ನೆಲಮಂಗಲ: ಜೆಡಿಎಸ್ ಬಿಜೆಪಿ ಕಾರ್ಯಕರ್ತರು ಒಂದೇ ಕುಟುಂಬದಂತೆ ಒಗ್ಗಟ್ಟಾಗಿ ಇರಬೇಕೆಂದು ನಮ್ಮ ಊರಿನ ದೇವಸ್ಥಾನದಲ್ಲಿ ಕುಳಿತು ಮಾತನಾಡಿ
ದ್ದೇವೆ ಹೊರತು ಚುನಾವಣೆ ವಿಚಾರವಾಗಿ ಯಾವುದೇ ಆಣೇ ಪ್ರಮಾಣವಾಗಲಿ ಮಾಡಿಸಿಲ್ಲ ಮತ ಹಾಕುವುದು ಅವರವರ ವೈಯಕ್ತಿಕ ಹಕ್ಕು ಎಂದು ಜೆಡಿಎಸ್ ಮುಖಂಡ ಪಾಪೇಗೌಡ ತಿಳಿಸಿದರು.
ತಾಲೂಕಿನ ಕೆಂಪ್ಪಲಿಂಗನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಊರಿನಲ್ಲಿ ಐದು ಬುಡಕಟ್ಟು ಜನಾಂಗಗಳಿದ್ದು ಎಲ್ಲರೂ ಒಂದೇ ಕುಟುಂಬದಂತೆ ಇದ್ದೇವೆ ರಾಜಕೀಯ ವಿಚಾರ ಬಂದಾಗ ಗ್ರಾಮದ ಅಭಿವೃದ್ಧಿಗಾಗಿ ಎಲ್ಲರ ಒಮ್ಮತದಂತೆ ಸುಮಾರು ವರ್ಷಗಳಿಂದಲೂ ಎಲ್ಲ ಸಮುದಾಯಕ್ಕೂ ಅವಕಾಶ ಕೊಡುತ್ತ ಅವಿರೋಧ ಆಯ್ಕೆ ಮಾಡಿಕೊಂಡು ಬಂದಿರುತ್ತೇವೆ.
ನಮ್ಮ ಕಾರ್ಯಕರ್ತರೆಲ್ಲ ಒಗ್ಗಟ್ಟಾಗಿರಬೇಕೆಂದು ದೇವಸ್ಥಾನದ ಬಳಿ ಕುಳಿತು ಮಾತನಾಡಿಕೊಂಡಿದ್ದೇವೆ ಹೊರತು ಜನಗಳಿಗೆ ನಮಗೇ ಮತ ಹಾಕಬೇಕೆಂದು ಯಾವುದೇ ಆಣೆ ಪ್ರಮಾಣ ಮಾಡಿಸಿಲ್ಲ ಆದರೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ಪಕ್ಷದಿಂದ ಕಾಂಗ್ರೆಸ್ಗೆ ಸೇರ್ಪಡೆಯಾದ ಕೆಲವು ಕಾರ್ಯಕರ್ತ ಹಾಗೂ ಮುಖಂಡರು ಚುನಾವಣೆ ಪ್ರಚಾರಕ್ಕೆ ಬಂದಂತ ಸಂದರ್ಭದಲ್ಲಿ ಜನಗಳಿಗೆ ದೇವರ ಮೇಲೆ ಆಣೆ ಪ್ರಮಾಣ ಮಾಡಿಸಿ ಭಯಪಡಿಸುತ್ತಿದ್ದಾರೆ.
ಯಾರು ಕೂಡ ಆಣೆ ಪ್ರಮಾಣ ಮಾಡಬೇಡಿ ಎಂದು ನಮ್ಮ ಮೇಲೆ ಅಪಾಪ್ರಚಾರ ಮಾಡುತ್ತಿದ್ದು ನಮ್ಮ ಊರಿನ ಒಗ್ಗಟ್ಟನ್ನು ವಿಭಜನೆ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕಿಡಿಕಾರಿದರು. ಸಂದರ್ಭದಲ್ಲಿ ರಂಗಭೂಮಿ ಕಲಾವಿದ ಸಂಘದ ಅಧ್ಯಕ್ಷ ಕೆ ವಿ ರುದ್ರಪ್ಪ,. ಪಾಪೇಗೌಡ, ರಂಗನಾಥ್, ವಿಷ್ಣು ಹಾಗೂ ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು.