ಬೆಂಗಳೂರು: ನಮಗೆ ರಾಮನ ಹೆಸರಿನಲ್ಲಿ ಒಡೆದಾಳುವವರು ಬೇಕಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜೈ ಶ್ರೀರಾಮ್ ಎಂದು ಘೋಷಣೆ ಕೂಗಿರುವ ವಿಷಯಕ್ಕೆ ಸಂಬಂಧಪಟ್ಟಂತೆ ಕೇಳಿ ಬಂದಿರುವ ಆಕ್ಷೇಪ ಮತ್ತು ಟೀಕೆಗೆ ಪ್ರತಿಕ್ರಿಯಸಿರುವ…
ಪರಮೇಶ್ವರ್ ಅವರು, ಯಾಕೆ ಸಿದ್ದರಾಮಯ್ಯ ಜೈಶ್ರೀರಾಮ್ ಎಂದು ಕೂಗಬಾರದಾ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ನಾನು ಸಹ ಜೈಶ್ರೀರಾಮ್ ಎಂದು ಕೂಗಿದ್ದೇನೆ ಎಂದಿರುವ ಪರಮೇಶ್ವರ್, ನಮಗೆ ದಶರಥ ರಾಮಬೇಕು, ಒಡೆದಾಳುವ ರಾಮನಲ್ಲಾ ಎಂದಿದ್ದಾರೆ.