ಬೆಂಗಳೂರು: ಸಿಸಿಬಿಯ ಆರ್ಥಿಕ ಅಪರಾಧ ದಳದವರು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯತ್ವ ಕೊಡಿಸುವುದಾಗಿ ನಂಬಿಸಿ ನಾಲ್ಕು ಕೋಟಿ ಹಣ ಪಡೆದು ನಕಲಿ ನೇಮಕಾತಿ ಆದೇಶ ದಾಖಲಾತಿಗಳನ್ನು ಸೃಷ್ಟಿಸಿ ವಂಚಿಸಿದ್ದ ನಾಲ್ವರನ್ನು ಸೆರೆ ಹಿಡಿದಿರುತ್ತಾರೆ.
ಹಲಸೂರು ಪೊಲೀಸರು ಪಿಜಿಯಲ್ಲಿಯೇ ವಾಸವಿದ್ದು, ಇತರರು ವಾಸ ಮಾಡುತ್ತಿದ್ದ ರೂಂಗಳಲ್ಲಿ ಕಳ್ಳತನ ಮಾಡುತ್ತಿದ್ದ ಮಹಿಳೆಯನ್ನು ಬಂಧಿಸಿ ಸುಮಾರು 8 ಲಕ್ಷ ರೂ ಮೌಲ್ಯದ 130 ಗ್ರಾಂ ಚಿನ್ನದ ಒಡವೆಗಳನ್ನು ವಶಪಡಿಸಿಕೊಂಡಿರುತ್ತಾರೆ.ಸಿಸಿಬಿ ಪೊಲೀಸರು ವಂಚನೆ ಪ್ರಕರಣ ಒಂದರಲ್ಲಿ ಸಾರ್ವಜನಿಕರಿಗೆ 100 ಕೋಟಿ ಕಪ್ಪು ಕೋಟಿ ಹಣವಿದೆಯೆಂದು ನಂಬಿಸಿ ನಕಲಿ ನೋಟುಗಳನ್ನು ತೋರಿಸಿ ಮೋಸ ಮಾಡುತ್ತಿದ್ದ ಐವರು ವ್ಯಕ್ತಿಗಳನ್ನು ಬಂಧಿಸಿರುತ್ತಾರೆ.
ಇವರುಗಳಿಂದ 30 ಕೋಟಿ 91 ಲಕ್ಷದ ಅರವತ್ತು ಸಾವಿರ ನಕಲಿ ನೋಟುಗಳನ್ನು ವಶಪಡಿಸಿಕೊಂಡಿರುತ್ತಾರೆ.ಕಾಡುಗೋಡಿ ಪೊಲೀಸರು ಆರೋಪಿಯನ್ನು ಬಂಧಿಸಿ ಎಂಟೂವರೆ ಲಕ್ಷ ರೂ ಬೆಲೆ ಬಾಳುವ ಒಟ್ಟು 15 ವಿವಿಧ ಬಗೆಯ ಮೊಬೈಲ್ ಪೋನ್ ಗಳನ್ನು ಕಳುವು ಮಾಡಿದ್ದೆನಾಲಾದ ವಶಪಡಿಸಿಕೊಂಡಿರುತ್ತಾರೆ.
ರಾಜಗೋಪಾಲನಗರ ಪೊಲೀಸರು ಹಗಲು ಮತ್ತು ರಾತ್ರಿ ಕನ್ನಗಳುವು ಮಾಡುತ್ತಿದ್ದ ನಾಲ್ಕು ಜನ ಆರೋಪಿಗಳನ್ನು ಬಂಧಿಸಿ 28 ವರೆ ಲಕ್ಷ ರೂ ಮೌಲ್ಯದ 470 ಗ್ರಾಂ ಚಿನ್ನಾಭರಣ ಮತ್ತು ಬೆಳ್ಳಿ ಒಡವೆಗಳು ಹಾಗೂ ನಗದು 50,000ಗಳನ್ನು ವಶಪಡಿಸಿಕೊಂಡಿರುತ್ತಾರೆ.
ಸಂಜಯನಗರ ಪೊಲೀಸರು ಮೂರು ವ್ಯಕ್ತಿಗಳನ್ನು ಬಂಧಿಸಿ 10 ಲಕ್ಷ ರೂ ಬೆಲೆ ಬಾಳುವ 151 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.
ವೈಟ್ಫೀಲ್ಡ್ ಪೊಲೀಸರು ಮೊಬೈಲ್ ಫೋನ್ ಗಳನ್ನು ಕಳವು ಮಾಡುತ್ತಿದ್ದ ಅಂತರ್ ರಾಜ್ಯದ ಆರು ಆರೋಪಿಗಳನ್ನು ಬಂಧಿಸಿ 30 ಲಕ್ಷ ರೂ ಬೆಲೆ ಬಾಳುವ ವಿವಿಧ ಬಗೆಯ 107 ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿರುತ್ತಾರೆ.
ಪುಟ್ಟೇನಹಳ್ಳಿ ಪೊಲೀಸರು ಸರಗಳ್ಳತನ ಮಾಡುತ್ತಿದ್ದ ಮೂರು ಜನ ಆರೋಪಿಗಳನ್ನು ಬಂಧಿಸಿ ಸುಮಾರು 10 ಲಕ್ಷ 80000 ಬೆಲೆ ಬಾಳುವ ಸರಗಳನ್ನು ವಶಪಡಿಸಿಕೊಂಡಿರುತ್ತಾರೆ.ಮಹದೇವಪುರ ಪೊಲೀಸರು ಓರ್ವ ವ್ಯಕ್ತಿಯನ್ನು ಆಂಧ್ರಪ್ರದೇಶದ ವಿಜಯವಾಡದಲ್ಲಿ ಬಂಧಿಸಿ ಐವತ್ತು ಲಕ್ಷ ರೂ ಮೌಲ್ಯದ 502 ಗ್ರಾಂ ಚಿನ್ನಾಭರಣ ಮತ್ತು 99 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.
ಸಿಸಿಬಿಯ ಮಾದಕ ದ್ರವ್ಯ ದಳದ ಪೊಲೀಸರು ಮೆಡಿಕಲ್ ವೀಸಾ ಪಡೆದು ಕೊಡಿಗೆಹಳ್ಳಿ ಮತ್ತು ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೀಸಾ ಅವಧಿ ಮುಗಿದಿದ್ದರೂ ಸಹ ತಮ್ಮ ದೇಶಕ್ಕೆ ಹಿಂತಿರುಗದೆ ಅನರ್ಧಿಕೃತವಾಗಿ ವಾಸವಾಗಿದ್ದ ಮಹಿಳೆ ಸೇರಿದಂತೆ ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಿರುತ್ತಾರೆ.