ನಮ್ಮ ನಡೆ ನುಡಿಗಳೇ ನಮ್ಮ ಧರ್ಮವನ್ನು ಹೇಳುತ್ತವೆ. ಅದನ್ನು ತಿಳಿದು ನಡೆಯಬೇಕು ಮತ್ತೆ ನುಡಿಯಬೇಕು ಜಾತಿಯನ್ನು ಯಾವತ್ತೂ ಕೇಳಬೇಡ, ನಡತೆ ಹಾಗೂ ಜ್ಞಾನ ಹೃದಯದ ರೆಕ್ಕೆಗಳಿದ್ದಂತೆ, ನೀನು ಜೀವಿಸು, ಬೇರೆಯವರನ್ನು ಜೀವಿಸಲು ಬಿಡು ಜೀವನದೊಳು ಯಾವ ಸ್ಥಿತಿಯು ಶಾಶ್ವತವಲ್ಲ ನಂಬಿಕೆ ಇರುವಾತನ ಬಳಿಯೊಳು ಎಲ್ಲವೂ ಇರುತ್ತದೆ.
ಮತದಿಂದ ಪಾರಾಗು ಆಧ್ಯಾತ್ಮಕ್ಕೆ ಶರಣಾಗು ಮೌಢ್ಯಕ್ಕೆ ದೂರಾಗು ವಿಜ್ಞಾನಕ್ಕೆ ಮತಿಯಾಗು ಮನುಷ್ಯ ಜಾತಿ ತಾನೊಂದು ವಲಂ ಎಂಬುದನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು ಭೌತಿಕ ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲಿ ಎಲ್ಲವನ್ನು ಭಗವತ್ ದೃಷ್ಟಿಯಿಂದ ಕಾಣುವ ಪರಿಪೂರ್ಣ ದೃಷ್ಟಿ ನಮ್ಮೆಲ್ಲರದಾಗಲೇಬೇಕು.
ಗುಡಿ ಚರ್ಚ್ ಮಸೀದಿಗಳ ಬಿಟ್ಟು ಹೊರಬನ್ನಿ ಮನುಜಮತವಾಗಬೇಕು, ಪಥವಿಶ್ವಪಥವಾಗಬೇಕು ಮನುಷ್ಯವಿಶ್ವಮಾನವನಾಗಬೇಕೆಂದು ಸದಾಶಯವಾಗಬೇಕು.ಪ್ರತಿಯೊಂದರಲ್ಲೂ ಸೌಂದರ್ಯವಿದೆ. ಆದರೆ ಎಲ್ಲರಿಂದಲೂ ಅಂತರಂಗದಿಂದ ನೋಡಲು ಸಾಧ್ಯವಿಲ್ಲ ಗುರಿ ಸಾಧನೆಗೆ ಪೂರ್ಣ ತಯಾರಿ ಅತಿ ಮುಖ್ಯ ಜೀವನ ಸುಧೀರ್ಘವಾಗುವುದಕ್ಕಿಂತ ಮಹಾನ್ ಆಗಿರುವುದು ಶ್ರೇಷ್ಠವಾಗಿರುತ್ತದೆ. ಸಮರ್ಥಶಾಲಿಗಿಂತ ಮಹಾನ್ ವ್ಯಕ್ತಿ ತುಂಬ ವಿರಳ ಮತ್ತು ಭಿನ್ನವಾಗಿರುತ್ತಾನೆ. ಅಂಥ ವ್ಯಕ್ತಿತ್ವದ ವ್ಯಕ್ತಿಗಳು ಸಮಾಜದ ಸೇವಕನಾಗುವುದಕ್ಕೆ ಸದಾ ಸಿದ್ಧನಾಗಿರುತ್ತಾನೆ.
ಯಶಸ್ಸು ಒಂದು ನಿರ್ದಿಷ್ಟ ಗಮ್ಯವಲ್ಲ ಅದೊಂದು ನಿರಂತರ ಪ್ರಯಾಣ ಹೃದಯ ವೈಶಾಲ್ಯವೇ ಉನ್ನತಿಯ ಮಾರ್ಗ ಹರಿಯುವ ನೀರು ಎಂದು ಹಳಸಿ ಹೋಗುವುದಿಲ್ಲ. ಹೀಗಾಗಿ ನಾವು ಅದರಲ್ಲಿ ಈಜುತ್ತಾ ಯಶಸ್ಸಿನತ್ತ ಮುಂದೆ ಸಾಗುತ್ತಲೇ ಇರಬೇಕು ನಾವು ಏನನ್ನು ಪ್ರೀತಿಸುತ್ತೇವೆಯೋ ಅದರಿಂದಲೇ ರೂಪುಗೊಳ್ಳುತ್ತೇವೆ. ಮೌನ ಮತ್ತು ಮಾತು ಎರಡು ಮಹಾ ಶಕ್ತಿಗಳೇ ಮೌನ ಸಿದ್ಧಪಡಿಸುತ್ತದೆ ಮಾತು ಮಾಡಿ ತೋರಿಸುತ್ತದೆ ಮನಸ್ಸೇ ಮರಳಿ ಮನೆಗೆ ಬಾ, ಮನುಷ್ಯತ್ವಕ್ಕೆ ತಲೆಬಾಗು ಸಂಪೂರ್ಣವಾಗಿ ಶರಣಾಗು ಬೆಳದಿಂಗಳಿಗಾಗಿ ಧ್ಯಾನಿಸು ನಿನಗೆ ನೀನೇ ಬೆಳಕಾಗು.
ಅರ್ಪಣಾಭಾವದಿಂದ ಸಮ್ಮಿಳಿತವಾಗು ಬದುಕಿನ ಅತಿ ದೊಡ್ಡ ಸಾಧನೆಯ ಹಿಂದೆ ಅಷ್ಟೇ ದೊಡ್ಡ ತ್ಯಾಗವೂ ಇರುತ್ತದೆ. ತ್ಯಾಗ ಮತ್ತು ಪರಿಶ್ರಮವಿಲ್ಲದೆ ಯಾವುದು ಸಿದ್ಧಸುವುದಿಲ್ಲ ‘ಮಹಾತ್ಯಾಗಕ್ಕೆ ಮಹಾ ಪ್ರತಿಫಲ’ ಬೆಳಕಿಗೋಸ್ಕರ ಸೂರ್ಯನಿಗಾಗಿಯೇ ಇನ್ಯಾವುದೋ ಮೂಲಕ್ಕಾಗಿಯೋ ಕಾಯುವುದಕ್ಕಿಂತ ನೀವು ಬೆಳಕಾಗಲು ಪ್ರಯತ್ನಿಸಿ ನೋಡಿ ನಿಮ್ಮ ಬೆಳಕಿನಲ್ಲಿ ಸೂರ್ಯ ಕಂಡಾನು.
ಗುರು ಪರಮಾತ್ಮ ರೂಪ, ಗುರು ಅಂತರ್ಸಾಕ್ಷೀ ಆಂತರ್ಯ ತಮ್ಮಯತೆಯನ್ನು ನೋಡಬಲ್ಲ ಸಕ್ಷಮ ದೃಷ್ಟಿ ಹೊಂದಿರುತ್ತಾನೆ. ಸದ್ಗುಣವೆಂಬುದು ಸುಗಂಧ ದ್ರವ್ಯವಿದ್ದಂತೆ, ಉರಿದಾಗ ಅರಿದಾಗ ಸುವಾಸನೆ ಹೆಚ್ಚು ಅದು ಲೋಕಕ್ಕೆ ಅರಿವಾಗುವುದು ಆಧ್ಯಾತ್ಮದೆÀಡೆಗೆ ನಾವು ನಡೆದಾಗ ಮಾತ್ರ ಸಾಧ್ಯ. ಅದನ್ನು ಜನರು ತಪಸ್ಸು ಸಂಕಲ್ಪ ಎನ್ನುವರು.
ಅಂತಃಶುದ್ಧಿಯಿಲ್ಲದೆ ಯಾವುದು ಚಿರಸ್ಥಾಯಿ ಅಲ್ಲ ಬರಿಯ ಕೈಯಲ್ಲಿ ಇಲ್ಲಿಗೆ ಬಂದೆ ಬರಿಯ ಕೈಯಲ್ಲಿ ಇಲ್ಲಿಂದ ಹೋಗುವೆ ಒಬ್ಬ ಮನುಷ್ಯನ ಹಿರಿಮೆ ಎಲ್ಲಾ ದಿಕ್ಕುಗಳಲ್ಲಿಯೂ ಪಸರಿಸುತ್ತದೆ. ಸಮುದ್ರಕ್ಕಿಂತ ಆಕಾಶಕ್ಕಿಂತ ದೊಡ್ಡ ವಸ್ತುವೊಂದಿದೆ ಅದು ಮನುಷ್ಯನ ಆತ್ಮ. ಬದುಕನ್ನು ಪ್ರೀತಿಸುತ್ತಾ ಸಾಗಬೇಕು ಪ್ರೇಮ ಎಂಬುದು ತನ್ನಲ್ಲಿ ಇನ್ನೊಬ್ಬರನ್ನು, ಇನ್ನೊಬ್ಬರಲ್ಲಿ ತನ್ನನ್ನು ಕಾಣುವ ಸುಂದರತೆ.
ಉತ್ತಮ ಶಿಕ್ಷಕರೆಂದರೆ ಯಾವ ಶಿಷ್ಯ ಗುರುವನ್ನು ಮೀರಿಸುತ್ತಾನೋ ಅವನೇ ಮುಂದೆ ಒಳ್ಳೆಯ ಗುರುವಾಗುವಂತೆ ಗಂಧ ತೇಯುವಂತೆ ಮಾಡಿ ಸದಾ ಗುರು ಶಿಷ್ಯರು ಒಂದೇ ಆತ್ಮ ಎನ್ನುವಂತ ಪೂಜನೀಯ ಆರಾಧನೆಯ ಪೂರ್ಣತೆ ಸಾಕಾರ ಮೂರ್ತಿಯನ್ನಾಗಿ ಮಾಡುವುದು ಅದುವೇ ‘ಶಿಶುನಾಳ ಶರೀಫ ಮತ್ತು ಗೋವಿಂದ ಭಟ್ಟರ’ ಸಮತಾಭಾವದ ಆಧ್ಯಾತ್ಮದ ಅರಿವಿನ ಸಮಾಗಮ-ಜ್ಞಾನದ ಮಹಾಸಾಗರ.
ಶರೀಫರು ಕಳೆದ ಶತಮಾನದಲ್ಲಿ ಆಗಿಹೋದ ಹಿರಿಯ ಅನುಭವಿಗಳಲ್ಲಿ ಪ್ರಮುಖರು ಅವರು ಜನಿಸಿದ್ದು 1819 ರಲ್ಲಿ ಮಾರ್ಚ್ 7ನೇ ತಾರೀಖು ಧಾರವಾಡ ಜಿಲ್ಲೆಯ ಶಿಶುವಿನಹಾಳ ಎಂಬ ಪುಟ್ಟ ಕುಗ್ರಾಮದಲ್ಲಿ ತಂದೆ ಇಮಾಮ್ ಸಾಹೇಬ ತಾಯಿ ಹಜ್ಜುಮಾ ಹೆಂಡತಿ ಫಾತಿಮಾ ಬೇಗಮ್ ಇಮಾಮ್ರು ಹಿಂದುಗಳ ಶಾಸ್ತ್ರ , ಜ್ಯೋತಿಷ್ಯ , ಮಂತ್ರ , ತಂತ್ರಗಳ ಬಗ್ಗೆ ತಿಳುವಳಿಕೆ ಹೊಂದಿದವರು.
ಅದ್ಭುತ ವಾಗ್ಮಿಗಳು ಯೋಗ ಸಂಪನ್ನರೆಂತಲೂ ಹೆಸರಾಗಿದ್ದ ಹಜರೇಶಾ ಖಾದರಿ ಇಮಾಮ್ರ ಗುರು, ಶರೀಫರಿಗೆ ತಂದೆ ರಾಮಾಯಣ, ಮಹಾಭಾರತ, ಸಂತರ ಶಿವಶರಣರ ವ್ಯಕ್ತಿತ್ವದ ಪರಿಚಯವನ್ನು ಬಾಲ್ಯದಲ್ಲೇ ಕನ್ನಡ ಕಲಿಸುವುದರ ಜೊತೆಯಲ್ಲಿ ಕಿವಿ ಮನಸ್ಸುಗಳಿಗೆ ತುಂಬಿದರು ಅಷ್ಟೇ ಅಲ್ಲದೆ ಶರೀಫರನ್ನು ಗೋವಿಂದ ಭಟ್ ಎಂಬ ವಿಲಕ್ಷಣ ಬ್ರಾಹ್ಮಣನ ಮಡಿಲಿಗೆ ಹಾಕಿದರು.
ಕಳಸದ ಗೋವಿಂದ ಭಟ್ಟರು ಒಬ್ಬ ಸ್ಮಾರ್ತಶಾಕ್ತೇಯ ಬ್ರಾಹ್ಮಣರು ಆಸೆ ಪಟ್ಟು ಬಂದ ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸುವುದು ಅವರ ವೃತ್ತಿ, ಬ್ರಾಹ್ಮಣರಾಗಿದ್ದರು, ಗೋವಿಂದ ಭಟ್ಟರು ಮಡಿ, ಆಚಾರಗಳ ಪರಲು ಹರಿದುಕೊಂಡಿದ್ದರು. ಲೌಖಿಕ ಸಂಗತಿಗಳಿಗೆ ಬೆನ್ನು ಹಾಕಿ ಸದಾ ಬ್ರಹ್ಮನಂದದ ಅಮಲಿನಲ್ಲಿ ಇರುತ್ತಿದ್ದವರು. “ಸೆರೆ ಕುಡೀತಾನ ಗಾಂಜಾ ಸೇದುತಾನ ಕುಡುಕರನ್ನು ಕಟ್ಟಿಕೊಂಡು ಪಿರಿ ಪಿರಿ ತಿರುಗುತಾನ” ಎಂದು ಜನ ಆಡಿಕೊಳ್ಳುತ್ತಿದ್ದರು ಅವರನ್ನು ಬಲ್ಲವರು ತಪಸ್ವಿ , ಮಹಾಜ್ಞಾನಿ, ಉದಾರ ಮನಸ್ಸು, ಜನಹಿತಕ್ಕೆ ಸದಾ ಮುಂದಾಗುತ್ತಿರುವುದನ್ನು ಗಮನಿಸಿ ಗೋವಿಂದ ಭಟ್ಟರ ಅಗಾಧ ವಾಕ್ ಶಕ್ತಿಗೆ ಮೆಚ್ಚಿ ಬ್ರಿಟಿಷ್ ಸರ್ಕಾರ ಅವರಿಗೆ ಬಹುಮಾನದ ರೂಪವಾಗಿ ನಾಲ್ಕು ಕೂರಿಗೆ ಹೊಲ ನೀಡಿದ್ದರಂತೆ ಈಗಲೂ ಅದು ‘ಮಾನ್ಯ’ದ ಹೊಲ ಅಂತ ಹೆಸರಾಗಿದೆ.
ಗುರು ಶಿಷ್ಯನಿಗಾಗಿ ತಡಕಾಡುತ್ತಿದ್ದರು ಅಷ್ಟರಲ್ಲೇ ಇಮಾನ್ ಸಾಹೇಬ ಮಗನನ್ನು ಕಾಲ ಮೇಲೆ ಹಾಕಿದರು.ಭಟ್ಟರು ಶಿಷ್ಯನನ್ನು ಪರೀಕ್ಷಿಸಲು ‘ಲೋ ಶರೀಫ ನಿಮ್ಮಪ್ಪ ಯಾರೋ? ಎಂದರು “ಇನ್ಯಾರು ಗುರುಗಳೇ ನಿಮ್ಮಪ್ಪನೇ ನಮ್ಮಪ್ಪ” ಎಂದರಂತೆ ಭಟ್ಟರು ಹಿಗ್ಗಿನಿಂದ “ಇಮಾಮ್ ಭೂಮಿ ಕಸು ಅದ ಬೀಜ ನಾಟತದ. ಹುಡುಗನ್ನ ನನ್ನ ಉಡಿಲಿ ಹಾಕಿ ಬಿಡು ಇಂದಿನಿಂದ ಇವ ನಮ್ಮ ಮಗ ಎಂದು ಎಲ್ಲರಿಗೂ ಶರೀಫರನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡು ತತ್ವ ಪದ ಕಿವಿಯಲ್ಲಿ ಸುಗ್ಗಿಯಾಗಿ ಸುರಿಸಿದ್ದರು ಅದರ ಫಲಶೃತಿ
ಗುಡಿಯ ನೋಡಿರಣ್ಣ
ದೇಹದ ಗುಡಿಯ ನೋಡಿರಣ್ಣ
ನಡಿಯೋ ದೇವರ ಚಾಕರಿಗೆ
ಮುಕ್ತಿ ಖಾದರ ಲಿಂಗ ಸಂತ ಶರೀಫ
ಅಳಬೇಡ ತಂಗಿ ಅಳಬೇಡ
ಕೊಡಗಾನ ಕೋಳಿ ನುಂಗಿತ್ತಾ
ಸೋರುತಿಹುದು ಮನೆಯ ಮಾಳಿಗೆ… ಅಜ್ಞಾನದಿಂದ
ತರವಲ್ಲತಗಿ ನಿನ್ನ ತಂಬೂರಿ ಬರದೇ ಬಾರಿಸದಿರು ತಂಬೂರಿ…
ಸ್ನೇಹ ಮಾಡಬೇಕೆಂತವಳ… ಬಂದಳೋ ಮಂದಿರ ಬಿಟ್ಟು…
ಹಮ್ ಹೋ ದೇಖಾ…
ಮೋಹದ ಹೆಂಡತಿ…
ಜನಿವಾರವ ಸದ್ಗುರುನಾಥ್
ಕೂಕೂಎನ್ನುತ್ತಿದೆ ಬೆಳೆವ…
ಸವಲೊಂದು…
ಫೇತಹ ಮತ್ತು ಪೂಜಾ ಈ ಮಠದಲ್ಲಿ ನಡೆಯುತ್ತದೆ ಅನುಭವಿಗಳು ಮನುಷ್ಯ ಸಮಾಜವನ್ನು ಹೆಚ್ಚು ಹತ್ತಿರದಿಂದ ಕಂಡವರು ಅಷ್ಟೇ ಅಲ್ಲದೆ ಅದರ ನಡುವೆಯೇ ಬೆಳೆದು ನಿಂತವರು. 1819 ಮಾರ್ಚ್ 7 2018 ಮಾರ್ಚ್ 7 ಅಂದರೆ ಸುಮಾರು 205 ವರ್ಷಗಳು ನಮ್ಮೊಂದಿಗೆ ಶರೀಫರ ಸತ್ಯದರ್ಶನ, ಆತ್ಮಶುದ್ಧೀಕರಣ, ಭಾವನಿರ್ಭರತೆಯೂ, ರೂಪಕ, ಉಪಮೇ, ಅರ್ಥಾಲಂಕಾರ, ಉಮಕಾನುಪ್ರಾಸ ಶಯ್ಯಗಳು ಬಹುರಮ್ಯವಾಗಿವೆ, ಈ ಹಾಡು ಕೇಳಿ ತಳದೂಗದವರಿಲ್ಲ ಸಂತ ಶರೀಫರ ಅಜ್ಜ ಎಂದೆಂದಿಗೂ ಜೀವಂತ ಸಾಕ್ಷಾತ್ ದೇವತೆಯನ್ನೇ ಕರೆ ತಂದ ಮುಗ್ಧ.