ಇಂಗ್ಲೆAಡ್ ತಂಡದ ವಿರುದ್ಧ ಆ್ಯಂಡರ್ಸನ್ತೆAಡೂಲ್ಕರ್ ಟ್ರೋಫಿ ೨೦೨೫ ಟೆಸ್ಟ್ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದವೇಗದ ಬೌಲರ್ ಮೊಹಮ್ಮದ್ ಸಿರಾಜ್ಅವರಿಗೆ ಇದೀಗ ಐಸಿಸಿಯ ಮಾಸಿಕಆಟಗಾರ (Pಟಚಿಥಿeಡಿ oಜಿ ಣhe moಟಿಣh)ಪ್ರಶಸ್ತಿ ಲಭಿಸಿದೆ. ಇಂಗ್ಲೆAಡ್ ಪ್ರವಾಸತೆರಳಿದ್ದ ಶುಭ್ಮನ್ ಗಿಲ್ ನಾಯಕತ್ವದಭಾರತ ತಂಡದಲ್ಲಿ ಸಿರಾಜ್ ಅವರುಅತಿ ಹೆಚ್ಚುವಿಕೆಟ್ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದರು. ಅವರ ಈ ಸಾಧನೆಗಾಗಿ ಇದೀಗ ಐಸಿಸಿ ವಿಶೇಷ ಪುರಸ್ಕಾರ ಪ್ರಕಟಿಸಿದೆ.
ಇಂಗ್ಲೆAಡ್ ವಿರುದ್ಧದ ೫ ಪಂದ್ಯಗಳ ಈ ಸರಣಿ೨-೨ ರಲ್ಲಿ ಡ್ರಾನಲ್ಲಿ ಅಂತ್ಯಗೊAಡಿತು. ಮೊಹಮ್ಮದ್ ಸಿರಾಜ್ ಅವರು ಆ ಸರಣಿಯಲ್ಲಿ ೨೩ ವಿಕೆಟ್ ಪಡೆದರು. ಓವಲ್ ನಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯ ದಲ್ಲಿ ಅವರ ಸಾಹಸದಿಂದಾಗಿ ಭಾರತ ತಂಡ ಆರು ರನ್ಗಳಿಂದ ರೋಚಕ ಜಯ ಸಾಧಿಸಿತು. ಸಿರಾಜ್ ಅವರು ಪಂದ್ಯದಲ್ಲಿ ಒAಬತ್ತು ವಿಕೆಟ್ ಪಡೆದರು. ಎರಡನೇ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ ಪಡೆದರು. ಈ ಸಾಧನೆಗಾಗಿ ಸಿರಾಜ್ಗೆ ಈ ಪ್ರಶಸ್ತಿ ಲಭಿಸಿದೆ. ಓವಲ್ ಟೆಸ್ಟ್ ನಲ್ಲಿ ಅವರ ಬೌಲಿಂಗ್ ಗೆ ಅಂಪೈರ್ ಕುಮಾರ ಧರ್ಮಸೇನ ಅವರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಸಿರಾಜ್ ಹೇಳಿದ್ದೇನು?
ಈ ವಿಚಾರವಾಗಿ ಐಸಿಸಿ ಜೊತೆ ಮಾತನಾಡಿರುವ ಸಿರಾಜ್ಅವರು “Iಅಅ ಪ್ಲೇಯರ್ಆಫ್ ದ ಮಂತ್ ಪ್ರಶಸ್ತಿಪಡೆದಿದ್ದು ವಿಶೇಷ ಗೌರವವಾಗಿದೆ.ಆ?ಯಂಡರ್ಸನ್-ತೆAಡೂಲ್ಕರ್ ಟ್ರೋಫಿ ಸ್ಮರಣೀಯ ಸರಣಿಯಾಗಿದ್ದು ಇದು ನಾನು ಆಡಿದ ಅತ್ಯಂತ ರೋಚಕ ಪಂದ್ಯಗಳಲ್ಲಿ ಒಂದಾಗಿದೆ. ಪ್ರಮುಖ ಸಂದರ್ಭಗಳಲ್ಲಿ ನಾನು ಕೊಡುಗೆ ನೀಡಲು ಸಾಧ್ಯವಾಯಿತು ಎಂದು ಹೆಮ್ಮೆ ಇದೆ.” ಎಂದುತಿಳಿಸಿದ್ದಾರೆ.
ಈ ಪ್ರಶಸ್ತಿಯನ್ನು ಗೆದ್ದ ೯ನೇ ಭಾರತೀಯ ಆಟಗಾರ ಅವರಾಗಿದ್ದಾರೆ. ಈ ಹಿಂದೆ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್, ಸ್ವಿಂಗ್ ಬೌಲರ್ ಭುವನೇಶ್ವರ್ ಕುಮಾರ್, ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಬ್ಯಾಟರ್ ಗಳಾದ ಶ್ರೇಯಸ್ ಅಯ್ಯರ್, ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್ ಮತ್ತು ವೇಗದ ಬೌಲರ್ ಜಸ್ಪಿçÃತ್ ಬುಮ್ರಾ ಅವರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಶುಭ್ಮನ್ ಗಿಲ್ ಅವರು ಅತಿ ಹೆಚ್ಚು ನಾಲ್ಕು ಬಾರಿ ಈ ಪ್ರಶಸ್ತಿ ಗೆದ್ದು ವಿಶ್ವ ದಾಖಲೆ ಮಾಡಿದ್ದಾರೆ. ಇನ್ನು ಜಸ್ಪಿçÃತ್ಬುಮ್ರಾ ಮತ್ತು ಶ್ರೇಯಸ್ ಅಯ್ಯರ್
ಅವರು ಸಹ ತಲಾ ಎರಡು ಬಾರಿ ಈಗೌರವ ಪಡೆದಿದ್ದಾರೆ. ಭಾರತದಿಂದ ಒಟ್ಟು ಒಂಬತ್ತು ಮಂದಿ ಆಟಗಾರರು ಈ ಪ್ರಶಸ್ತಿಗೆ ಭಾಜನರಾಗಿರುವುದು ಸಹ ಅಪೂರ್ವ ದಾಖಲೆಯಾಗಿದೆ.