ಬೆಂಗಳೂರು: ನಾನು ಒಂದು ಸುಳ್ಳು ಹೇಳಿದ್ದು ಬಿಟ್ಟರೆ ಯಾವುದೇ ಅಪರಾಧ ಮಾಡಿಲ್ಲ ಎಂದು ಸುಜಾತ ಭಟ್ ಹೇಳಿದ್ದಾರೆ. ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ವಿಚಾರವಾಗಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನನ್ನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಆದರೆ ಆಗಲಿ. ನಾನು ಒಂದು ಸುಳ್ಳು ಹೇಳಿದ್ದು ಬಿಟ್ಟರೆ ಯಾವುದೇ ಅಪರಾಧ ಮಾಡಿಲ್ಲ. ಕೋರ್ಟ್ಅಲ್ಲಿ ವಿಚಾರಣೆಯಾಗಲಿ.ನಾನು ತಪ್ಪು ಮಾಡಿದ್ರೆ ಶಿಕ್ಷೆ ನೀಡಲಿ. ನನ್ನದು ತಪ್ಪುಅಂದರೆ ಶಿಕ್ಷೆ ಅನುಭವಿಸುತ್ತೇನೆ. ನಾನು ಒಬ್ಬಂಟಿ, ಕೋರ್ಟ್ಜೈಲಿಗೆ ಹಾಕಿದ್ರೂ ಹೋಗುತ್ತೇನೆ. ನಾನು ಎಲ್ಲಿದ್ರೂ ಒಂದೇ ಎಂದರು.
ಬುರುಡೆ ಪ್ರಕರಣದಲ್ಲಿ ನನ್ನನ್ನ ಬಲಿಪಶು ಮಾಡಿದರು. ಬುರುಡೆ ವಿಚಾರ ನನಗೆ ಗೊತ್ತೇಇರಲಿಲ್ಲ. ನನ್ನ ಸಮಸ್ಯೆ ಪರಿಹಾರ ಮಾಡುತ್ತೇವೆಅಂತ ನನ್ನ ಬಲಿಪಶು ಮಾಡಿದ್ರು. ನಾನು ಯಾರ ಋಣದಲ್ಲೂ ಇಲ್ಲ. ಎಸ್ಐಟಿ ಮುಂದೆ ನನ್ನ ಹೇಳಿಕೆ ನಾನು ಹೇಳಿದ್ದೇನೆ. ನಾನು ಕೊಟ್ಟದೂರಿನ ವಿಚಾರದಲ್ಲಿ ನನಗೆ ಹಿಂಬರಹ ಸಹ ಕೊಟ್ಟಿದ್ದಾರೆ.ಧರ್ಮಸ್ಥಳಕ್ಕೆ ಹೋಗಿ ನಾನು ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ. ನನ್ನಜೀವನ ನಡೆಸೋಕೂ ಆಗದಂತೆ ಮಾಡಿಬಿಟ್ಟರು ಎಂದುಕ ಣ್ಣೀರು ಹಾಕಿದರು.
ಚಾರ್ಜ್ ಶೀಟ್ ಸಲ್ಲಿಕೆಯಾಗಲಿ.ಕೋರ್ಟ್ಗೆ ವಿಚಾರಣೆಗೂ ಹಾಜರಾಗುತ್ತೇನೆ. ಲಕ್ಷಾಂತರಜನ ಕ್ಷೇತ್ರಕ್ಕೆ ಬರುತ್ತಾರೆ. ಕ್ಷೇತ್ರದಲ್ಲಿ ಆತ್ಮಹತ್ಯೆಗಳು ಆಗಿರುತ್ತವೆ. ಧರ್ಮಸ್ಥಳಕ್ಕೆ ಯಾರು ಬರ್ತಾರೆ, ಹೋಗುತ್ತಾರೆಎಂದು ನೋಡೋಕೆ ವಿರೇಂದ್ರ ಹೆಗ್ಗಡೆಯವರು ಏನಾದ್ರೂ ಗಾರ್ಡಾ? ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ಎಸ್ಐ ಹಿಂಬರಹ ಕೊಟ್ಟಿದ್ದಾರೆ. ಆದರೂಕೋರ್ಟ್ ನೋಟಿಸ್ ನೀಡಿದರೆ ವಿಚಾರಣೆಗೆ ಹೋಗುತ್ತೇನೆಎಂದು ತಿಳಿಸಿದರು.



