ಏಪ್ರಿಲ್ 10ನೇ ತಾರೀಖು ವಿಶ್ವ ಹೋಮಿಯೋಪತಿ ದಿನವನ್ನು ಆಚರಿಸಲಾಗುತ್ತಿದೆ. ವಿಶ್ವದಲ್ಲಿ ಸಧ್ಯಕ್ಕೆ ಪ್ರಚಲಿತವಾಗಿರುವ ಅಲೋಪತಿಗೆ ಪರ್ಯಾಯವಾಗಿ ಸನಾತನವಾದ ಆಯುರ್ವೇದ, ದೇಸಿಯ ಯುನಾನಿಗಳಂತೆ ಹೋಮಿಯೋಪತಿ ಕೂಡ ಒಂದು ಪರ್ಯಾಯ ವೈದ್ಯಕೀಯ ಪದ್ಧತಿಯಾಗಿದೆ.
ಅಲೋಪತಿಯ ಚಿಕಿತ್ಸೆಗಳಲ್ಲಿ ಒಂದು ಚಿಕಿತ್ಸೆ ಪಡೆದರೆ ಮತ್ತೊಂದು ಸಮಸ್ಯೆ ಸೈಡ್ ಎಫೆಕ್ಟ್ ಆಗುವುದು ಸರ್ವೇ ಸಾಮಾನ್ಯ ಆದರೆ ಹೋಮಿಯೋಪತಿ ಪದ್ಧತಿಗೆ ಸೈಡ್ ಎಫಕ್ಟ್ ಪ್ರಮಾಣ ಬಹಳ ಕಡಿಮೆ ಹೀಗಾಗಿ ಉತ್ತಮ ಫಲಿತಾಂಶ ದೀರ್ಘಕಾಲದ ಚಿಕಿತ್ಸೆ ಆದರೂ ಶಾಶ್ವತ ಪರಿಹಾರಕ್ಕಕಾಗಿ ಆಯುರ್ವೇದ ಹೋಮಿಯೋಪತಿ ಔಷಧಗಳನ್ನು ಸೇವಿಸುವುದು ಉತ್ತಮ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ.
ಹೋಮಿಯೋಪತಿಯ ಆರಂಭ ಜರ್ಮಿನಿಯ ವೈದ್ಯ ಸ್ಯಾಮುಯಲ್ ಹಹೇನ್ಮನ್ರವರಿಂದ 1776ರಲ್ಲಿ ಆರಂಭವಾಯಿತು. ವೈದ್ಯಕೀಯವಾಗಿ ಸೈಡ್ ಎಫೆಕ್ಟ್ ಕಡಿಮೆ ಇರುವ ಈ ಔಷಧಿಗಳು ಬಿಳಿಯ ಗುಳಿಗೆಯ ರೂಪದಲ್ಲಿ ಇರುವುದೇ ಹೆಚ್ಚು ಇದರಲ್ಲಿ ಬೇರೆ ಬೇರೆ ರಸಾಯನಿಕಗಳ ಪ್ರಯೋಗ ಅದರೂ ಅದು ಮನುಷ್ಯ ದೇಹಕ್ಕೆ ಹೆಚ್ಚು ಹಾನಿ ಮಾಡದಂತಹ ರಸಾಯನಿಕಗಳಾಗಿರುತ್ತವೆ.
ಹೋಮಿಯೋಪತಿ ಔಷಧಿಗಳು ಅತೀ ಹೆಚ್ಚು ಗಾಢವಾಧ ರಸಾಯನಿಕಗಳನ್ನು ಒಳಗೊಳ್ಳದೇ ಬಹಳ ಕಡಿಮೆ ಪ್ರಮಾಣದ ರಸಾಯನಿಕಗಳ ಪ್ರಯೋಗ ಮಾಡುವುದರಿಂದ ಅದರಿಂದ ಉಂಟಾಗುವ ಹಾನಿ ಅಥವಾ ಸೈಡ್ ಎಫೆಕ್ಟ್ ಕೂಡ ಕಡಿಮೆಯೇ ಆಗಿರುತ್ತದೆ. 19ನೇ ಶತಮಾನದಲ್ಲಿ ಹೋಮಿಯೋಪತಿ ಪದ್ಧತಿಯು ಹೆಚ್ಚು ಪ್ರಚಾರ ದೊರೆತು ಪ್ರಚಲಿತವಾಯಿತು.
ಹೋಮಿಯೋಪತಿ ದಿನವು ಮೊದಲ ಹೋಮಿಯೋಪತಿಯ ವೈದ್ಯ ಜರ್ಮನಿಯ ಕ್ರಿಶ್ಚಿಯನ್ ಫೆಡ್ರಿಕ್ ಸ್ಯಾಮುಯಲ್ ಹಹೆನ್ಮನ್ ಅವರ ಜನ್ಮದಿನವಾಗಿದ್ದು ಜಗತ್ತಿಗೆ ಹೋಮಿಯೋಪತಿಯ ಕೊಡುಗೆ ನೀಡಿದ ಅವರ ಸ್ಮರಣಾರ್ಥವಾಗಿ ಹೋಮಿಯೋಪತಿ ದಿನವನ್ನು ವಿಶ್ವದಲ್ಲಿ ಆಚರಿಸಲಾಗುತ್ತದೆ.ಭಾರತಕ್ಕೆ ಜರ್ಮನಿ ಮಿಷನರಿಗಳ ಮೂಲಕ 1839ರ ಹೊತ್ತಿಗೆ ಹೋಮಿಯೋಪತಿ ಪದ್ಧತಿಯ ಪ್ರವೇಶವು ಡಾ. ಜಾನ್ ಹೋಯಿನ್ಬರ್ಗರ್ ಅವರ ಮೂಲಕ ಆಯಿತು ಮಹಾರಾಜ ರಣಜಿತ್ ಸಿಂಗರ ಪಾರ್ಶ್ವವಾಯುವಿನ ಚಿಕಿತ್ಸೆಗೆ ಅವರನ್ನು ಕರೆಸಲಾಗಿತ್ತು ಭಾರತದಲ್ಲಿ ಹೋಮಿಯೋಪತಿಯ ಜನಕ ಎಂದು ಗುರುತಿಸಲ್ಪಡುವವರು ಬಾಬು ರಾಜೇಂದ್ರಲಾಲ ದತ್ತರವರು ಇವರಿಂದ ಭಾರತದಲ್ಲಿ ಹೋಮಿಯೋಪತಿ ವೈದ್ಯಕೀಯ ಪದ್ಧತಿಯು ಪ್ರಸಿದ್ಧವಾಯಿತು ಆದ್ದರಿಂದ ಇವರನ್ನು ಭಾರತದ ಹೋಮಿಯೋಪತಿ ವೈದ್ಯದ ಜನಕ ಎನ್ನುತ್ತಾರೆ.
ಭಾರತದಲ್ಲಿ ಆಯುಷ್ ಮಂತ್ರಾಲಯದಲ್ಲಿ ದೇಶೀಯ ವೈದ್ಯಕೀಯ ಪದ್ಧತಿಗೆ ಮಾನ್ಯತೆ ಕೊಟ್ಟಿದೆ. ಕೇಂದ್ರ ಸರ್ಕಾರವು ಜನರ ಆರೋಗ್ಯಕ್ಕೆ ಜನರು ಚಿಕಿತ್ಸೆ ಪಡೆಯುವ ಎಲ್ಲ ಪದ್ಧತಿಗಳಿಗೂ ಮಾನ್ಯತೆ ನೀಡಿ ಅವುಗಳ ಪ್ರಚಾರ ಪ್ರಸಾರ ಮಾಡುತ್ತದೆ. ಅದರಂತೆ ಪ್ರತಿ ವರ್ಷವೂ ವಿಶೇಷವಾದ ಥೀಮ್ ಮತ್ತು ಘೋಷವಾಕ್ಯದೊಂದಿಗೆ ವಿಶ್ವ ಹೊಮಿಯೋಪತಿ ದಿನದ ಆಚರಣೆಯನ್ನು ಮಾಡುತ್ತಾರೆ. 2024ರ ಹೋಮಿಯೋಪತಿ ದಿನದ ಥೀಮ್ ಮತ್ತು ಘೋಷವಾಕ್ಯ “ಹೋಮಿಯೋ ಪರಿವಾರ : ಒಂದು ಆರೋಗ್ಯ ; ಒಂದೇ ಕುಟುಂಬ” ಎಂಬುದಾಗಿದೆ.
ಈ ಥೀಮ್ನ ಕುರಿತಾಗಿ ವಿಚಾರವಿನಿಮಯ ಮಾಡಿಕೊಳ್ಳಲು ಕೇಂದ್ರಿಯ ಸಂಶೋಧನಾ ಸಮಿತಿಯು ಹೋಮಿಯೋಪತಿಯಲ್ಲಿ ಸಂಶೋಧನೆಯಲ್ಲಿ ಪ್ರೋತ್ಸಾಹ ನೀಡಲು ಏಪ್ರಿಲ್ 10 ಮತ್ತು ಹನ್ನೊಂದರಂದು ವೆಬ್ಕಾಸ್ಟ್ ಆಯೋಜಿಸಿದ್ದಾರೆ.ಈ ದಿನಾಚರಣೆಯ ಮಹತ್ವ ಹೋಮಿಯೋಪತಿ ಪದ್ಧತಿಯ ಗುಣ ವಿಶೇಷತೆಗಳನ್ನು ತಿಳಿಸಿ ಬಹಳಷ್ಟು ಜನರು ಅದನ್ನು ಉಪಯೋಗಿಸಿ ಲಾಭ ಪಡೆಯಲು ಪ್ರಚಾರ ಮಾಡುವುದಾಗಿದೆ. ಹೋಮಿಯೋಪತಿಯ ಔಷಧೀ ಸೇವಿಸಿ ದೇಹಕ್ಕೆ ಹೆಚ್ಚು ಸೈಡ್ ಎಫೇಕ್ಟ್ ಇಲ್ಲದೇ ಉತ್ತಮ ಆರೋಗ್ಯ ಪಡೆಯಿರಿ ಎಂಬುದು ಹೋಮಿಯೋಪತಿ ದಿನದ ಆಚರಣೆಯ ಉದ್ದೇಶ ಮತ್ತು ಗುರಿಯಾಗಿದೆ.ಅತ್ಯಂತ ತೀವ್ರತೆಯ ಚಿಕಿತ್ಸೆಯ ಸಮಯದಲ್ಲಿ ಸಂಪೂರ್ಣ ಜೀವ ರಕ್ಷಕವಲ್ಲದೇ ಹೋದರೂ ಕೂಡ ದೀರ್ಘಕಾಲಿಕ ಚಿಕಿತ್ಸೆ ಪಡೆದು ಗುಣವಂತರಾಗುವ ಕಾಯಿಲೆಗಳಿಗೆ ಹೋಮಿಯೋಪತಿ ವೈದ್ಯ ಪದ್ಧತಿ ಸೂಕ್ತವಾಗಿದೆ.