![]() |
![]() |
![]() |
![]() |
![]() |
ಬೆಂಗಳೂರು: ಐಸಿಸಿ ಪುರುಷರ ಕ್ರಿಕೆಟ್ ವಿಶ್ವ ಕಪ್-2023ರ ಅಧಿಕೃತ ಪ್ರಾಯೋಜಕರಾಗಿ ಇಂಟರ್‍ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಜೊತೆ ಸತತ 8ನೇ ವರ್ಷವೂ ಪಾಲುದಾರಿಕೆ ಮುಂದುವರಿಸಿದ್ದೇವೆ ಎಂದು ನಿಸಾನ್ ಘೋಷಿಸಿದೆ. ಈ ಬಹುನಿರೀಕ್ಷಿತ ಸ್ಪರ್ಧಾವಳಿ ಭಾರತದಲ್ಲಿ ಅಕ್ಟೋಬರ್ 5ರಿಂದ ನವೆಂಬರ್ 19,2023ರವರೆಗೆ ನಡೆಯಲಿದ್ದು, ಬಿಗ್, ಬೋಲ್ಡ್, ಬ್ಯೂಟಿಫುಲ್ ನಿಸಾನ್ ಮ್ಯಾಗ್ನೈಟ್ ವಿಶ್ವ ಕಪ್‍ನ ಅಧಿಕೃತ ಕಾರ್ ಆಗಿ ಪ್ರದರ್ಶಿತಗೊಳ್ಳಲಿದೆ.
ಇಂಟರ್‍ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಜೊತೆಗಿನ ನಿರಂತರ ಪಾಲುದಾರಿಕೆಯನ್ನು ಸಂಭ್ರಮಿಸಲು ಮತ್ತು ಸ್ಮರಿಸುವ ಸಲುವಾಗಿ ಮತ್ತು ಕ್ರಿಕೆಟ್ ಹಬ್ಬದ ಸೀಸನ್ ಅನ್ನು ಅತಿ ಉತ್ಸಾಹದಿಂದ ಎದುರುಗೊಳ್ಳಲು ನಿಸಾನ್ ಮೋಟಾರ್ ಇಂಡಿಯಾ ಹೊಸ ನಿಸಾನ್ ಮ್ಯಾಗ್ನೈಟ್ ಕುರೋ ವಿಶೇಷ ಎಡಿಷನ್ ಅನ್ನು ಪರಿಚಯಿಸಿದೆ.
ಈ ಘೋಷಣೆಯ ಕುರಿತಾಗಿ ಮಾತನಾಡಿದ ನಿಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ(ಮ್ಯಾನೇಜಿಂಗ್ ಡೈರೆಕ್ಟರ್) ರಾಕೇಶ್ ಶ್ರೀವಾಸ್ತವ, ನಿಸಾನ್ ಎಲ್ಲಾ ಐಸಿಸಿ ಪಂದ್ಯಾವಳಿಗಳ ಅಧಿಕೃತ ಪಾಲುದಾರರಾಗಿರುವುದು ಸಂತೋಷ ತಂದಿದೆ ಮತ್ತು ಬಿಗ್, ಬೋಲ್ಡ್, ಬ್ಯೂಟಿಫುಲ್ ನಿಸಾನ್ ಮ್ಯಾಗ್ನೈಟ್ ಐಸಿಸಿ ಕ್ರಿಕೆಟಿ ವಿಶ್ವಕಪ್ 2023ರ ಅಧಿಕೃತ ಕಾರ್ ಆಗಿರುವುದು ಖುಷಿ ಕೊಟ್ಟಿದೆ.
8ನೇ ವರ್ಷದ ಪಾಲುದಾರಿಕೆಯ ಸ್ಮರಣೆಗೆ ನಿಸಾನ್ ಮ್ಯಾಗ್ನೈಟ್ ಕುರೋ ವಿಶೇಷ ಎಡಿಷನ್ ಪರಿಚಯಿಸುತ್ತಿರುವುದು ನಿಸಾನ್‍ಗೆ ಹೆಮ್ಮೆಯ ಕ್ಷಣವಾಗಿದೆ. ಈ ಪಂದ್ಯಾವಳಿಯಲ್ಲಿ, ವಿಶೇಷವಾಗಿ ಕ್ರಿಕೆಟ್ ಅನ್ನು ಹಬ್ಬದಂತೆ ಆಚರಿಸುವ ಭಾರತದಲ್ಲಿ ನಿಸಾನ್ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳೊಂದಿಗೆ ತಮ್ಮ ಬಂಧವನ್ನು ಬಲಪಡಿಸುವಂತೆ ಅವರ ಉತ್ಸಾಹವನ್ನು ಹೆಚ್ಚುಗೊಳಿಸಲು ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದೆ ಎನ್ನುತ್ತಾರೆ.
![]() |
![]() |
![]() |
![]() |
![]() |
Leave a Review