“ರೋಹಿತ್ ಶರ್ಮಾ ಭಾರತ ತಂಡದ ಟಿ೨೦ ಕ್ರಿಕೆಟ್ ಆಟದ ಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿ, ಆಕ್ರಮಣಕಾರಿ ಬ್ಯಾಟಿಂಗ್ನಲ್ಲಿ ಹೊಸ ಜಾಗತಿಕ ಮಾನದಂಡಗಳನ್ನು ಸ್ಥಾಪಿಸಿದರು. ಅದನ್ನೇ ಬಳಿಕ ಉಳಿದ ತಂಡಗಳೂ ಅನುಸರಿಸಿದವು” ಇದು ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮಾ ಅವರು ತಂದ ವ್ಯಾಪಕ ಬದಲಾವಣೆಯ ಬಗ್ಗೆ ತಂಡದ ಮಾಜಿ ಪ್ರಧಾನ ಕೋಚ್ ಆಗಿದ್ದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಹೇಳಿದ ಪ್ರಶಂಸೆಯ ಮಾತುಗಳು.
ಬ್ರೇಕ್ ಫಾಸ್ಟ್ ವಿಥ್ ಚಾಂಪಿಯನ್ಸ್ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ ಅವರು, “ನನಗಿಂತ ಮೊದಲು ಏನಾಯಿತು ಎಂಬುದರ ಬಗ್ಗೆ ನಾನು ಮಾತನಾಡಲು ಸಾಧ್ಯವಿಲ್ಲ. ಅದು
ನನ್ನ ಹೇಳಿಕೆಯಲ್ಲ. ಆದರೆ ನಾನು ಬಂದಾಗಿನಿAದ, ರೋಹಿತ್ ಜೊತೆಗಿನ ನಮ್ಮ ಹೆಚ್ಚಿನ ಚರ್ಚೆಗಳು ನಾವು ಇನ್ನಷ್ಟು ಆಕ್ರಮಣಕಾರಿ ಕ್ರಿಕೆಟ್ ಆಡಬೇಕು ಎಂಬುದರ ಬಗ್ಗೆಯೇ ಇರುತ್ತಿದ್ದವು. ಆಟ ಹೇಗೆ ವಿಕಸನಗೊಳ್ಳುತ್ತಿದೆ ಎಂಬುದನ್ನು ನಾವು ಗಮನಿಸುತ್ತಿದ್ದೆವು. ಹಾಗಾಗಿಯೇ ನಾವು ಮೊದಲಿನಿಂದಲೇ ಅದೇ ದಿಕ್ಕಿನಲ್ಲಿ ಸಾಗಿದೆವು.” ಎಂದು ತಿಳಿಸಿದರು.
ಭಾರತ ತಂಡ ಅಕ್ರಮಣಕಾರಿ ಮನೋಭಾವ ಬೆಳೆಸಿಕೊಳ್ಳುವಲ್ಲಿ ರೋಹಿತ್ ಶರ್ಮಾ ಅವರ ಕೊಡುಗೆ ದೊಡ್ಡದು ಎಂಬುದನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ನಾವು ಈ
ದಿಕ್ಕಿನಲ್ಲಿ ಮುಂದುವರಿದಿರುವುದು ನನಗೆ ಸಂತೋಷ ತಂದಿದೆ. ಭಾರತದ ಟಿ೨೦ ಕ್ರಿಕೆಟ್ ಆಟದ ಶೈಲಿ ಈಗ ಎಲ್ಲರನ್ನೂ ಮೀರಿಸಿದೆ. ಭಾರತದ ಬ್ಯಾಟಿಂಗ್ ಈಗ ಆಕಾಶಕ್ಕೆ ಏರಿದೆ.
ಸ್ಕೋರ್ಗಳು ೩೦೦ರ ಸಮೀಪ ತಲುಪುತ್ತಿವೆ. ಈಗ ವಿಶ್ವದ ಇತರ ತಂಡಗಳು ಇದನ್ನು ತಲುಪಲು ಪ್ರಯತ್ನಿಸುತ್ತಿವೆ. ಕೇವಲ ೩-೪ ವರ್ಷಗಳಲ್ಲಿ, ಎಲ್ಲರೂ ಭಾರತವನ್ನು ನೋಡಿ, ‘ಅಯ್ಯೋ, ನಾವು ಇದನ್ನು ಸಾಧಿಸಬೇಕು’ ಎಂದು ಮಾತನಾಡಿಕೊಳ್ಳುತ್ತಿದ್ದಾರೆ” ಎಂದು ಹೇಳಿದರು. ಟಿ೨೦ ಮತ್ತು ಟೆಸ್ಟ್ ಕ್ರಿಕೆಟ್ ಗಳಿಂದ ನಿವೃತ್ತರಾಗಿರುವ ರೋಹಿತ್ ಶರ್ಮಾ ಪ್ರಸ್ತುತ
ಏಕದಿನ ಕ್ರಿಕೆಟ್ ನಲ್ಲಿ ಮಾತ್ರ ಆಡುತ್ತಿದ್ದು ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ಸರಣಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದರು. ಪರಿಣಾಮ ಅವರು ಪ್ರಸ್ತುತ ೩೮ರ ಹರೆಯದಲ್ಲಿ ಐಸಿಸಿ
ಟೆಸ್ಟ್   ರ?ಯಾಂಕಿಂಗ್ ನಲ್ಲಿ ವಿಶ್ವದ ನಂಬರ್  ಒನ್ ಬ್ಯಾಟರ್ ಆಗಿ ಇತಿಹಾಸ ನಿರ್ಮಿಸಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಜೊತೆಯಾಗಿ ೩೯೧ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸಮಗಟ್ಟಿದ್ದಾರೆ.


 
		 
		 
		
 
		
 
    