಾ ಆನಂದ್, ಉಪಾಧ್ಯಕ್ಷೆ ರಿಜ್ವಾನ ನಜೀರ್ ಅಹಮದ್, ಗ್ರಾಪಂ ಸದಸ್ಯ ರಾಮಾಂಜಿನೇಯದಾಸ್, ಸೇರಿದಂತೆ ಹಲವಾರು ಗಣ್ಯರು ರಥೋತ್ಸವ ಮತ್ತು ಅನ್ನಸಂತರ್ಪಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ವಿ ಎಸ್ ಎಸ್ ಎನ್ ಅಧ್ಯಕ್ಷ ಲಕ್ಷ್ಮಣ್‍ಗೌಡ, ನಿರ್ದೇಶಕ ಹಿತ್ತರಹಳ್ಳಿ ರಮೇಶ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಭಾರತಿಲಕ್ಷ್ಮಣ್‍ಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಿವಾಸ್‍ಗೌಡ, ಶಾರದಮ್ಮ ಸೀನಪ್ಪ, ಸಮಾಜ ಸೇವಕ ಎಸ್‍ಬಿ ಗ್ರೂಪ್‍ನ ಸುರೇಶ್, ಗ್ರಾಪಂ ಸದಸ್ಯ ಲಕ್ಷ್ಮಣ್‍ಮೂರ್ತಿ, ಜೆಡಿಎಸ್ ಪಕ್ಷದ ರಾಜ್ಯ ಕಾರ್ಯಕಾರಣಿ ಸಮಿತಿಯ ಸದಸ್ಯರಾದ ಶ್ರೀನಾಥ್ ಗೌಡ. ಜೊನ್ನಹಳ್ಳಿ ಮುನಿರಾಜ್.ಧರ್ಮರಾಯಸ್ವಾಮಿ ದೇವಾಲಯದ ಮುಖಂಡರಾದ ನಾರಾಯಣಸ್ವಾಮಿ.
ಗ್ರಾಪಂ ಸದಸ್ಯರಾದ ಮಂಜುನಾಥ್, ಆರತಿ ಅಪ್ಪಯ್ಯ, ವೆಂಕಟೇಶ್, ಮಂಜುಳ ಶ್ರೀನಿವಾಸ್‍ಗೌಡ, ಗಂಗವಾರ ಗ್ರಾಮದ ಮುಖಂಡರಾದ ರಾಜಣ್ಣ. ಬುದಿಗೆರೆ ಜೆಡಿಎಸ್ ಪಕ್ಷದ ಮುಖಂಡರಾದ ನಾರಾಯಣಸ್ವಾಮಿ.ಮುಖಂಡರಾದ ಅನಂತರಾಜ್. ತಬ್ಬಲಿಂಗೇಶ್ವರ ಸ್ವಾಮಿ ದೇವಾಲಯದ ಅಧ್ಯಕ್ಷರಾದ ಬೈರೇಗೌಡ. ಹಾಗೂ ಬೂದಿಗೆರೆ ಗ್ರಾಮದ ಹಲವಾರು ಭಕ್ತರು ರಥದ ಮೆರವಣಿಗೆಯಲ್ಲಿ. ದವಣ ಮತ್ತು ಬಾಳೆಹಣ್ಣನ್ನು ಸ್ವಾಮಿಗೆ ಸರ್ಪಿಸಿದರು.
Leave a Review