ಮುಂಬೈ: ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ೨೦೨೫ರ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ೫೨ ರನ್ಗಳಿಂದ ಮಣಿಸಿದ ಭಾರತೀಯ ಮಹಿಳಾ ತಂಡ, ಚೊಚ್ಚಲ ಬಾರಿಗೆ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಈ ಐತಿಹಾಸಿಕ ಗೆಲುವಿನೊಂದಿಗೆ ತAಡವು ದಾಖಲೆಯ ಮೊತ್ತದ ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಅAತರಾಷ್ಟಿçÃಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಘೋಷಿಸಿದಂತೆ, ಚಾಂಪಿಯನ್ ಭಾರತ ತಂಡವು ಬರೋಬ್ಬರಿ ೩೯.೭೮ ಕೋಟಿ ರೂಪಾಯಿ (೪.೪೮ ಮಿಲಿಯನ್ ಡಾಲರ್) ಬಹುಮಾನವನ್ನು ಪಡೆಯಲಿದೆ. ಇದು ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿಯೇ ನೀಡಲಾದ ಅತಿ ದೊಡ್ಡ ಬಹುಮಾನದ ಮೊತ್ತವಾಗಿದೆ. ೨೦೨೨ರಲ್ಲಿ
ಆಸ್ಟೆçÃಲಿಯಾ ಗೆದ್ದಿದ್ದ ೧.೩೨ ಮಿಲಿಯನ್ ಡಾಲರ್ಗೆ ಹೋಲಿಸಿದರೆ, ಈ ಬಾರಿಯ ಬಹುಮಾನದ ಮೊತ್ತದಲ್ಲಿ ಶೇ. ೨೩೯ರಷ್ಟು ಹೆಚ್ಚಳವಾಗಿದೆ.
ರನ್ನರ್ – ಅಪ್ ಆದ ದಕ್ಷಿಣ ಆಫ್ರಿಕಾ ತಂಡವು ೧೯.೮೮ ಕೋಟಿ ರೂಪಾಯಿ (೨.೨೪ ಮಿಲಿಯನ್ ಡಾಲರ್) ಪಡೆಯಲಿದೆ. ಈ ಬಾರಿಯ ವಿಶ್ವಕಪ್ ಪಂದ್ಯಾವಳಿಯ ಒಟ್ಟು ಬಹುಮಾನದ ಮೊತ್ತವನ್ನು ಐಸಿಸಿ ೧೨೩ ಕೋಟಿ ರೂಪಾಯಿಗೆ (೧೩.೮೮ ಮಿಲಿಯನ್ ಡಾಲರ್) ಹೆಚ್ಚಿಸಿತ್ತು. ಇದು ೨೦೨೨ರ ನ್ಯೂಜಿಲೆಂಡ್ ಆವೃತ್ತಿಯ ೩.೫ ಮಿಲಿಯನ್ ಡಾಲರ್ಗೆ ಹೋಲಿಸಿದರೆ
ಶೇ. ೨೯೭ರಷ್ಟು ಹೆಚ್ಚಾಗಿದೆ. ಸೆಮಿಫೈನಲ್ನಲ್ಲಿ ಸೋತ ಪ್ರತಿ ತಂಡಕ್ಕೂ ೯.೯೪ ಕೋಟಿ ರೂ. (೧.೧೨ ಮಿಲಿಯನ್ ಡಾಲರ್) ನೀಡಲಾಗಿದೆ. ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಎಲ್ಲಾ ಎಂಟು ತAಡಗಳಿಗೆ ತಲಾ ೨೫೦,೦೦೦ ಡಾಲರ್ ಹಾಗೂ ಲೀಗ್ ಹಂತದ ಪ್ರತಿ ಗೆಲುವಿಗೆ ೩೪,೩೧೪ ಡಾಲರ್ ಹೆಚ್ಚುವರಿ ಮೊತ್ತವನ್ನು ನೀಡಲಾಗಿದೆ.
ಬಿಸಿಸಿಐನಿಂದಲೂ ಭಾರೀ ಉಡುಗೊರೆ ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ಮಹಿಳಾ ತಂಡಕ್ಕೆ ಬಂಪರ್ ಬಹುಮಾನ ನೀಡಲು ಪರಿಗಣಿಸುತ್ತಿದೆ. ೨೦೨೪ರ ಟಿ೨೦ ವಿಶ್ವಕಪ್ ಗೆದ್ದ ಪುರುಷರ ತಂಡಕ್ಕೆ ನೀಡಲಾಗಿದ್ದ ೧೨೫ ಕೋಟಿ ರೂಪಾಯಿ ಬಹುಮಾನವನ್ನು ಮಹಿಳಾ ತಂಡಕ್ಕೂ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. “ಬಿಸಿಸಿಐ ಪುರುಷರು ಮತ್ತು ಮಹಿಳೆಯರಿಗೆ ಸಮಾನ ವೇತನವನ್ನು ಬೆಂಬಲಿಸುತ್ತದೆ. ನಮ್ಮ ಹುಡುಗಿಯರು ವಿಶ್ವಕಪ್ ಗೆದ್ದರೆ, ಪುರುಷರ ಜಾಗತಿಕ ಗೆಲುವಿಗೆ ಹೋಲಿಸಿದರೆ ಪ್ರತಿಫಲ ಕಡಿಮೆಯಿರಬಾರದು ಎಂಬ ಚರ್ಚೆಗಳು ನಡೆದಿವೆ,” ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಗೆಲುವು ಮತ್ತು ದಾಖಲೆಯ ಬಹುಮಾನವು ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಹೊಸ ದಿಕ್ಕನ್ನು ನೀಡಲಿದೆ.



