ದುಬೈ: ಇತ್ತೀಚೆಗಷ್ಟೇ ಐಸಿಸಿ ಪಿಚ್ ರೇಟಿಂಗ್ ಬಗ್ಗೆ ಬಹಿರಂಗವಾಗಿಯೇ ವ್ಯಂಗ್ಯ ಮಾಡಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೇಲೆ ಐಸಿಸಿ ಗರಂ ಆಗಿದೆ.
ಭಾರತ ಮತ್ತು ದ.ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಒಂದೂವರೆ ದಿನದಲ್ಲೇ ಮುಗಿದಿತ್ತು. ಇದಾದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಶರ್ಮಾ ಪಿಚ್ ಬಗ್ಗೆ ಮಾತನಾಡಿದ್ದರು.
ಈ ವೇಳೆ ಇದೇ ರೀತಿಯ ಪಿಚ್ ಭಾರತದಲ್ಲಿ ಮಾಡಿದ್ದರೆ ಎಲ್ಲರೂ ಪಿಚ್ ಸರಿ ಇಲ್ಲ ಎನ್ನುತ್ತಿದ್ದರು. ಐಸಿಸಿ ಕೂಡಾ ಭಾರತದಲ್ಲಿ ಸ್ಪಿನ್ ಪಿಚ್ ನಲ್ಲಿ ಈ ರೀತಿ ಪಂದ್ಯ ಬೇಗನೇ ಮುಗಿದರೆ ಕಳಪೆ ರೇಟಿಂಗ್ ಕೊಡುತ್ತದೆ. ಐಸಿಸಿ ಮೊದಲು ಈ ತಾರತಮ್ಯ ನೀತಿ ಬಿಡಬೇಕು ಎಂದು ಬಹಿರಂಗವಾಗಿಯೇ ಕಿಡಿ ಕಾರಿದ್ದರು.
ಇದೀಗ ರೋಹಿತ್ ಹೇಳಿಕೆ ಬಗ್ಗೆ ಗರಂ ಆಗಿರುವ ಐಸಿಸಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ರೋಹಿತ್ಗೆ ಯಾವ ರೀತಿ ಶಿಕ್ಷೆಯಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.