ಭಾರತ ತಂಡದ ನಾಯಕ ರೋಹಿತ್ ಶರ್ಮಾ ಸದ್ಯ ಉತ್ತಮ ಫಾರ್ಮ್ ನಲ್ಲಿದ್ದಾರೆ. ಅವರು ಟಿ20, ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಉತ್ತಮ ಸ್ಕೋರ್ ಮಾಡುತ್ತಿದ್ದಾರೆ. ಅಲ್ಲದೇ ಸದ್ಯ ಈ ಮೂರು ಮಾದರಿಯಲ್ಲಿ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ನಾಯಕರಾಗಿದ್ದಾರೆ. ಅವರ ನಾಯಕತ್ವದಲ್ಲಿ 2023ರ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡಿತ್ತು.
ರೋಹಿತ್ ನಾಯಕತ್ವದಲ್ಲಿ ಟೀಂ ಇಂಡಿಯಾ ಈ ಟೂರ್ನಿಯಲ್ಲಿ 10 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಗೆದ್ದಿತ್ತು. ಆದರೆ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ವಿಶ್ವಕಪ್ ಕನಸು ನಸಾಗದೇ ಉಳಿಯಿತು. ರೋಹಿತ್ ಶರ್ಮಾ ಪ್ರಸ್ತುತ 35 ವರ್ಷ ವಯಸ್ಸಿನವರಾಗಿದ್ದಾರೆ. ಅವರು ಯಾವಾಗ ನಿವೃತ್ತರಾಗುತ್ತಾರೆ ಎಂದು ಆಗಾಗ್ಗೆ ಕೇಳಲಾಗುತ್ತದೆ. ಇದಕ್ಕೆ ಸ್ವತಃ ಅವರೇ ಉತ್ತರಿಸಿದ್ದಾರೆ.
ಬ್ರೇಕ್ಫಾಸ್ಟ್ ವಿತ್ ಚಾಂಪಿಯನ್ಸ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಸ್ವತಃ ರೋಹಿತ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಬ್ರೇಕ್ಫಾಸ್ಟ್ ವಿಥ್ ಚಾಂಪಿಯನ್ಸ್ ಕಾರ್ಯಕ್ರಮದಲ್ಲ ಗೌರವ್ ಕಪೂರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ರೋಹಿತ್ ಶರ್ಮಾ, ‘ನಾನು ಇದೀಗ ಉತ್ತಮವಾಗಿ ಆಡುತ್ತಿದ್ದೇನೆ. ಹಾಗಾಗಿ ಮುಂದಿನ ಕೆಲವು ವರ್ಷಗಳ ಕಾಲ ಕ್ರಿಕೆಟ್ ಆಡುತ್ತೇನೆ.
ನಾನು ನಿಜವಾಗಿಯೂ ಭಾರತಕ್ಕಾಗಿ ವಿಶ್ವಕಪ್ ಗೆಲ್ಲಲು ಬಯಸುತ್ತಿದ್ದೇನೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯ 2025ರಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಖಂಡಿತಾ ಗೆಲುವು ಸಾಧಿಸಲಿದೆ ಎಂದು ಆಶಿಸುತ್ತೇನೆ ಎಂದು ಹೇಳುವ ಮೂಲಕ ರೋಹಿತ್ ಮುಂದಿನ ವರ್ಷ ಟೆಸ್ಟ್ ಚಾಂಪಿಯನ್ ಶಿಪ್ ಬಳಿಕ ನಿವೃತ್ತಿ ನೀಡುವ ಸಾಧ್ಯತೆ ಬಗ್ಗೆ ತಿಳಿಸಿದ್ದಾರೆ.
ಇನ್ನು, ರೋಹಿತ್ ಮತ್ತು ವಿರಾಟ್ ಕೊಹ್ಲಿ ಸರಿಸುಮಾರು ಒಂದೇ ಸಮಕಾಲೀನ ಆಟಗಾರರು. ಇಬ್ಬರೂ ಸಹ ಭಾರತ ತಂಡಕ್ಕಾಗಿ ದೊಡ್ಡ ಕೊಡುಗೆಯನ್ನೇ ನೀಡಿದ್ದಾರೆ. ಆದ್ರೆ ಇದೀಗ ಈ ಇಬ್ಬರೂ ದಶಕಗಳ ಕ್ರಿಕೆಟ್ ಜರ್ನಿಗೆ ಇನ್ನೇನು ವರ್ಷಗಳ ಬಳಿಕ ನಿವೃತ್ತಿ ಹೇಳುವ ಸೂಚನೆ ದೊರಕಿದಂತಾಗಿದೆ. ಅಲ್ಲಿಗೆ ಮತ್ತೊಂದು ಲೆಜೆಂಡ್ ಆಟಗರರಿಬ್ಬರು ಭಾರತ ತಂಡದಿಂದ ದೂರವಾದಂತಾಗುತ್ತದೆ