ನೆಲಮಂಗಲ: ಚುನಾವಣೆಗಳಲ್ಲಿ ಮತದಾರರ ದೃಷ್ಟಿಕೋನ ಬೇರೆ ಬೇರೆ ಇರುತ್ತದೆ, ಲೋಕಸಭಾ ಚುನಾವಣೆಯಲ್ಲಿ ಮತದಾರರು ನೀಡಿದ ಜನಾದೇಶವನ್ನು ಸ್ವೀಕರಿಸುತ್ತೇವೆ. ಜನಾದೇಶಕ್ಕೆ ಯಾರು ದೊಡ್ಡವರಲ್ಲ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು ನಗರದ ಅರಿಶಿನಕುಂಟೆಯ ಹಾಲಿಡೇ ಫಾರ್ಮ್ ನಲ್ಲಿ ಕಾಂಗ್ರೆಸ್ನಿಂದ ಆಯೋಜಿಸಿದ್ದ ಶಾಸಕರ ಪತ್ರಿಕಾಗೋಷಿ ಯನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಶಾಸಕನಾಗಲು 32ಸಾವಿರಕ್ಕೂ ಹೆಚ್ಚು ಸಾವಿರ ಅಂತರದಲ್ಲಿ ಜನರು ಆಶೀರ್ವಾದ ಮಾಡಿದರು. ಲೋಕಸಭಾ ಚುನಾವಣೆಯಲ್ಲಿ ಡಾ.ಕೆ ಸುಧಾಕರ್ ಸಂಸದರಾಗಲು 33 ಸಾವಿರಕ್ಕೂ ಹೆಚ್ಚು ಅಂತರದಲ್ಲಿ ಜನರು ಆಶೀರ್ವಾದ ಮಾಡಿದ್ದಾರೆ. ರಾಜ್ಯ, ಕೇಂದ್ರ, ಸ್ಥಳೀಯ ಚುನಾವಣೆಯಲ್ಲಿ ಒಂದೊಂದು ರೀತಿಯ ಭಾವನೆಗಳು ಮತದಾರರಲ್ಲಿ ಇರುತ್ತೆ.
ಮುಂದಿನ ನಾಲ್ಕು ವರ್ಷ ಕ್ಷೇತ್ರದ ಜನರಿಗಾಗಿ ಪ್ರಾಮಾಣಿಕ ಸೇವೆ ಮಾಡುತ್ತೇನೆ. ಡಾ.ಕೆ ಸುಧಾಕರ್ ಅವರು ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಯೋಜನೆಗಳು, ಅನುದಾನ ತಂದರೆ ಜತೆಯಾಗಿ ಅಭಿವೃದ್ಧಿ ಮಾಡುತ್ತೇವೆ. ಚುನಾವಣೆಯಲ್ಲಿ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಬಹಳಷ್ಟು ಶ್ರಮಿಸಿದ್ದು ಕಾಂಗ್ರೆಸ್ ಪಕ್ಷಕ್ಕೆ 68, ಸಾವಿರ ಮತಗಳನ್ನು ನೀಡಿದ ಕ್ಷೆತ್ರದ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್ ಗೌಡ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಟಿ. ನಾಗರಾಜು, ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾರಾಯಣ ಗೌಡ, ನರಸಿಂಹಮೂರ್ತಿ, ಚಂದ್ರಕುಮಾರ್, ಚಿಕ್ಕಹನು ಮೇಗೌಡ, ಕೆಂಪರಾಜು, ಲಕ್ಷ್ಮೀನಾರಾಯಣ್, ಬಿ.ಟಿ ರಾಮಚಂದ್ರ, ಬೈರೇಗೌಡ, ಜಗದೀಶ್, ರಂಗನಾಥ್, ಮುಖಂಡರಾದ ಎಂ.ಕೆ ನಾಗ ರಾಜು, ಹಸಿರುವಳ್ಳಿಕುಮಾರ್, ಹನುಮಂತೇ ಗೌಡ, ಅಂಜನಮೂರ್ತಿ, ಸೇರಿದಂತೆ ಮತ್ತಿತರರಿದ್ದರು.