This is the title of the web page
This is the title of the web page

ಬಸವಣ್ಣನವರ ತತ್ವ ಸಿದ್ದಾಂತವನ್ನು ಮೈಗೂಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ: ಎಚ್.ಟಿ ಮಂಜು

ಕೆ.ಆರ್.ಪೇಟೆ: ಬಸವಣ್ಣನವರ ತತ್ವ ಸಿದ್ದಾಂತವನ್ನು ಮೈಗೂಡಿಸಿಕೊಂಡು ಕಾಯಕ ಮಾಡಿದರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ ಎಂದು ಜೆಡಿಎಸ್ ಅಭ್ಯರ್ಥಿ ಎಚ್.ಟಿ ಮಂಜು ಅಭಿಪ್ರಾಯಪಟ್ಟರು. ಅವರು ಪಟ್ಟಣದಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ವಿಶ್ವಗುರು ಬಸವ ಜಯಂತಿ ಪ್ರಯುಕ್ತ ಬಸವಣ್ಣನವರ ಭಾವಚಿತ್ರಕ್ಕೆ ವಿಶೇಷ ಪೂಜೆ ಮತ್ತು ಪುಸ್ವಾರ್ಚನೆ ಸಲ್ಲಿಸಿ.

ಪಟ್ಟಣದ ವರವಲಯದಲ್ಲಿರುವ ಶ್ರೀ ಮಾತೃಭೂಮಿ ವೃದ್ಧಾಶ್ರಮ ವೃದ್ಧರಿಗೆ ಅನ್ನ ಸಂತರ್ಪಣೆ ನೀಡುವ ಮೂಲಕ ಅರ್ಥಪೂರ್ಣವಾಗಿ ಬಸವ ಜಯಂತಿ ಆಚರಿಸಲಾಯಿತು. ಸಮಾನತೆಯ ಹರಿಕಾರ ಬಸವಣ್ಣ ನಮಗೆಲ್ಲ ಇಂದು ಮಾದರಿಯಾಗಿದ್ದಾರೆ. ಅನಾದಿ ಕಾಲದಿಂದಲೂ ಈ ಜಗತ್ತು ಅನೇಕ ದಾರ್ಶನಿಕರನ್ನು ಕಂಡಿದೆ. ಸಮಯವೆಂಬ ಪ್ರವಾಹದ ಉಬ್ಬರ ಮಿಡಿತಗಳನ್ನು ಲೆಕ್ಕಿಸದೆ, ಯುಗ-ಯುಗಗಳವರೆಗೆ ಶಾಶ್ವತವಾಗಿ ನಿಲ್ಲಬಲ್ಲ ಮಹಾನ್ ಚೇತನ.

ಮಹಾ ಮಾನವತಾವಾದಿ, ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಅನಿಷ್ಟ ಪದ್ದತಿಯ ವಿರುದ್ಧ ಹೋರಾಟ ಮಾಡಿದ್ದಾರೆ. ಸಮಾಜಕ್ಕೆ ಒಂದು ಸಮಾನತೆಯನ್ನು ಸಾರಿದ್ದು ಬಸವಣ್ಣ, ಅವರ ಒಂದು ಕ್ರಾಂತಿ ಇಂದಿನ ಪ್ರಜಾಪ್ರಭುತ್ವಕ್ಕೆ ನಾಂದಿ ಮತ್ತು ಭೂಮಂಡಲಕ್ಕೆ ಆದರ್ಶವಾಗಿರುವ ತತ್ವ ಸಿದ್ಧಾಂತ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಸಮಾಜದತ್ತ ಹಾಗೋಣ ಎಂದರು.

ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ವಿ.ಎಸ್ ಧನಂಜಯ್ ಕುಮಾರ್ ಕರ್ನಾಟಕದ ಪಾಲಿಗೆ ಹನ್ನೆರಡನೇ ಶತಮಾನ ಎಂಬುದು ಬಹಳ ಮಹತ್ವದ್ದು. ಸಮಾಜದಲ್ಲಿ ಬಹುದೊಡ್ಡ ಬದಲಾವಣೆಯ ಹೊಸ ಚಿಂತನೆ ರೂಪುಗೊಂಡ ಕನ್ನಡ ಸಾಹಿತ್ಯ ಮತ್ತು ಸಾಂಸ್ಕøತಿಕ ಇತಿಹಾಸದಲ್ಲಿ ವಿಶಿಷ್ಟವಾದ ಕಾಲಘಟ್ಟದಲ್ಲಿ ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಕಾಲದಲ್ಲಿ ವಚನಕಾರರು ತಮ್ಮ ಸರಳ ವಚನಗಳ ಮೂಲಕ ಸಮಾಜದಲ್ಲಿ ಬದಲಾವಣೆಯನ್ನು ತರಲು ಪ್ರಯತ್ನಿಸಿದ್ದ ಮಹಾನ್ ಸಾಧಕರು ಬಸವಣ್ಣನವರು.

ಜಾತಿಯ ಹಂಗಿಲ್ಲದೆ ಎಲ್ಲಾ ವರ್ಗದ ವಚನಕಾರರು ವಚನಗಳ ಮೂಲಕ ತಮ್ಮ ಹೊಸ ಚಿಂತನೆಗಳನ್ನು ಕಟ್ಟಿಕೊಡುತ್ತಿದ್ದರು. ಈ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸುವ ವಿಶ್ವಗುರು ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ಸಾಗಿದರೆ ಜೀವನ ಸುಖಮಯ, ಸಮಾಜವೂ ಸುಂದರ. `ಕಾಯಕವೇ ಕೈಲಾಸ’ ಎಂದು ಕಲಿಸಿಕೊಟ್ಟವರ ಮಹನೀಯರ ಸ್ಮರಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು .

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ವಿ.ಎಸ್. ಧನಂಜಯಕುಮಾರ್, ಎಲ್‍ಐಸಿಶಿವಪ್ಪ, ಲಿಂಗಾಪುರ ಶಿವಪ್ಪ, ಗೋವಿಂದನಹಳ್ಳಿ ಕೇಬಲ್‍ಗುಂಡ, ಸಂತೋಷ, ಚೌಡಸಮುದ್ರ ಸಿ.ಟಿ.ಶಿವಪ್ಪ, ಸಿ.ಬಿ.ಶಿವಮೂರ್ತಿ, ಸಿ.ಪಿ.ರುದ್ರಪ್ಪ,ಸಾಸಲು ಬಿ.ಎಸ್.ಸಿ ಜಗದೀಶ್, ಸಾಸಲು ಅಂಗಡಿ ಸಂತೋಷ, ಅಂತರಾಷ್ಟ್ರೀಯ ಯೋಗಪಟು ಅಲ್ಲಮಪ್ರಭು, ಸೇರಿದಂತೆ ಉಪಸ್ಥಿತರಿದ್ದರು.