ಮಾಗಡಿ: ಮಾಜಿ ಶಾಸಕ ಎ.ಮಂಜುನಾಥ್ ಅವರು ನಮ್ಮ ವಿರುದ್ದ ಮಾಡುತ್ತಿರುವ ಟೀಕೆ,ಟಿಪ್ಪಣಿಗಳಲ್ಲಿ ಯಾವುದೇ ಹುರುಳಿಲ್ಲ.ನಮ್ಮಗಳಲ್ಲಿ ತಪ್ಪುಗಳನ್ನು ಹುಡುಕುವುದೇ ಅವರ ದಿನನಿತ್ಯದ ಕಾಯಕವಾಗಿದೆ ಎಂದು ಬಮೂಲ್ ನಿರ್ದೇಶಕರಾದ ಹೆಚ್.ಎನ್.ಅಶೋಕ್ ಹೇಳಿದರು.
ತಾಲ್ಲೂಕಿನ ಚಂದೂರಾಯನಹಳ್ಳಿ ಹಾಲಿನ ಡೈರಿ ಬೆಳ್ಳಿಹಬ್ಬದ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂಪ್ರಸಾದ್ ಯಾದವ್ ಅವರಿಗೆ ಒಟ್ಟು 13 ಮಂದಿ ಹೆಣ್ಣುಮಕ್ಕಳು ಜನಿಸಿದ್ದರು.ಇದಕ್ಕೆ ಕಾಂಗ್ರೆಸ್ಸಿನವರೇ ಕಾರಣ ಎಂದು ಹೇಳಿದ್ದರು.ಇವರ ಹೇಳಿಕೆಗೂ ಮಾಜಿ ಶಾಸಕ ಎ.ಮಂಜುನಾಥ್ ಅವರ ಟೀಕೆಗೂ ಸಂಭAದವೆAಬAತಾಗಿದೆ.ತಾನು ಕಳ್ಳ ಪರರನ್ನು ನಂಬಾ ಎಂಬಂತೇ ಇವರ ಅಧಿಕಾರಾವಧಿಯಲ್ಲಿ ಏನು ಅಭಿವೃದ್ಧಿ ಮಾಡದೇ ಇದೀಗ ನಮ್ಮ ಅಭಿವೃದ್ಧಿ ಸಹಿಸಿಕೊಳ್ಳದೇ ಬಾಲಿಶ ಹೇಳಿಕೆ ನೀಡುವಲ್ಲಿ ಇವರು ನಿರತರಾಗಿದ್ದಾರೆ.ಇವರದ್ದು ಮಾರ್ಜಾಲ ಬುದ್ದಿಯಾಗಿದೆ.ಇವರ ಹೇಳಿಕೆಗೆ ಸೊಪ್ಪು ಹಾಕುವ ಅವಶ್ಯಕತೆ ಇಲ್ಲ ಎಂದು ಅಶೋಕ್ ತಿಳಿಸಿದರು.
ಹೆಚ್.ಎನ್.ಅಶೋಕ್ ಅವರು ಬಿಡಿಸಿಸಿ ಬ್ಯಾಂಕ್ ಅದ್ಯಕ್ಷರಾಗಿ ತಾಲ್ಲೂಕಿನ 29 ವಿಎಸ್ಎಸ್ಎನ್ ಸೊಸೈಟಿಗಳು ಆರ್ಥಿಕವಾಗಿ ಸಭಲರಾಗಲು ಶ್ರಮಿಸಿದ್ದಾರೆ.
ಇದನ್ನು ಎಲ್ಲರೂ ಕೂಡಾ ಕ್ರೀಡಾ ಮನೋಭಾವನೆಯಿಂಧ ಸ್ವೀಕರಿಸಬೇಕು.ಅದನ್ನು ಬಿಟ್ಟು ಇಲ್ಲಸಲ್ಲದ ಆರೋಪ ಮಾಡುವುದು ಯಾರಿಗೂ ಶೋಭೆಯಲ್ಲ ಎಂದು ಬಮೂಲ್ ಮಾಜಿ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದರು.
ಚಂದೂರಾಯನಹಳ್ಳಿ ಹಾಲಿನ ಡೈರಿ ಅದ್ಯಕ್ಷ ನಾರಾಯಣಪ್ಪ ಮಾತನಾಡಿ 133 ಸದಸ್ಯರಿಂದ ಪ್ರಾರಂಭಗೊAಡ ಸಂದರ್ಭದಲ್ಲಿ ಬಮೂಲ್ ಅದ್ಯಕ್ಷರಾದ ನರಸಿಂಹಮೂರ್ತಿಯವರು ಡೈರಿ ಕಟ್ಟಡ,ಹಾಲಿನ ಶಿಥಲೀಕರಣ ಘಟಕ ಸ್ಥಾಪನೆಯಾಗಲು ಸಹಕಾರ ನೀಡಿದ್ದರು.
ಚಂದೂರಾಯನಹಳ್ಳಿ ಹಾಲಿನ ಡೈರಿಗೆ ಪ್ರತಿನಿತ್ಯ 130 ಲೀಟರ್ ಹಾಲು ಪೂರೈಕೆಯಾಗುತ್ತಿತ್ತು.ಇದೀಗ ನಿರೀಕ್ಷೆಗೂ ಮೀರಿದಂತೆ ಹಾಲು ಪೂರೈಕೆಯಾಗುತ್ತಿದೆ.ಇದಕ್ಕೆ ವರ್ಷಕ್ಕೆ 60 ಸಾವಿರ ಲೀಟರ್ ಹಾಲನ್ನು ಹಾಕುತ್ತಿರುವ ಪಾರ್ವತಮ್ಮ ಮತ್ತಿತರೆ ರೈತರು ಕಾರಣೀಭೂತರಾಗಿದ್ದಾರೆ.134 ಕೋಟಿ ರೂಪಾಯಿ ಬ್ಯಾಂಕ್ ಖಾತೆಗೆ ವರ್ಷಕ್ಕೆ ಜಮೆಯಾಗುತ್ತಿದೆ ಎಂದರು.
ಜಿಪA ಮಾಜಿ ಅದ್ಯಕ್ಷ ಕಲ್ಕೆರೆ ಧನಂಜಯ,ಜುಟ್ಟನಹಳ್ಳಿ ವಿಎಸ್ಎಸ್ಎನ್ ಅದ್ಯಕ್ಷ ಜೆ.ಪಿ.ಚಂದ್ರೇಗೌಡ, ಭೂಬ್ಯಾಂಕ್ ಅದ್ಯಕ್ಷ ಜಾನಿಗೆರೆ ರವೀಶ್, ಟಿಎಪಿಸಿಎಂಎಸ್ ಅದ್ಯಕ್ಷ ಶಿವಪ್ರಸಾದ್, ಉಪಾಧ್ಯಕ್ಷ ರಾಜಣ್ಣ, ಕಾರ್ಯದರ್ಶಿ ಚಂದೂರಾಯನಹಳ್ಳಿ ರಾಜಣ್ಣ,ಕಲ್ಯಾ ಜಯಶಂಕರ್, ಸಿ.ವನಜಾ, ಕೋರಮಂಗಲ ಶ್ರೀನಿವಾಸ್, ಎಂ.ಡಿ.ಶ್ರೀಧರ್, ಅಜಯ್, ಡೈರಿ ನಿರ್ದೇಶಕರಾದ ಶ್ರೀನಿವಾಸ್, ತಿಮ್ಮೇಗೌಡ, ಸುರೇಶ್, ತಿಮ್ಮೇಗೌಡ, ಗಂಗಣ್ಣ, ಜಯಣ್ಣ, ಮಂಜುನಾಥ್, ವೆಂಕಟರಾಮಯ್ಯ, ಲಲಿತಮ್ಮ, ರಾಧಾ, ರಘುನಂದನ್ ಸೇರಿದಂತೆ ಮತ್ತಿತರಿದ್ದರು.
ಎ.ಮಂಜುನಾಥ್ ಆರೋಪದಲ್ಲಿ ಯಾವುದೇ ಹುರುಳಿಲ್ಲ: ಹೆಚ್.ಎನ್.ಅಶೋಕ್



