ಡಾ. ಕೆ. ಅಂಜುಂ ಹಫೀಜ್ ಅಮಾನತಿಗೆ ಆಗ್ರಹ – ಸಿಬಿಐ ತನಿಖೆಗೆ ಒತ್ತಾಯ
ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ಅಧೀನ ಸಂಸ್ಥೆಯಾದ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದಲ್ಲಿ ಎಸ್ಸಿಪಿ/ಟಿಎಸ್ಪಿ ನಿಧಿಗಳಲ್ಲಿ ನೂರಾರು ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು ಆರೋಪಿಸಿ, ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಭೀಮಪುತ್ರಿ ಬ್ರಿಗೇಡ್ ಸಂಸ್ಥಾಪಕಿ ಭೀಮಪುತ್ರಿ ರೇವತಿರಾಜ್ ಒತ್ತಾಯಿಸಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಭೀಮಪುತ್ರಿ ರೇವತಿರಾಜ್ ರವರು ಮಾತನಾಡಿ, ಕೇಂದ್ರದ ಆಡಳಿತಾಧಿಕಾರಿ ಡಾ. ಕೆ. ಅಂಜುA ಹಫೀಜ್ ಅಧಿಕಾರ ದುರುಪಯೋಗಪಡಿಸಿಕೊಂಡು ನಕಲಿ ಟೆಂಡರ್ ಪ್ರಕ್ರಿಯೆ, ಬೋಗಸ್ ತರಬೇತಿ ಕಾರ್ಯಕ್ರಮಗಳು, ಡ್ರೋನ್ ತರಬೇತಿ ಹಗರಣ, ಜಿ.ಎಸ್.ಟಿ ಅಕ್ರಮ ಸೇರಿದಂತೆ ಹಲವು ರೀತಿಯ ಅಕ್ರಮಗಳ ಮೂಲಕ ನೂರಾರು ಕೋಟಿ ರೂಪಾಯಿ ದುರ್ಬಳಕೆ ಮಾಡಿದ್ದಾರೆ ಎಂದು ಗಂಭೀರ ಆರೋಪಿಸಿದರು.
ಇದಲ್ಲದೆ ಗುತ್ತಿಗೆ ಕಾಮಗಾರಿ
ಗಳಲ್ಲಿ ಶೇ.೪೦ ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ಕೆಟಿಪಿಪಿ ಕಾಯ್ದೆ
ಯನ್ನು ಗಂಭೀರವಾಗಿ ಉಲ್ಲಂಘಿಸಿ ರುವ ಹಿನ್ನೆಲೆಯಲ್ಲಿ ಡಾ. ಅಂಜುA ಹಫೀಜ್ ಅವರನ್ನು ತಕ್ಷಣವೇ ಅಮಾನತುಗೊಳಿಸಿ, ಅವರ ಹಾಗೂ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ಕಾರದ ಖಜಾನೆಯಿಂದ ಎಲ್ಲ ಪಾವತಿಗಳು ಆನ್ಲೈನ್ ಮೂಲಕವಾಗಬೇಕಿದ್ದರೂ, ವಿಭಾ ಗೀಯ ಬ್ಯಾಂಕ್ ಖಾತೆಗಳನ್ನು ದುರುಪಯೋಗಪಡಿಸಿ ಕೊಂಡು ದೊಡ್ಡ ಮೊತ್ತವನ್ನು ಚೆಕ್ ಮೂಲಕ ವಿತರಿಸಲಾಗಿದೆ. ಸರ್ಕಾರದ ಅನುಮತಿ ಇಲ್ಲದೇ ಕೋಟ್ಯಂತರ ರೂಪಾಯಿ ಮುಂಗಡ ಪಾವತಿಗಳನ್ನು ಮಾಡಲಾಗಿದೆ. ಕೆಲವು ಚೆಕ್ಗಳನ್ನು ಡಾ. ಅಂಜುA ಹಫೀಜ್ ಅವರು ಏಕಪಕ್ಷೀಯವಾಗಿ ತಮ್ಮ ಸಹಿಯೊಂದಿಗೆ ನೀಡಿರುವುದು ಅಧಿಕಾರ ದುರುಪಯೋಗಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಈ ಸಂಬAಧ ಜನವರಿ ೨೯ರಂದು ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದು, ರಾಜ್ಯದ ಮುಖ್ಯ ಕಾರ್ಯದರ್ಶಿ, ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಇಲಾಖಾ ಆಯುಕ್ತರು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳಿಗೆ ಸಹ ದೂರು ನೀಡಲಾಗಿದೆ ಎಂದು ತಿಳಿಸಿದರು. ಡಾ. ಅಂಜುA ಹಫೀಜ್ ಅವರು ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ತಮ್ಮ ಮೇಲೆ ಸುಳ್ಳು ಸುಲಿಗೆ ಪ್ರಕರಣ ದಾಖಲಿಸಿ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಿದ್ದಾರೆ ಎಂದು ರೇವತಿರಾಜ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಭಾಗವಹಿಸಿ ಈ ಆರೋಪಗಳಿಗೆ ಬೆಂಬಲ ವ್ಯಕ್ತಪಡಿಸಿದರು. ಈ ವೇಳೆ ಡಾ. ಎಂ. ವೆಂಕಟಸ್ವಾಮಿ, ಸತೀಶ್, ಎಂ. ಎಸ್. ಜಗನ್ನಾಥ್, ಚಳುವಳಿ ರಾಜಣ್ಣ, ಹೆಬ್ಬಾಳ ವೆಂಕಟೇಶ್, ಲಯನ್ ಬಾಲಕೃಷ್ಣ
ತ್ಯಾಗರಾಜು, ಓಬಳೇಶ್ರ, ಎಂ. ಎಂ. ರಾಜು ಅಡ್ವೋಕೇಟ್ ಅನಂತು, ಚೇತನ ಕುಮಾರ್, ಬ್ಯಾಟರಾಜು, ಮಿಲಿಟರಿ ಶಂರ್ರ , ಲೋಕೇಶ್ಚಂದ್ರ, ರಾಜಗೋಪಾಲ್, ರಮೇಶ್ ಬಿ ದುರ್ಗ, ಡಾ. ಭಾನುಪ್ರಕಾಶ್, ಕಾವರ ನಳ್ಳಿ ಬೆಟ್ಟಪ್ಪ , ಅನೇಕ ದಲಿತ ಮುಖಂಡರು ಬೆಂಬಲ ವ್ಯಕ್ತಪಡಿಸಿದರು
ಸಮಾಜ ಕಲ್ಯಾಣ ಇಲಾಖೆಯಲ್ಲಿ ನೂರಾರು ಕೋಟಿ ರೂ. ಭ್ರಷ್ಟಾಚಾರ



