ಎಫ್ಐಎಚ್ 10ನೇ ವನಿತಾ ಜೂನಿ ಯರ್ ಹಾಕಿ ಪಂದ್ಯಾವಳಿ ಬುಧವಾರ ಆರಂಭಗೊಳ್ಳಲಿದ್ದು, ಬಲಿಷ್ಠ `ಸಿ’ ವಿಭಾಗದಲ್ಲಿರುವ ಭಾರತ ತನ್ನ ಮೊದಲ ಪಂದ್ಯದಲ್ಲಿ ಕೆನಡಾವನ್ನು ಎದುರಿಸಲಿದೆ. ಜರ್ಮನಿ ಮತ್ತು ಬೆಲ್ಜಿಯಂ ಈ ವಿಭಾಗದ ಮತ್ತೆರಡು ತಂಡಗಳು.
2022ರ ಆವೃತ್ತಿಯಲ್ಲಿ 4ನೇ ಸ್ಥಾನಿಯಾಗಿದ್ದ ಭಾರತ, ಈ ಬಾರಿ ಇನ್ನಷ್ಟು ಉನ್ನತ ಸ್ಥಾನಕ್ಕೆ ಏರುವ ಯೋಜನೆಯಲ್ಲಿದೆ. ಆದರೆ ಗ್ರೂಪ್ ವಿಭಾಗವೇ ಭಾರೀ ಸವಾಲಿನದ್ದಾಗಿದೆ.
ಕೆನಡಾ ವಿರುದ್ಧ ಕಳೆದ 3 ಪಂದ್ಯಗಳಲ್ಲಿ ಸಾಧಿಸಿದ ಗೆಲುವು ಭಾರತದ ಆತ್ಮ ವಿಶ್ವಾಸವನ್ನು ಖಂಡಿತವಾಗಿಯೂ ಹೆಚ್ಚಿ ಸಲಿದೆ. ಹಾಗೆಯೇ ವರ್ಷಾರಂಭ ದಲ್ಲಿ ಜಪಾನ್ನಲ್ಲಿ ನಡೆದ ಏಷ್ಯಾ ಕಪ್ ಹಾಕಿ ಚಾಂಪಿಯನ್ಶಿಪ್ನಲ್ಲಿ ಪ್ರಶಸ್ತಿ ಜಯಿಸಿದ ಸಾಧನೆಯೂ ನಮ್ಮವರಿಗೆ ಸ್ಫೂರ್ತಿ ಆಗಬೇಕಿದೆ.