ಹೊಸಕೋಟೆ: ಜನಪದರು ಸಾಂಸ್ಕøತಿಕ ವೇದಿಕೆ ಆಯೋಜಿಸುವ ಪ್ರತಿ ತಿಂಗಳ ಎರಡನೇ ಶನಿವಾರದ ರಂಗಮಾಲೆ-79ರ ನಾಟಕ ಸರಣಿಯ ಅಂಗವಾಗಿ ರಂಗರಥ ಬೆಂಗಳೂರು ಪ್ರಸ್ತುತಪಡಿಸಿದ, ಆಫ್ರಿಕನ್ ಖ್ಯಾತ ನಾಟಕಕಾರ ದಾರಿಯೋ ಪೋ ರಚನೆಯ ಕೆ.ವಿ.ಅಕ್ಷರ ಅನುವಾದಿಸಿ.
ಆಸಿಫ್ ಕ್ಷತ್ರಿಯ ಮತ್ತು ಶ್ವೇತಾ ಶ್ರೀನಿವಾಸ್ರವರು ನಿರ್ದೇಶನ ಮಾಡಿದ ವೈನೋದಿಕ ನಾಟಕ “ಇದ್ದಾಗ ನಿಮ್ದು ಕದ್ದಾಗ ನಮ್ದು” ಪ್ರದರ್ಶನ ಏರ್ಪಡಿಸಲಾಗಿತ್ತು. ನಾಟಕ ಪ್ರದರ್ಶನವನ್ನು ವೇದಿಕೆ ಅಧ್ಯಕ್ಷ ಕೆ.ವಿ. ವೆಂಕಟರಮಣಪ್ಪ @ ಪಾಪಣ್ಣ ಕಾಟಂನಲ್ಲೂರು, ಉದ್ಘಾಟಿಸಿ ಮಾತನಾಡಿದ ಅವರು ಜಗತ್ತಿನ ಶ್ರೇಷ್ಠ ಲೇಖಕ ನೋಬಲ್ ವಿಜೇತ ಆಫ್ರಿಕಾದ ಹಾಗೂ ತೃತೀಯ ಜಗತ್ತಿನ ರಾಷ್ಟ್ರಗಳ ಆಧುನಿಕ ಮಧ್ಯಮ ವರ್ಗದ ಜನಸಮುದಾಯದ ಶ್ರೇಷ್ಠ ನಾಟಕಕಾರ ದಾರಿಯೊ ಪೋಇಂದಿನ ಭವಣೆಯ ಬದುಕು ಎಷ್ಟು ಅಪನಂಬಿಕೆ.
ಗೊಂದಲ. ತಲ್ಲಣಗಳಿಂದ ಕೂಡಿದೆ. ನೆಮ್ಮದಿಯ ಬಾಳು ಹೇಗೆ ಹಾಳು ಮಾಡಿದೆ ಎಂಬ ವಾಸ್ತವ ಕಾಲ ದೇಶ ಮೀರಿದೆ. ಎಂಬದನ್ನು ತೆರೆದಿಟ್ಟ ಅಪರೂಪದ ನಾಟಕ ಇದು ಎಂದರು.ಇಂತಹ ಸಾಮಾಜಿಕ ಜಾಗೃತಿ ಮೂಡಿಸುವಂತಹ ನಾಟಕಗಳನ್ನು ಆಯ್ದುಕೊಂಡು ಖ್ಯಾತ ರಂಗತಂಡಗಳಿಂದ ಅಭಿನಯಿಸಲಾಗುತ್ತಿದೆ.
ಇದರಿಂದ ಸಮಾಜದಲ್ಲಿ ಮೂಢನಂಬಿಕೆಗಳ ಬಗ್ಗೆ ತಿಳಿವಳಿಕೆ ನೀಡಿ ಸ್ವಸ್ಥ ಸಮಾಜನಿರ್ಮಾಣ ಮಾಡುವಲ್ಲಿ ರಂಗಕಲೆಯು ಪ್ರಮುಖ ಪಾತ್ರ ವಹಿಸುತ್ತಿದೆ. ನಾಟಕ ಪ್ರದರ್ಶನಗಳಿಗೆ ಬಹಳಷ್ಟು ರಂಗಾಸಕ್ತರು ಪಾಲ್ಗೊಂಡು ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಂಗರಥ ತಂಡದ ನಿರ್ದೇಶಕ ಹಿರಿಯ ರಂಗಕರ್ಮಿ ಆಸಿಫ್ ಕ್ಷತ್ರೀಯರನ್ನು ಹಾಗೂ ನಾಟಕ ಪ್ರಾಯೋಜಕ ಹಾಗೂ ಸಮಾಜ ಸೇವಕ ಬೊಮ್ಮೇನಹಳ್ಳಿ ಮುನಿರಾಜುಗೌಡರನ್ನು ಸನ್ಮಾ ನಿಸಲಾಯಿತು.ನಾಟಕವು ನೆರೆದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ವೇದಿಕೆಯ ಪದಾಧಿಕಾರಿಗಳಾದ ಸಿದ್ದೇಶ್ವರ ನನಸುಮನೆ. ಜಗದೀಶ್, ಕೆಂಗನಾಳ, ಓ. ಸುರೇಶ್, ಶಿವಕುಮಾರ್, ಅಗ್ರಹಾರ ಮುನಿರಾಜು ಇನ್ನಿತರರು ಹಾಜರಿದ್ದರು.