This is the title of the web page
This is the title of the web page

ರಾಜಸ್ಥಾನ್ ವಿರುದ್ಧ ಹೈದರಾಬಾದ್‍ಗೆ ಗೆಲುವು

ಜೈಪುರ: ಐಪಿಎಲ್ 2023 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ 4 ವಿಕೆಟ್ ಗಳ ಗೆಲುವು ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ಜೋಸ್ ಬಟ್ಲರ್-ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್ ನಿಂದಾಗಿ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 214 ರನ್ ಗಳಿಸಿತು. ಬಟ್ಲರ್ 95, ಸಂಜು ಸ್ಯಾಮ್ಸನ್ ಅಜೇಯ 66 ರನ್ ಗಳಿಸಿದರು.

ಈ ಮೊತ್ತ ಬೆನ್ನತ್ತಿದ ಹೈದರಾಬಾದ್‍ಗೆ ಅಗ್ರ ಕ್ರಮಾಂಕದ ಬ್ಯಾಟಿಗರು ಕೈ ಹಿಡಿದರು. ಅನ್ಮೋಲ್ ಪ್ರೀತ್ ಸಿಂಗ್ 33, ಅಭಿಷೇಕ್ ಶರ್ಮಾ 55, ರಾಹುಲ್ ತ್ರಿಪಾಠಿ 47, ಗ್ಲೆನ್ ಫಿಲಿಪ್ಸ್ 25 ರನ್ ಸಿಡಿಸಿದರು.

ಕೊನೆಯ ಎಸೆತದಲ್ಲಿ ಐದು ರನ್ ಬೇಕಾಗಿದ್ದಾಗ ರಾಜಸ್ಥಾನ್ ಬೌಲರ್ ಸಂದೀಪ್ ಶರ್ಮಾ ನೋ ಬಾಲ್ ಎಸೆದರು. ಅಂತಿಮ ಎಸೆತವನ್ನು ಅಬ್ದುಲ್ ಸಮದ್ ಸಿಕ್ಸರ್ ಗಟ್ಟಿ ಹೈದರಾಬಾದ್ ಗೆ ಗೆಲುವು ಕೊಡಿಸಿದರು. ಇದರೊಂದಿಗೆ ಹೈದರಾಬಾದ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿತು.