ರಾಮನಗರ: ಪೂಜೆಗೆ ಬಂದು ಹೋಗುವ ಗಿರಾಕಿ ನಾನಲ್ಲ, ನಾನು ಶಾಸಕನಲ್ಲ, ಜನ ಸೇವಕ, ನನಗೆ ಅಧಿಕಾರ-ಹಣದ ವ್ಯಾಮೋಹ ಇಲ್ಲ, ಸೇವೆ ಮಾಡಲು ಸಹಕಾರ ಕೊಡಿ, ನೀವು ಕೆಲಸ ಮಾಡದೆ ಹೋದರೆ ಸಸ್ಪಂಡ್ ಮಾಡಿ ಅಂತ ಶಿಪಾರಸ್ಸು ಪತ್ರ ಬರೆಯುವೆ…….. ಹೀಗೆ ರಾಮನಗರ ಕ್ಷೇತ್ರ ವ್ಯಾಪ್ತಿಯ ಅಧಿಕಾರಿ ವರ್ಗಕ್ಕೆ ಎಚ್ಚರಿಕೆ ಕೊಟ್ಟು, ಶಾಸಕನಾಗಿ ಅಲ್ಲ ಸ್ನೇಹಿತನಾಗಿ ಇರುವೆ ಎಂದು ಅಭಯವನ್ನು ಕೊಟ್ಟಿದ್ದು ಕ್ಷೇತ್ರದ ನೂತನ ಶಾಸಕ ಎಚ್.ಎ.ಇಕ್ಬಾಲ್ ಹುಸೇನ್!
ನಗರದಲ್ಲಿರುವ ಜಿಲ್ಲಾಪಂಚಾಯ್ತಿ ಭವನದ ಸಭಾಂಗಣದಲ್ಲಿ ಗುರುವಾರ ನಡೆದ ಕ್ಷೇತ್ರ ವ್ಯಾಪ್ತಿಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಶಾಸಕರಾಗಿ ಆಯ್ಕೆಯಾದ ನಂತರ ನಡೆದ ಮೊದಲ ಸಭೆ ಇದಾಗಿತ್ತು. ಸಭೆಯ ಆರಂಭದಲ್ಲೇ ತಾವು ಜಿಪಂ ಅಧ್ಯಕ್ಷನಾಗಿ ಅನುಭವ ಇರುವುದಾಗಿ ತಮ್ಮ ಪರಿಚಯ ಮಾಡಿಕೊಂಡ ಶಾಸಕರು,
ಕ್ಷೇತ್ರದ ಅಭಿವೃದ್ದಿ ಸಾಕಷ್ಟು ಹಿಂದೆ ಉಳಿದಿದೆ. 25 ವರ್ಷಗಳಿಂದ ಈ ಕ್ಷೇತ್ರ ಅನೇಕ ಸೌಕರ್ಯಗಳಿಂದ ವಂಚಿತವಾಗಿದೆ, ಜನತೆ ತಮ್ಮ ಬಗ್ಗೆ ಮತ್ತು ತಮ್ಮ ಸರ್ಕಾರದ ಬಗ್ಗೆ ಅನೇಕ ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ. ನಿಮ್ಮ ಸಹಕಾರ ಇಲ್ಲದೆ ಶಾಸಕನಾಗಿ ಜನರ ನಿರೀಕ್ಷೆಯನ್ನು ತಲುಪಲು ಆಗುವುದಿಲ್ಲ ಎಂದು ಅಧಿಕಾರಿ ವರ್ಗವನ್ನು ವಿಶ್ವಾಸಕ್ಕೆ ತೆಗೆದು ಕೊಂಡರು. ನಂತರ ಇಲಾಖಾವಾರು ಪ್ರಗತಿ ಪರಿಶೀಲನೆ ವೇಳೆ ಅಧಿಕಾರಿಗಳ ವಿರುದ್ದ ಮಾತಿನ ಚಾಟಿ ಬೀಸಿದರು.
ತಾವು ಜನರ ಸಮಸ್ಯೆಗಳು, ಸರ್ಕಾರದ ಯೋಜನೆ, ಕಾರ್ಯಕ್ರಮಗಳ ಅನುಷ್ಠಾನವನ್ನು ಆಳವಾಗಿ ತಿಳಿದುಕೊಂಡ ನಂತರವೇ ಸಭೆ ನಡೆಸುವುದಾಗಿ, ಇದು ಮೊದಲನೆ ಸಭೆಯಾದ್ದರಿಂದ ಅಧಿಕಾರಿಗಳಿಗೆ ಹೆಚ್ಚಿನ ಒತ್ತಡ ಕೊಡುತ್ತಿಲ್ಲ ಎಂದರು.ರದ್ದಾಗಿರುವ ಪಡಿತರ ಮತ್ತೆ ಕೊಡಿ! ಆಹಾರ ಇಲಾಖೆ ಪರಿಶೀಲನೆ ವೇಳೆ ಇಲಾಖೆಯ ಅಧಿಕಾರಿ ಪಡಿತರ ಕಾರ್ಡುಗಳ ರದ್ದು ಮಾಡಿರುವ ಬಗ್ಗೆ ಮಾಹಿತಿ ಕೊಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಇದು ಕಾಂಗ್ರೆಸ್ ಸರ್ಕಾರ, ಹಸಿದವರಿಗೆ ಆಹಾರ ಕೊಡಲು ಬದ್ದವಾಗಿದ್ದೇವೆ.
ಬಡ ಕುಟುಂಬಗಳ ಕಾರ್ಡು ರದ್ದು ಮಾಡಿದ್ದರೆ ಮತ್ತೆ ಅವರಿಗೆ ವಾಪಸ್ಸು ಕೊಡಿ. ಟೀವಿ, ಸ್ಕೂಟರ್ ಇದೆ ಎಂಬ ನೆಪದಲ್ಲಿ ಕಾರ್ಡುಗಳನ್ನು ರದ್ದು ಮಾಡಬೇಡಿ, ಥಂಬ್ ಸ್ಕಾ?ಯನ್ ಇತ್ಯಾದಿ ನೆಪವೊಡ್ಡಿ ಅಹಾರ ತಪ್ಪಿಸಬೇಡಿ ಎಂದು ಎಚ್ಚರಿಕೆ ಮಿಶ್ರತ ಸಲಹೆ ಕೊಟ್ಟರು.
ಚೀಲೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಕೆಲವು ಗ್ರಾಮಗಳು ಪಡಿತರ ಪಡೆಯಲು 5-6 ಕಿಮೀ ಕ್ರಮಿಸಿ ಬರಬೇಕಾಗಿದೆ. ಅಧಿಕಾರಿಗಳೇ ಸ್ವತಃ ಆ ಗ್ರಾಮಗಳಿಗೆ ಪಡಿತರ ಕಳುಹಿಸುವ ವ್ಯವಸ್ಥೆ ಮಾಡಿ ಎಂದು ಸಲಹೆ ಕೊಟ್ಟರು.
ಕೃಷಿ ಮತ್ತು ತೋಟಗಾರಿಕೆ ಇಲಾಖಾಧಿಕಾರಿಗಳಿಂದ ಬಿತ್ತನೆ ಬೀಜ, ಬಿತ್ತನೆ ವ್ಯಾಪ್ತಿ, ಪೂರ್ವ ಮುಂಗಾರು ಬೆಳೆ, ಮುಂಗಾರು ಬೆಳೆ, ವಿವಿಧ ಕಾಂiÀರ್iಕ್ರಮಗಳ ಅನುಷ್ಠಾನ, ಫಲಾನುಭವಿಗಳ ಪಟ್ಟಿ ಹೀಗೆ ಹಲವು ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಂದ ಪ್ಯಾಕ್ ಹೌಸ್ ಬಗ್ಗೆ ವಿವರ ಪಡೆದರು.
ಬೇಕಾಬಿಟ್ಟಿ ರಸ್ತೆ ಕಟ್ಟಿಂಗ್! ಜಲ ಜೀವನ್ ಮಿಷನ್ ಯೋಜನೆಯಡಿ ಮನೆಗಳಿಗೆ ನಳ ಸಂಪರ್ಕದ ಬಗ್ಗೆ ಮಾಹಿತಿ ಪಡೆದುಕೊಂಡ ವೇಳೆ ಶಾಸಕ ಇಕ್ಬಾಲ್ ಒಂದಿಷ್ಟು ಗರಂ ಆದರು. ರಸ್ತೆಗಳನ್ನು ಬೇಕಾ ಬಿಟ್ಟಿ ಕತ್ತರಿಸಿದ್ದೀರಿ, ಮತ್ತೆ ಅದನ್ನು ಮುಚ್ಚುವ ಗೋಜಿಗೆ ಹೋಗಿಲ್ಲ ಎಂದು ಗುತ್ತಿಗೆದಾರರ ವಿರುದ್ದ ಕೆಂಡಮಂಡಲರಾದರು.
ರಸ್ತೆ ಕಟ್ಟಿಂಗ್ ಮಾಡಿದ್ದು ನೀವು, ಜನ ನಮ್ಮನ್ನು ಬಾಯಿಗೆ ಬಂದ ಹಾಗೆ ಬೈಯುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು. ನಳ ಸಂಪರ್ಕದ ಜೊತೆ ಮೀಟರ್ ಅಳವಡಿಕೆಯ ವಿರುದ್ದವೂ ಕಿಡಿ ಕಾರಿದ ಅವರು ರೆವನ್ಯೂ ಗಳಿಕೆಯೇ ನಿಮ್ಮ ಮೂಲ ಉದ್ದೇಶ ಎಂದು ಹರಿಹಾಯ್ದರು.ಸಭೆಯಲ್ಲಿ ರಾಮನಗರ ತಹಶೀಲ್ದಾರ್ ತೇಜಸ್ವಿನಿ, ಹಾರೋಹಳ್ಳಿ ತಹಶೀಲ್ದಾರ್ ವಿಜಯನ್, ರಾಮನಗರ ತಾಪಂ ಇಒ ಪ್ರದೀಪ್, ಕನಕಪುರ ಇಒ ಬೈರಪ್ಪ ಸಭೆಯಲ್ಲಿ ಹಾಜರಿದ್ದರು.
Leave a Review