ಚಿಂತಾಮಣಿ: ರಾಜ್ಯದ ಹಲವಾರು ದರ್ಗಾಗಳಲ್ಲಿ ಬಹಳ ಹೆಚ್ಚು ಪ್ರಖ್ಯಾತಿ ಪಡೆದಿರುವ ಮುರುಗಮಲ್ಲ ಮತ್ತು ನಿಮ್ಮಕಾಯಲಹಳ್ಳಿ ದರ್ಗಾಗೆ ಅಪಾರ ಸಂಖ್ಯೆಯಲ್ಲಿ ಹಿಂದೂ ಮುಸ್ಲಿಂ ಬಾಂಧವರು ಬಂದು ತಮಗೆ ಇರುವ ತೊಂದರೆಗಳು ನಿವಾರಣೆಯಾಗಲಿ ಎಂದು ನಂಬಿಕೆ ಇಟ್ಟು ನಿವಾರಣೆಗಳನ್ನು ಬಗೆಹರಿಸಿಕೊಂಡು ಹೋಗುತ್ತಾರೆ.
ಈ ಎರಡು ದರ್ಗಾಗಳು ಸುಮಾರು ನೂರಾರು ವರ್ಷಗಳ ಇತಿಹಾಸವುಳ್ಳ ದರ್ಗಾಗಳು ಆಗಿದ್ದು ಎರಡು ದರ್ಗಾಗಳನ್ನು ಉತ್ತಮ ದರ್ಜೆಗೆ ಏರಿಸಲು ಮೊದಲನೇ ಹಂತದ ವಿನ್ಯಾಸವನ್ನು ಪೂರ್ಣಗೊಳಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ.ಸುಧಾಕರ್ ಅವರು ಹೇಳಿದರು
ತಾಲ್ಲೂಕಿನ ಮುರುಗಮಲ್ಲ ಹೋಬಳಿ ನಂದಿಗಾನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ನಿಮ್ಮಕಾಯಲಹಳ್ಳಿ ಗ್ರಾಮದಲ್ಲಿರುವ ಹಜರತ್ ಸೈಯದ್ ಜಲಾಲ್ ಖಾಕಿ(ಞhಚಿಞi)ಷಾ ಮೌಲಾ ಬಾಬಾ ದರ್ಗಾ ಉರುಸ್ ಪ್ರಯುಕ್ತ ದರ್ಗಾ ಗೆ ಬೇಟಿ ನೀಡಿದರು ಈ ಸಂದರ್ಭದಲ್ಲಿ ದರ್ಗಾ ಕಮಿಟಿ ಮುಜಾವರಗಳು ಗ್ರಾಮಸ್ಥರಿಂದ ಅದ್ದೂರಿಯಾಗಿ ಸಚಿವರಿಗೆ ಸ್ವಾಗತ ಕೋರಿದರು.
ನಂತರ ಮಾತನಾಡಿದ ಸಚಿವರು ವಿಸ್ತೃತವಾಗಿ ಮುರುಗಮಲ್ಲ ಮತ್ತು ನಿಮ್ಮಕಾಯಲಹಳ್ಳಿ ದರ್ಗಾ ಅಭಿವೃದ್ಧಿ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಎಂದ ಅವರು ನಿಮ್ಮಕಾಯಲಹಳ್ಳಿ ದರ್ಗಾ ಗೆ ಬರುವ ಭಕ್ತಾದಿಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಂಬಂಧಪಟ್ಟ ವಕ್ಫ್ ಸಚಿವರೊಂದಿಗೆ ಎಲ್ಲಾ ರೀತಿಯ ಮಾತು ಕಥೆಗಳು ನಡೆದಿವೆ ಎಂದು ಹೇಳಿದರು.
ಬಿಜೆಪಿ ನಾಯಕರು ನಡೆಸಿರುವ ಬರ ಅಧ್ಯಯನ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಬಿಜೆಪಿ ಅವರಿಗೆ ಕುಣಿಯಕ್ಕೆ ಬಾರದಂತೆ ಇರುವವರಿಗೆ ನೆಲ ಡೊಂಕು ಎಂಬಂತೆ ಅವರು ಹತಾಶರಾಗಿದ್ದಾರೆ.ಎಲ್ಲಾ ರೀತಿಯಲ್ಲಿ ಬಹಳ ವಿಸ್ಕೃತವಾಗಿ ಕಂದಾಯ ಇಲಾಖೆಯಿಂದ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ರವರು ಬರ ಅಧ್ಯಯನವನ್ನು ನಿರ್ವಹಿಸಿದ್ದಾರೆ.ಕೇಂದ್ರ ಸರ್ಕಾರದ ನಿಯಮಗಳಿಂದ ರಾಜ್ಯಕ್ಕೆ ಬಹಳಷ್ಟು ತೊಂದರೆಗಳಾಗುತ್ತಿವೆ ಪದೇ ಪದೇ ಕಾಂಗ್ರೆಸ್ ಸರ್ಕಾರ ನಿಯಮಗಳನ್ನು ಬದಲಾವಣೆ ಮಾಡುವಂತೆ ಹೇಳುತ್ತಿದ್ದರು ಕೇಂದ್ರದಲ್ಲಿ ಇರುವ ಬಿಜೆಪಿ ಸರ್ಕಾರಕ್ಕೆ ಬದಲಾವಣೆ ತರುವ ಯೋಗ್ಯತೆ ಇಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.
ಈ ಸಂದರ್ಭದಲ್ಲಿ ದರ್ಗಾ ಅಧ್ಯಕ್ಷರಾದ ಅಮೀರ್ ಜಾನ್ ದಾದಾಪೀರ್, ಮುಖಂಡರಾದ ಸೋಮಶೇಖರರೆಡ್ಡಿ, ಮೌಲಾ ಜಿ ರಾವ್, ಕಾರ್ತಿಕ್, ವೆಂಕಟ್ ರಾಮರೆಡ್ಡಿ, ವೆಂಕಟೇಶ್, ರವೀಂದ್ರ, ಅಸ್ಲಂ, ಅಟೆಂಡರ್ ಮೆಹಬೂಬ, ದರ್ಗಾ ಮುಜಾವರಗಳಾದ ಎಸ್.ಮೌಲಾಅಲಿ, ಪ್ಯಾರೆಜಾನ್, ಮಹಬೂಬ್ ಸಾಬ್, ತಬರೇಜ್, ಶಫಿವುಲ್ಲಾ, ಸಮೀವುಲ್ಲಾ, ರಫೀಕ್, ಜಿಯಾಉಲ್ಲಾ, ತಾಜ್ ಪೀರ್, ಜಬೀ, ದರ್ಗಾ ಕಮಿಟಿ ಸದಸ್ಯರಾದ ಮುಹಮ್ಮದ್, ಇಮ್ತಿಯಾಜ್, ರಿಯಾಜ್, ಜಬೀರ್, ಶಬ್ಬೀರ್, ವಲಿಜಾನ್, ಸದ್ದಾಂ, ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಮುಖಂಡರುಗಳು ಗ್ರಾಮಸ್ಥರು ಭಾಗವಹಿಸಿದ್ದರು.