ಬೆಂಗಳೂರು: ಅಮೆರಿಕ ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಬಿಸಿ ಹೋಟೆಲ್ ಉದ್ಯಮಕ್ಕು ತಟ್ಟಿದೆ. ಯುದ್ಧದಿಂದಾಗಿ ಸಿಲಿಂಡರ್ಗಳ ಪೂರೈಕೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು ಕೊರತೆ ಎದುರಾಗುತ್ತಿದೆ.
ಸಿಲಿಂಡರ್ಗಳ ಪೂರೈಕೆ ಸ್ಥಗಿತಗೊಳಿಸಲಾಗಿದೆ. ತಮಗೆ ಸಮರ್ಪಕವಾಗಿ ಸಿಲಿಂಡರ್ ಪೂರೈಕೆಯಾಗದಿದ್ದರೆ ತಮ್ಮ ಉದ್ಯಮವನ್ನು ಸಮರ್ಪಕ ಪೂರೈಕೆಯಾಗುವವರೆಗೂ ಬಂದ್ ಮಾಡುವುದಾಗಿ ಎಚ್ಚರಿಕೆನೀಡಿದ್ದಾರೆ.
ಪೂರೈಕೆ ಕೊರತೆ ಜತೆಗೆ ಸಿಲಿಂಡರ್ಗಳ ಬೆಲೆಯೂ ಹೆಚ್ಚಾಗಿದೆ. ಇದರಿಂದ ಉದ್ಯಮ ನಡೆಸುವುದು ಅಸಾಧ್ಯ. ಹಾಗಾಗಿ ತಮ್ಮ ಉದ್ಯಮವನ್ನು ಇರುವ ಸಿಲಿಂಡರ್ಗಳು ಬಳಕೆಯಾಗುವವರೆಗೆ ಬಳಸಿ ನಂತರ ವಹಿವಾಟು ಸ್ಥಗಿತಗೊಳಿಸುವುದಾಗಿ ಹಲವು ಹೋಟೆಲ್ಗಳ ಮಾಲೀಕರು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ವಾಣಿಜ್ಯ ಸಿಲಿಂಡರ್ಗಳ ಬೆಲೆ ೧೧೫ ರೂ.ಗಳು ಹೆಚ್ಚಳ ಮಾಡಲಾಗಿದೆ. ಮತ್ತಷ್ಟು ಹೆಚ್ಚಳಮಾಡುವುದಾಗಿ ತಿಳಿಸಿದೆ. ಇದರಿಂದ ಉದ್ಯಮ ನಡೆಸುವುದು ಕಷ್ಟವಾಗಿದೆ. ಬೆಂಗಳೂರಿನಲ್ಲಿ ಶೇ. ೭೦ರಷ್ಟು ಜನ ಹೋಟೆಲ್ನನ್ನೇ ನಂಬಿಕೊAಡಿದ್ದಾರೆ. ಅವರಿಗೂ ಕಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.
ಇತ್ತ ಮತ್ತೊಂದೆಡೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಈ ಬಗ್ಗೆ ಸಂಸತ್ನಲ್ಲಿ ಚರ್ಚಿಸಲು ಅವಕಾಶ ನೀಡಿಲ್ಲ. ಇದರಿಂದಾಗಿ ಇಂಡಿಯಾ ಒಕ್ಕೂಟದ ಸದಸ್ಯರು ನಿನ್ನೆ ಪ್ರತಿಭಟನೆ ಮಾಡಿದ್ದಾರೆ. ಆದರೂ ಚರ್ಚೆಗೆ ಅವಕಾಶ ನೀಡಿಲ್ಲ. ಸಂಸದರು ಈ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಕೆಲವರು ಸಿಲಿಂಡರ್ಗಳ ಸಮಪರ್ಕ ಪೂರೈಕೆಗೆ ಒತ್ತಾಯಿಸಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಹಾಗೂ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರು ನೈಸರ್ಗಿಕ ಅನಿಲ ಪೂರೈಕೆ ಇಲಾಖೆಗೆ ಪತ್ರ ಬರೆದು ಸಮಪರ್ಕ ಪೂರೈಕೆಗೆ ಮನವಿ ಮಾಡಿದ್ದಾರೆ.
ಕೆಲವು ಕಡೆ ಅಕ್ರಮ ದಾಸ್ತಾನು, ಕಾಳಸಂತೆ ವಹಿವಾಟು ನಡೆಯುತ್ತಿದೆ. ಇವುಗಳಿಗೆ ಕಡಿವಾಣ ಹಾಕುವಂತೆ ಹೋಟೆಲ್ ಮಾಲೀಕರು ಒತ್ತಾಯಿಸಿದ್ದಾರೆ.
ಹೋಟೆಲ್ ಬಂದ್ ಎಚ್ಚರಿಕೆ ವಾಣಿಜ್ಯ ಸಿಲಿಂಡರ್ ಪೂರೈಕೆ ಕೊರತೆ | ಬೆಲೆ ಹೆಚ್ಚಳದ ಬಿಸಿ



