ನವದೆಹಲಿ: ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ಇರಾನಿನ ಇಂಧನ ಸೌಲಭ್ಯಗಳ ಮೇಲೆ ದಾಳಿ ಮಾಡಲಾಗುವುದು ಎಂಬ ಡೊನಾಲ್ಡ್ ಟ್ರಂಪ್ಅವರ ಎಚ್ಚರಿಕೆ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ.
ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ. 1.4 ರಷ್ಟು ಏರಿಕೆಯಾಗಿ 110.60 ಡಾಲರ್ಗೆ (10,287 ರೂಪಾಯಿ) ಏರಿಕೆ ಕಂಡಿದ್ದರೆ, ಅಮೆರಿಕದ ಕಚ್ಚಾ ತೈಲದ ಬೆಲೆ ಶೇ. 1.8 ರಷ್ಟು ಏರಿಕೆಯಾಗಿ 113.60 (10,568 ರೂಪಾಯಿ) ಡಾಲರ್ಗೆ ತಲುಪಿದೆ. ಇರಾನಿನ ಶತ್ರು ರಾಷ್ಟ್ರಗಳಿಗೆ ತೈಲ ಪೂರೈಕೆ ಮಾರ್ಗ ಬಂದ್ ಮಾಡಿರುವುದರಿಂದ ಜಾಗತಿಕ ಇಂಧನ ಪೂರೈಕೆ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ, ಮಾರಕ ದಾಳಿ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿದರು. ಇದಕ್ಕೆ ತನ್ನದೇ ದಾಟಿಯಲ್ಲಿ ಕೌಂಟರ್ ಕೊಟ್ಟ ಇರಾನ್, ಯುದ್ಧ ನಷ್ಟದ ಪರಿಹಾರ ನೀಡುವವರೆಗೆ ತೆರೆಯುವುದಿಲ್ಲ ಎಂದು ಹೇಳಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಏರಿಕೆ



