ಶಿಡ್ಲಘಟ್ಟ : ದಲಿತ ಚಳುವಳಿ, ಬಂಡಾಯ ಸಾಹಿತ್ಯ ಶೋಷಿತರ ಹಿತ ಚಿಂತನೆ ಜೊತೆಗೆ ನಿರಂತರವಾಗಿ 33 ವರ್ಷಗಳ ಕಾಲ ಪತ್ರಿಕೆ ಹೊರತರುವ ಮೂಲಕ ಸಮಾಜಕ್ಕೆ ಆರ್.ರಾಮಮೂರ್ತಿ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ನಿವೃತ್ತ ಪೆÇಲೀಸ್ ಅಧಿಕಾರಿ ಡಾ.ಸುಭಾಷ್ ಭರಣಿ ಪ್ರಶಂಸೆ ವ್ಯಕ್ತಪಡಿಸಿದರು.
ಅವರು ಸಂಪಾದಕರಾದ ರಾಮಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪಡೆದು ದಕ್ಕೆ ಅವರು ಅಭಿಮಾನಿಗಳು ಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ದಲಿತ ಸಂಘರ್ಷ ಸಮಿತಿ (ಜಾಗೃತವಾದ) ರಾಜ್ಯ ಕಾರ್ಯಧ್ಯಕ್ಷರಾದ ಗೋ.ವಾ ದೇವದಾಸ್ ( ದೇವಣ್ಣ) ಹಾಗೂ ಅಂಬೇಡ್ಕರ್ ವಾಹಿನಿ ಪತ್ರಿಕಾ ಬಳಗ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ದಲಿತ ಚಳುವಳಿಯ ಹಿರಿಯ ಮುಖಂಡರಾದ ಅಣ್ಣಯ್ಯ, ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯಾದರ್ಶಿಗಳಾಗಿದ್ದ, ಅಗ್ರಹಾರ ಕೃಷ್ಣಮೂರ್ತಿ, ಹಿರಿಯ ಚಿತ್ರ ಕಲಾವಿದರು, ಲಲಿತ ಕಲಹ ಅಕಾಡೆಮಿ ಮಾಜಿ ಅಧ್ಯಕ್ಷರಾದ ಡಾಕ್ಟರ್ ಸಿ ಚಂದ್ರಶೇಖರ್, ಕನ್ನಡ ಹೋರಾಟಗಾರ ಹಾಗೂ ಹಿರಿಯ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ಗೋವಿಂದರಾಜ ನಗರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನರಸಿಂಹಮೂರ್ತಿ, ಚಿತ್ರಕಲಾ ಪರಿಷತ್ತಿನ ಲಕ್ಷ್ಮಿಪತಿ, ಮುಂತಾದವರು ಉಪಸ್ಥಿತರಿದ್ದರು.
ಹಿರಿಯ ಪತ್ರಕರ್ತರಾದ ಸಿ.ವಿ.ಲಕ್ಷ್ಮಣ ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.ಎಸ್.ನಾಗೇನಹಳ್ಳಿ ಮಂಜುನಾಥ್ ವಂದನಾರ್ಪಣೆ ಮಾಡಿದರು.
Leave a Review