ಬೆಂಗಳೂರು: ನಿವಾಸಿಗಳು ತಮ್ಮ ಕ್ಷೇತ್ರದ ಪ್ರತಿನಿಧಿ ಹಾಗೂ ಕಂದಾಯ ಸಚಿವರೂ ಅಗಿರುವ ಕೃಷ್ಣ ಭೈರೇಗೌಡ ಅವರ ಎದುರು ಹತಾಶೆ, ಕೋಪ ಮತ್ತು ಅಸಹನೆಯಿಂದ ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ.
ಚರಂಡಿಗಳಿಂದ ಕೊಳಚೆ ನೀರು ಮನೆಗಳಿಗೆ ನುಗ್ಗಿ ನಿವಾಸಿಗಳ ಕಾರು ಮತ್ತು ಬೈಕ್ ಗಳು ಕೆಟ್ಟುಹೋಗುತ್ತಿವೆಯಂತೆ. ಒಬ್ಬ ಮಹಿಳೆ ಬಿಬಿಎಂಪಿ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ಧೋರಣೆಯನ್ನು ಸಚಿವರ ಗಮನಕ್ಕೆ ತಂದರು.
ನಿವಾಸಿಗಳ ದೂರನ್ನು ತಾಳ್ಮೆಯಿಂದ ಆಲಿಸಿದ ಕೃಷ್ಣ ಭೈರೇಗೌಡ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.