ಐಸಿಸಿ ಅಂಡರ್-೧೯ ಕ್ರಿಕೆಟ್ ವಿಶ್ವಕಪ್ ೨೦೨೬ ಟೂರ್ನಿಯು ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಇದೀಗ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಜನವರಿ ೧೫ ರಿಂದ ಫೆಬ್ರವರಿ ೬ ರವರೆಗೆ ನಡೆಯಲಿದ್ದು ಒಟ್ಟು ೧೬ ತಂಡಗಳು ಭಾಗವಹಿಸಲಿವೆ. ಅವುಗಳನ್ನ ನಾಲ್ಕು ಬಣಗಳನ್ನು ವಿಂಗಡಿಸಲಾಗಿದ್ದು ಪ್ರತಿಯೊಂದು ಬಣದಲ್ಲೂ ನಾಲ್ಕು ತಂಡಗಳಿವೆ.
ಆಯುಷ್ ಮ್ಹಾತ್ರೆ ನೇತೃತ್ವದ ಭಾರತ ತಂಡ ಎ ಬಣದಲ್ಲಿ ಅಮೆರಿಕ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ಜೊತೆ ಸೆಣೆಸಲಿದೆ. ಜಿಂಬಾಬ್ವೆಯ ಮೂರು ಮತ್ತು ನಮೀಬಿಯಾದ ಎರಡು ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ. ಜಿಂಬಾಬ್ವೆಯಲ್ಲಿ ಹರಾರೆ ಸ್ಪೋರ್ಟ್ಸ್ ಕ್ಲಬ್ ಮತ್ತು ತಕಾಶಿಂಗಾ ಸ್ಪೋರ್ಟ್ಸ್ ಕ್ಲಬ್ ಹರಾರೆ ಹಾಗೂ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ ಬುಲಾವಾಯೊದಲ್ಲಿ ಪಂದ್ಯಗಳನ್ನು ಆಯೋಜಿಸಲಿವೆ. ಇನ್ನು ನಮೀಬಿಯಾದ ವಿಂಡ್ಹೋಕ್ ನಲ್ಲಿರುವ ನಮೀಬಿಯಾ ಕ್ರಿಕೆಟ್ ಗ್ರೌಂಡ್ ಮತ್ತು ಎಚ್ಪಿ ಓವಲ್ ಕ್ರೀಡಾಂಗಣಗಳು ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ. ವಿಶೇಷವೆಂದರೆ ಅಂಡರ್ ೧೯ ವಿಶ್ವಕಪ್ ಆತಿಥ್ಯ ವಹಿಸಿರುವ ಜಿಂಬಾಬ್ವೆ ಮತ್ತುನಮೀಬಿಯಾ ದೇಶಗಳು ೨೦೨೭ರ ಕ್ರಿಕೆಟ್
ವಿಶ್ವಕಪ್ ಅನ್ನು ಸಹ ದಕ್ಷಿಣ ಆಫ್ರಿಕಾದೊಂದಿಗೆ ಸೇರಿ ಆಯೋಜಿಸುತ್ತಿವೆ.
ಜನವರಿ ೧೫ರಂದು ಬುಲಾವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆಯರುವ ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡ ಅಮೆರಿಕವನ್ನು ಎದುರಿಸಲಿದೆ. ಫೈನಲ್ ಪಂದ್ಯವು ಪಂದ್ಯವು ಫೆಬ್ರವರಿ ೬ ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆಯಲಿದೆ. ಗುಂಪು ಹಂತದ ಪಂದ್ಯಗಳ ನಂತರ, ಸೂಪರ್ ಸಿಕ್ಸ್ ಹಂತ, ನಂತರ ಸೆಮಿ-ಫೈನಲ್ ಮತ್ತು ಅಂತಿಮ ಪಂದ್ಯಗಳು ನಡೆಯಲಿವೆ. ಭಾರತದ ಅಂಡರ್ ೧೯ ತಂಡದಲ್ಲಿ ನಾಯಕ ಆಯುಷ್ ಮಾತ್ರೆ, ೧೪ ವರ್ಷದ ಬಾಲಕ ವೈಭವ್ ಸೂರ್ಯವಂಶಿ ಅವರು ಮುಖ್ಯ ಆಕರ್ಷಣೆಯಾಗಲಿದ್ದಾರೆ.



