ಮಾಗಡಿ: ಕ್ಷುಲ್ಲಕ ಕಾರಣಕ್ಕಾಗಿ ಮಾಗಡಿಗೆ ಹೇಮಾವತಿ ನೀರು ಬಿಡುವುದು ಬೇಡ ಎಂದು ಕೆಲವು ತುಮಕೂರಿನ ಜನಪ್ರತಿನಿಧಿಗಳು ತಡೆ ಒಡುತ್ತಿದ್ದು ಅವರ ಹೋರಾಟದಲ್ಲಿ ಯಾವುದೇ ಹುರುಳಿಲ್ಲ. ನಾವು ನಮ್ಮ ಹಕ್ಕನ್ನು ಪ್ರತಿಪಾದಿಸುವುದು ಅತ್ಯವಶ್ಯಕವಾಗಿದೆ.ಮಾಗಡಿಗೆ ಹೇಮಾವತಿ ನೀರನ್ನು ತಂದೇ ತರುತ್ತೇವೆ ಎಂದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ಸ್ಪಷ್ಟನೆ ನೀಡಿದರು.
ತಾಲೂಕಿನ ಮಾರೂರು ಹ್ಯಾಂಡ್ಪೋಸ್ಟ್ನಲ್ಲಿ ತಾಲೂಕಿನ 76 ಕೆರೆಗಳಿಗೆ ಹೇಮಾವತಿ ನೀರು ಹರಿಸುವ ವಿಷಯದಲ್ಲಿ ತುವiಕೂರಿನ ಕೆಲವು ರಾಜಕಾರಣಿಗಳು ತೊಂದರೆ ನೀಡುತ್ತಿರುವ ಬಗ್ಗೆ ತಾಲೂಕು ರೈತ ಸಂಘದ ಅದ್ಯಕ್ಷ ಹೊಸಪಾಳ್ಯ ಲೋಕೇಶ್ ನೇತೃತ್ವದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು 1993 ರಲ್ಲಿ ಅಂದಿನ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರಾಗಿದ್ದ ಎಸ್.ಎಂ.ಕೃಷ್ಣ ಅವರುಗಳು ಹೇಮಾವತಿ ಯೋಜನೆಗೆ ಮಂಜೂರಾತಿ ನೀಡಿದ್ದರು.,
ಆನಂತರ ಅನೇಕ ಪ್ರಕಾರಗಳು ನಡೆದಿದ್ದು,ಕುಣಿಗಲ್ನ ವೈ.ಕೆ.ರಾಮಯ್ಯ,ಚನ್ನಪಟ್ಟಣದ ವರದೇಗೌಡರು, ಶಾಸಕ ಹೆಚ್.ಸಿ.ಬಾಲಕೃಷ್ಣ, ಟಿ.ಎ.ರಂಗಯ್ಯ ಅವರುಗಳನ್ನೊಳಗೊಂಡ ಸಮಿತಿಯಲ್ಲಿ ಹೇಮಾವತಿ ನೀರನ್ನು ಎಷ್ಟು ಪ್ರಮಾಣದಲ್ಲಿ ಮಾಗಡಿ ತಾಲೂಕಗೆ ಹರಿಸಬೇಕು ಎಂದು ನಿಗಧಿಯಾಗಿತ್ತು. ಹೇಮಾವತಿ ನೀರು ಹಂಚಿಕೆಯ ಬಗ್ಗೆ ನಾಲ್ಕೈದು ಸಮಿತಿಗಳನ್ನು ರಚನೆ ಮಾಡಲಾಗಿತ್ತು.ಸಭೆಗಳಲ್ಲಿ ಯರ್ಯಾರು ಮಾತನಾಡಿದರು ಎನ್ನುವ ವರದಿ ಸಹ ಇದೆ.
ಆನಂತರ ರಾಜ್ಯದಲ್ಲಿ ಅನೇಕರು ನೀರಾವರಿ ಮಂತ್ರಿಗಳಾದರು ನಂತರ ಕಳೆದ ಭಾರಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಹೇಮಾವತಿ ನೀರಾವರಿ ಯೋಜನೆಗೆ ಅಧಿಕೃತವಾಗಿ ಮಂಜೂರಾತಿ ಸಿಕ್ಕಿತ್ತು. ಸಂಸದ ಡಿ.ಕೆ.ಸುರೇಶ್ ಅವರು ಯೋಜನೆಯನ್ನು ಮಾರ್ಪಾಡು ಮಾಡಿ ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿಗೆ 900 ಕೋಟಿ ಹಣ ಮಂಜೂರು ಮಾಡಿಸಿ ನೀರಾವರಿ ಯೋಜನೆಗಾಗಿ ಶ್ರಮಿಸಿದ್ದಾರೆ.
ಮೊದಲು ಹೆಚ್.ಸಿ.ಬಾಲಕೃಷ್ಣ ಹೇಮಾವತಿ ಯೋಜನೆ ಬಗ್ಗೆ ತಕಾರರು ವ್ಯಕ್ತಪಡಿಸಿದ್ದರೂ ಸಹ ಈಗ ಸಂಪೂರ್ಣ ಸಹಕಾರ ನೀಡುತ್ತಿದ್ದು ಕಾಮಗಾರಿ ನಡೆಯುತ್ತಿದೆ,ಹೇಮಾವತಿ ನೀರಾವರಿ ವಿಷಯದಲ್ಲಿ ಇಲ್ಲಿ ಯಾವುದೇ ರಾಜಕೀಯ ನಡೆಯುತ್ತಿಲ್ಲ.ಹೇಮಾವತಿ ನೀರಾವರಿ ಯೋಜನೆಯ ಕಾಮಗಾರಿಗೆ ತುಮಕೂರು ಜಿಲ್ಲೆಯ ಕೆಲವು ರಾಜಕಾರಣಿಗಳು ತಡೆಯೊಡ್ಡುತ್ತಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ಬೇಸರ ವ್ಯಕ್ತಪಡಿಸಿದರು.
ಆಗ ಹೇಮಾವತಿ ಯೋಜನೆಗೆ ಮಂಜೂರಾತಿ ಕೊಟ್ಟಂತಹ ಸಿದ್ದರಾಮಯ್ಯ ಅವರು ಈಗಲೂ ಸಹ ಮುಖ್ಯಮಂತ್ರಿಯಾಗಿದ್ದಾರೆ ರಾಜ್ಯದಲ್ಲಿ ನಮ್ಮದೇ ಸರಕಾರವಿದೆ,ನಮ್ಮ ಜಿಲ್ಲೆಯವರೇ ಆದ ಡಿ.ಕೆ.ಶಿವಕುಮಾರ್ ನೀರಾವರಿ ಸಚಿವರಾಗಿದ್ದು,ಮಾಗಡಿ ತಾಲೂಕಿನ 83 ಕೆರೆಗಳಿಗೆ ಹೇಮಾವತಿ ನೀರು ಹರಿಸುವ ವಿಷಯದಲ್ಲಿ ನಾವು ದೃತಿಗೆಡುವ ಅವಶ್ಯಕತೆ ಇಲ್ಲ. ನಾನು, ಶಾಸಕ ಹೆಚ್.ಸಿ.ಬಾಲಕೃಷ್ಣ,ಸಂಸದ ಡಿ.ಕೆ.ಸುರೇಶ್ ಅವರು ಸೇರಿ ಈ ಯೋಜನೆಯನ್ನು ಖಂಡಿತ ಜಾರಿಗೆ ತರುತ್ತೇವೆ ಎಂದು ಹೆಚ್.ಎಂ.ರೇವಣ್ಣ ಭರವಸೆ ನೀಡಿದರು.
ಬಿಜೆಪಿ ಮುಖಂಡ ಎ.ಹೆಚ್.ಬಸವರಾಜು ಮಾತನಾಡಿ,ಹೇಮಾವತಿ ನೀರಾವರಿ ವಿಷಯದಲ್ಲಿ ಪಕ್ಷ ಮುಖ್ಯವಲ್ಲ ತಾಲೂಕಿನ ರೈತರ ಹಿತ ಚಿಂತನೆ ಮುಖ್ಯವಾಗಿದೆ,ಮಾಗಡಿ ತಾಲೂಕಿನ ಕೆರೆಗಳಿಗೆ ಹೇಮಾವತಿ ನೀರು ಹರಿಸುವ ಬಗ್ಗೆ ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರಾದ ಡಿ.ಕೆ.ಶಿವಕುಮಾರ್ ಅವರನ್ನು ನಾವು ಕೇಳಬೇಕಾಗಿದೆ.ನೀರಾವರಿ ಯೋಜನೆಗಳ ಕಾಮಗಾರಿ ಪ್ರಾರಂಭವಾಗಬೇಕಾದರೆ ನೀರಾವರಿ ಸಚಿವರ ಗಮನದಲ್ಲಿ ಇರಲಿಲ್ಲವೇ, ಕ್ಯಾಬಿನೇಟ್ನಲ್ಲಿ ತೆಗೆದುಕೊಂಡ ನಿರ್ಣಯ ಏನಾಗಿತ್ತು,ಸುಮಾರು 960 ಕೋಟಿ ಹಣ ಬಿಡುಗಡೆಯಾಗಿದ್ದರೂ ಸಹ ತುಮಕೂರು ಜಿಲ್ಲೆಯ ಕೆಲವು ರಾಜಕಾರಣಿಗಳು ತಡೆಯುಡುತ್ತಿರುವ ಬಗ್ಗೆ ನೀರಾವರಿ ಸಚಿವರು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ ಅವರು,ಹೇಮಾವತಿ ನೀರಾವರಿಗೆ ತಡೆಯೊಡ್ಡುತ್ತಿರುವ”ಸೊಗಡು ಶಿವಣ್ಣ ಅವರನ್ನು ಈಗಾಗೇ ಬಿಜೆಪಿ ಪಕ್ಷದಿಂದ ಅಮಾನತ್ತು ಮಾಡಲಾಗಿದೆ”.
ಅವರು ರಾಜಕಾರಣದಲ್ಲಿ ಮುಂಚೂಣಿಗೆ ಬರಬೇಕು ಎನ್ನುವ ಕಾರಣದಿಂದ ನೀರಾವರಿ ಬಗ್ಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಎ.ಹಚ್.ಬಸವರಾಜು ಕಿಡಿಕಾರಿದರು.ಬೆಜೆಪಿ ಮುಖಂಡ ಪ್ರಸಾದ್ಗೌಡ ಮಾತನಾಡಿ, ಹೇಮಾವತಿ ನದಿ ಚಿಕ್ಕಮಗಳೂರಿನಲ್ಲಿ ಹುಟ್ಟುತ್ತದೆ, ಇದಕ್ಕೆ 1979 ರಲ್ಲಿ ಅಣೆಕಟ್ಟು ನಿರ್ಮಿಸಲಾಗಿದ್ದು, ಆ ಸಮಯದಲ್ಲಿ ನೀರಿನ ಹಂಚಿಕೆ ಸಮಾನವಾಗಿ ಆಗಬೇಕೆಂದು ತೀರ್ಮಾನವಾಗುತ್ತದೆ.
2019 ರಲ್ಲಿ ಸರಕಾರ ಆದೇಶದ ಮೇರೆಗೆ ಸುಮಾರು 14 ತಾಲೂಕುಗಳಿಗೆ ನೀರಿನ ಹಂಚಿಕೆಯಾಗಬೇಕೆಂದು ಕಾವೇರಿ ಕೊಳ್ಳದ ಸಮಿತಿಯಲ್ಲಿ ತೀರ್ಮಾನವಾಗುತ್ತದೆ.ಅದರೆ ತುಮಕೂರಿನ ಕೆಲವು ರಾಜಕಾರಣಿಗಳು ಪ್ರಾಣ ಹೋದರೂ ಸರಿ ಮಾಗಡಿ ತಾಲೂಕೆಗೆ ನೀರು ಬಿಡುವುದಿಲ್ಲ ಎನ್ನುತ್ತಿದ್ದಾರೆ. ಹಾಸನದವರು ನೀರು ಬಿಡುವುದಿಲ್ಲ ಎಂದಿದ್ದರೆ ತುಮಕೂರಿಗೆ ನೀರು ಬರುತ್ತಿರಲಿಲ್ಲ.ನೀರು ಭಗವಂತ ನಮಗೆ ನೀಡಿರುವ ವರ,ಅದನ್ನು ಸರ್ವ ಜನಾಂಗದವರಿಗೆ ಸಮಾನವಾಗಿ ಹಂಚಿಕೆಯಾಗಬೇಕು ಇದರಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಮನವಿ ಮಾಡಿದರು.
ರಸ್ತೆ ತಡೆಗೆ ವಿರೋಧ: ತುಮಕೂರಿನ ಕೆಲವು ರಾಜಕಾರಣಿಗಳು ಮಾಗಡಿ ತಾಲೂಕಿಗೆ ಹೇಮಾವತಿ ನೀರು ಹರಿಸುವುದಿಲ್ಲ ಎಂದು ಹೋರಾಟ ನಡೆಸುತ್ತಿರುವ ಹಿನ್ನಲೆಯಲ್ಲಿ ತಾಲೂಕು ರೈತ ಸಂಘ,ಬಿಜೆಪಿ ಹಾಗೂ ತಾಲೂಕಿನ ಎಲ್ಲಾ ಸಂಘ ಸಂಸ್ಥೆಗಳು ಹಾಗೂ ಸಂಘಟನೆಗಳ ವತಿಯಿಂದ ಶುಕ್ರವಾರ ಮರೂರು ಹ್ಯಾಂಡ್ಪೋಸ್ಟ್ನಲ್ಲಿ ಹೆದ್ದಾರಿ ತಡೆ ಹಮ್ಮಿಕೊಂಡಿದ್ದು,ಇದಕ್ಕಾಗಿ ಮಾಜಿ ಸಚಿವ ಹೆಚ್.ಎಂ.ರೇವಣ್ಣ,ಬಿಜೆಪಿ ಪಕ್ಷದ ಮುಖಂಡರು ಹಾಗೂ ಸಂಘ ಸಂಸ್ಥೆಗಳ ನೂರಾರು ಮಂದಿ ಜಮಾಯಿಸಿದ್ದರು.
ಹೆಚ್.ಎಂ.ರೇವಣ್ಣ ನೇತೃತ್ವದಲ್ಲಿ ಪ್ರತಿಭಟನಾ ನಿರತರು ಹೆದ್ದಾರಿ ತಡೆ ನಡೆಸಲು ಮುಂದಾದ ಸಮಯದಲ್ಲಿ ಪೊಲಿಸರು ಪ್ರತಿಭಟನಾಕಾರರನ್ನು ತಡೆದಾಗ ಹೆಚ್.ಎಂ.ರೇವಣ್ಣ ಅವರು ಪೊಲಿಸ್ ಅಧಿಕಾರಿಗಳೊಂದಿಗೆ ಮಾತಿನ ಚಕಮುಖಿ ನಡೆಸಿದರು.ಒಂದು ನಿಮಿಷ ಹೆದ್ದಾರಿ ತಡೆದು ತಹಸೀಲ್ದಾರ್ ಅವರಿಗೆ ಮನವಿ ಪತ್ರ ಕೊಡಲು ಸಹ ಪೊಲಿಸರು ಪ್ರತಿಭಟನಾಕಾರರಿಗೆ ಅವಕಾಶ ಮಾಡಿಕೊಡಲಿಲ್ಲ.
ತಾಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್,ಕಲ್ಯಾಗೇಟ್ ರಾಘವೇಂದ್ರ, ತಾಪಂ ಮಾಜಿ ಅಧ್ಯಕ್ಷ ತಿಪ್ಪಸಂದ್ರ ವೆಂಕಟೇಶಣ್ಣ, ಮಾಜಿ ಸದಸ್ಯ ಸಿ.ಜಯರಾಮ್, ಕಸಾಪ ತಾಲ್ಲೂಕು ಅದ್ಯಕ್ಷ ತಿಪ್ಪಸಂದ್ರ ಪದ್ಮನಾಭ,ಯೂತ್ ಅಧ್ಯಕ್ಷ ರವಿಕುಮಾರ್(ರಂಗಪ್ಪ)ರಂಗಸ್ವಾಮಯ್ಯ, ಕಾಂಗ್ರೆಸ್ ಪಕ್ಷದ ಮಹಿಳಾ ಮುಖಂಡರಾದ ಶೈಲಜ ವೆಂಕಟೇಶ್, ಚಂದೂರಾಯನಹಳ್ಳಿ ವನಜಾ, ಕೆಂಚನಹಳ್ಳಿ ಕಿರಣ್ಕುಮಾರ್, ಬಸವರಾಜು, ಮರೂರು ವೆಂಕಟೇಶ್ ಸೇರಿದಂತೆ ಮತ್ತಿತರಿದ್ದರು.