ಬಿಗ್ ಬಾಸ್ ಸೀಸನ್ -19ರ ಕಿರೀಟ ಮುಡಿಗೇರಿಸಿಕೊಂಡ ಜನಪ್ರಿಯ ನಟ ಗೌರವ್ ಖನ್ನಾ ಈಗ ಸುದ್ದಿಯಲ್ಲಿದ್ದಾರೆ. ಕಾರ್ಯಕ್ರಮ ಮುಗಿದು ಹಲವು ದಿನಗಳಾದರೂ ಅವರಿಗೆ ಸಿಗಬೇಕಾದ ಬಹುಮಾನದ ಮೊತ್ತ ಇನ್ನೂ ಕೈಸೇರಿಲ್ಲವಂತೆ. ಈ ಬಗ್ಗೆ ಸ್ವತಃ ಗೌರವ್ ಅವರೇ ತಮ್ಮ ವ್ಲಾಗ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
ರಿಯಾಲಿಟಿ ಶೋ ಗೆದ್ದ ನಂತರ ಗೌರವ್ ಖನ್ನಾ ಅವರ ಜನಪ್ರಿಯತೆ ಗಗನಕ್ಕೇರಿದೆ. ಸದಾ ಒಂದಿಲ್ಲೊAದು ವಿಚಾರಕ್ಕೆ ಲೈಮ್ಲೈಟ್ಲ್ಲಿರುವ ಈ ನಟ, ಇತ್ತೀಚೆಗೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಅಭಿಮಾನಿಗಳ ಜೊತೆ ಸಂವಾದ ನಡೆಸಿದರು. ಈ ವೇಳೆ ಬಿಗ್ ಬಾಸ್ ಗೆಲುವಿನ ನಂತರದ ಜೀವನದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ವಿಶೇಷವಾಗಿ ‘ಅನುಪಮಾ’ ಧಾರಾವಾಹಿಯ ಅಭಿಮಾನಿಗಳು ಗೌರವ್ ಅವರನ್ನು ಮತ್ತೆ ಪರದೆಯ ಮೇಲೆ ನೋಡಲು ಕಾಯುತ್ತಿದ್ದಾರೆ. ಬಿಗ್ ಬಾಸ್ ವಿಜೇತರಾದ ಮೇಲೆ ಅವರ ಮುಂದಿನ ಪ್ಲಾನ್ ಏನು? ಅವರಿಗೆ ಸಿಕ್ಕ ಬಹುಮಾನಗಳ ಕಥೆಯೇನು? ಎಂಬುದಕ್ಕೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
ಬಿಗ್ ಬಾಸ್ ಗೆದ್ದವರಿಗೆ ಬೃಹತ್ ಮೊತ್ತದ ನಗದು ಮತ್ತು ಐಷಾರಾಮಿ ಕಾರು ಸಿಗುವುದು ವಾಡಿಕೆ. ಗೌರವ್ ಖನ್ನಾ ಅವರಿಗೂ 50 ಲಕ್ಷ ರೂಪಾಯಿ ಹಣ ಮತ್ತು ಕಾರು ಸಿಗಬೇಕಿತ್ತು. ಆದರೆ, ವ್ಲಾಗ್ನಲ್ಲಿ ಅಭಿಮಾನಿಯೊಬ್ಬರು ಈ ಬಗ್ಗೆ ಕೇಳಿದಾಗ ಗೌರವ್ ಅಚ್ಚರಿಯ ಉತ್ತರ ನೀಡಿದ್ದಾರೆ.
“ನನಗೆ ಇನ್ನೂ ಆ ಬಹುಮಾನಗಳು ತಲುಪಿಲ್ಲ” ಎಂದು ಗೌರವ್ ಖನ್ನಾ ನೇರವಾಗಿ ಹೇಳಿದ್ದಾರೆ. ಸಾಮಾನ್ಯವಾಗಿ ಶೋ ಮುಗಿದ ಕೆಲವು ತಿಂಗಳ ನಂತರ ಈ ಪ್ರಕ್ರಿಯೆ ನಡೆಯುತ್ತದೆ. ಆದರೂ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಬೇಗನೆ ಬಹುಮಾನ ಸಿಗಲಿ ಎಂದು ಹಾರೈಸುತ್ತಿದ್ದಾರೆ. ಗೌರವ್ ಖನ್ನಾ ದಶಕಗಳಿಂದ ಹಿಂದಿ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ‘ಅನುಪಮಾ’ ಧಾರಾವಾಹಿಯ ಅನುಜ್ ಕಪಾಡಿಯಾ ಪಾತ್ರ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಆದರೆ ಬಿಗ್ ಬಾಸ್ ಅವರ ಜೀವನವನ್ನೇ ಬದಲಿಸಿದೆ ಎಂದು ಅವರು ಹೇಳುತ್ತಾರೆ. ಮೊದಲು ಜನರು ಅವರನ್ನು ಅಬೀರ್ ಅಥವಾ ಅನುಜ್ ಎಂದು ಕರೆಯುತ್ತಿದ್ದರು. ಆದರೆ ಈಗ ದುಬೈಗೆ ಹೋದರೂ ಜನರು ‘ಜಿಕೆ’ ಅಥವಾ ‘ಗೌರವ್’ ಎಂದು ಗುರುತಿಸುತ್ತಿದ್ದಾರಂತೆ. ಪಾತ್ರಕ್ಕಿಂತ ಹೆಚ್ಚಾಗಿ ತನ್ನ ವ್ಯಕ್ತಿತ್ವಕ್ಕೆ ಸಿಕ್ಕ ಈ ಮನ್ನಣೆ ಗೌರವ್ ಅವರಿಗೆ ತುಂಬಾನೇ ಖುಷಿ ಕೊಟ್ಟಿದೆ.
ಇನ್ನು ನನಗೆ ಬಿಗ್ಬಾಸ್ ಶೋ ಗೆದ್ದ ಬಹುಮಾನದ ಹಣ ಬಂದಿಲ್ಲ



